ಸಿಂದಗಿ: ಅರಣ್ಯ ಸಂಪತ್ತಿನ ಕೊರತೆಯಿಂದ ಕಳೆದ ಕೊವಿಡ್ ಸಂದರ್ಭದಲ್ಲಿ ಆನೇಕರು ಪ್ರಾಣವನ್ನೆ ಕಳೆದುಕೊಂಡರು ಏಕೆಂದರೆ ಪರಿಸರ ಹಾಳಾಗಿದ್ದರಿಂದ ಆಕ್ಸಿಜನ್ ಕೊರತೆ ಉಂಟಾಗುತ್ತಿದೆ. ಆಕ್ಸಿಜನ್ ಕೊರತೆಯನ್ನು ನೀಗಿಸಬೇಕಾದರೆ ಹೆಚ್ಚು ಹೆಚ್ಚು ಆಕ್ಸಿಜನ್ ಕೊಡುವಂತ ಮರಗಳನ್ನು ಬೆಳೆಸಿ ಪರಿಸರವನ್ನು ಸಂರಕ್ಷಣೆ ಮಾಡಿದ್ದಾಗ ಮಾತ್ರ ನಮ್ಮ ಜೀವಗಳನ್ನು ನಾವೇ ಉಳಿಸಿಕೊಂಡಂತಾಗುತ್ತದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ವಲಯ ಅರಣ್ಯ ಅಧಿಕಾರಿ ಪ್ರಾದೇಶಿಕ ಅರಣ್ಯ ವಲಯ ವಿಭಾಗದ ಕಾರ್ಯಾಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಹಿಂದೆ ನಮ್ಮ ಹಿರಿಯರು ಬನ್ನಿ, ಬೋಧಿ ವೃಕ್ಷ ಸೇರಿದಂತೆ ಅನೇಕ ಗಿಡಗಳನ್ನು ಬೆಳೆಸಿ ಪೂಜಿಸುತ್ತಿದ್ದರು ಅದು ಮೂಢನಂಬಿಕೆ ಎಂದು ಭಾವಿಸುತ್ತಿದ್ದೆವು ಆದರೆ ವೈಜ್ಞಾನಿಕ ಹಿನ್ನೆಲೆಯಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡುತ್ತಿರುವುದು ಸತ್ಯವಿದೆ ಅಂತೆಯೇ ಕೆಲ ಸಂದರ್ಭದಲ್ಲಿ ಕೆಲ ಮರಗಳನ್ನು ಪೂಜಿಸುತ್ತಿದ್ದಾರೆ ಅದನ್ನು ಇಂದಿನ ಪೀಳಿಗೆ ಮೂಢನಂಬಿಕೆ ಎಂದು ಭಾವಿಸಿದ್ದರಿಂದ ಕಳೆದ ಕೊವಿಡ್ ಸಂದರ್ಭದಲ್ಲಿ ಅನುಭವಿಸಿದ್ದೇವೆ ಅಲ್ಲದೆ ಇತ್ತಿತ್ತಲಾಗಿ ಅರಣ್ಯ ಇಲಾಖೆ ಚುರುಕಾಗಿ ಕಾರ್ಯ ನಿರ್ವಹಿಸುತ್ತಿದೆ ಜೊತೆಗೆ ನಾವೆಲ್ಲರು ಸಸ್ಯ ಸಂಕುಲವನ್ನು ಬೆಳೆಸುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕಾಗಿದೆ ಎಂದರು.
ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದರು ಕೂಡಾ ಬರೀ ಅರಣ್ಯ ಇಲಾಖೆಯ ಕಡೆ ಬೆಟ್ಟು ಮಾಡುತ್ತಿದ್ದೇವೆ. ಅದಕ್ಕೆ ಕೊವಿಡ್ ಮಹಾಮಾರಿ ನಮಗೆಲ್ಲರಿಗೂ ಆಕ್ಸಿಜನ್ ಕೊರತೆ ಎತ್ತಿ ತೋರಿಸಿದ್ದರಿಂದ ಪರಿಸರ ಉಳಿವಿಗೆ ಹೆಚ್ಚು ಕಾರ್ಯಗಳು ಅರಣ್ಯ ಇಲಾಖೆಯಿಂದ ನಡೆಯುತ್ತಿವೆ ನಾವು ಕೂಡಾ ಜವಾಬ್ದಾರಿಯುತವಾಗಿ ಪಾಲ್ಗೊಂಡು ಪರಿಸರ ಉಳಿಸಿ ಬೆಳೆಸಲು ಪ್ರಯತ್ನಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿಜಯಪುರ ಉಪ ಸಂರಕ್ಷಣಾಧಿಕಾರಿ ಪ್ರಶಾಂತ ಪಿ.ಕೆ.ಎಂ, ವಿಜಯಪುರ ಸಾಮಾಜಿಕ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ವನೀತಾ ಆರ್. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಾಗ್ಯವಂತ ವಸೂದಿ, ಸಾಮಾಜಿಕ ವಿಬಾಗದ ಸಹಾಯಕ ಸಂರಕ್ಷಣಾಧಿಕಾರಿ ಬಿ.ಪಿ.ಚವ್ಹಾಣ ವೇದಿಕೆ ಮೇಲಿದ್ದರು.
ಎಸ್.ಜಿ.ಸಂಗಾಲಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎನ್. ಮುಲ್ಲಾ ನಿರೂಪಿಸಿದರು. ವಲಯ ಅರಣ್ಯಾಧಿಕಾರಿ ರಾಜೀವ ಬಿರಾದಾರ ವಂದಿಸಿದರು.