ಪುಲ್ವಾಮಾ ದಾಳಿಯ ಹುತಾತ್ಮ ವೀರ ಯೋಧರಿಗೆ ನುಡಿನಮನ

Must Read

ಸಿಂದಗಿ: ದೇಶದ ಜನತೆಗೆ ರೈತ ಅನ್ನ ನೀಡಿದರೆ, ಗಡಿ ರಕ್ಷಣೆ ಮಾಡುತ್ತ ನಮ್ಮನ್ನು ಕಾಯುವ ಸೈನಿಕರು ಅದ್ಭುತ ಶಕ್ತಿ ಎಂದು ಸಾಮಾಜಿಕ ಹೋರಾಟಗಾರ ಜಗದೀಶ ಕಲಬುರ್ಗಿ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಹಾಗೂ ಹಾಲಿ ಯೋಧರು ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡ ಪುಲ್ವಾಮಾ ದಾಳಿಯ ಹುತಾತ್ಮ ವೀರ ಯೋಧರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, 2019ರ ಫೆ.14ರಂದು ಪುಲ್ವಾಮಾದಲ್ಲಿ ಉಗ್ರರ ದಾಳಿಯಿಂದಾಗಿ ಪ್ರಾಣ ತೆತ್ತ ಸೈನಿಕರನ್ನು ನಾವು ಸ್ಮರಿಸಬೇಕು ಎಂದರು.

ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಹಾಗೂ ಹಾಲಿ ಯೋಧರು ಕ್ಷೇಮಾಭಿವೃದ್ಧಿ ಸಂಘ ಉತ್ತರ ಕರ್ನಾಟಕದ ಗೌರಾವಾಧ್ಯಕ್ಷ ಶಬ್ಬೀರಪಟೇಲ ಬಿರಾದಾರ ಮಾತನಾಡಿ, ಇವತ್ತಿನ ದಿವಸ ನಾವೆಂದೂ ಮರೆಯಲಾರದ ಕರಾಳ ದಿನ. ನಮ್ಮ ಕೆಚ್ಚೆದೆಯ ಯೋಧರು ಬಲಿದಾನಗೈದ ದಿನ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಕೋಟಿ ಕೋಟಿ ನಮನಗಳು.  ರಾಜ್ಯ ಸಂಘಟನೆ ಹಾಗೂ ಜಿಲ್ಲಾ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಮ್ಮೆಲ್ಲರನ್ನು 2001 ರ ಡಿಸೆಂಬರ್ 13 ರಂದು ಸಂಸತ್ ರಕ್ಷಣೆಯಲ್ಲಿ ಹುತಾತ್ಮರಾದ ಹಾಗೂ ದೇಶ ರಕ್ಷಣೆಯಲ್ಲಿ ಪ್ರಾಣಾರ್ಪಣೆ ಮಾಡಿದ ಸುಮಾರು 38,000 ಅರೆಸೇನಾ ಪಡೆಗಳ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಭೆ ಹಾಗೂ ನಮ್ಮ ಸಂವಿಧಾನಿಕ ಹಕ್ಕುಗಳಾದ ಪ್ರತ್ಯೇಕ ಅರ್ಧಸೈನಿಕ್ ಬೋರ್ಡ, ಓಆರ್‍ಓಪಿ, ಎನ್‍ಪಿಎಸ್ ಮತ್ತು ಓಎಜಿಎಸ್ ಸ್ಥಾಪನೆಗಾಗಿ ಒಂದು ದಿನದ ಸಾಂಕೇತಿಕ ಧರಣಿಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿತ್ತು. ಮತ್ತು ದೆಹಲಿಯ ಜಂತರ್ ಮಂತರ್‍ನಲ್ಲಿ ಇವತ್ತಿನ ದಿವಸ ಹೋರಾಟ ನಡೆದಿರುತ್ತದೆ. ಸಿಂದಗಿ ತಾಲೂಕಿನಲ್ಲಿ ಎಲ್ಲಾ ಅರೆಸೇನಾ ಪಡೆಗಳ ಸೈನಿಕರು ಹಾಲಿ ಯೋಧರು ಕ್ಷೇಮಾಭಿವೃದ್ಧಿ ಸಂಘದವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ  ಆಮ್ ಆದ್ಮಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಶಿವು ಕೊಳಾರಿ, ಶಂಕರಗೌಡ ಕಡ್ಲೇವಾಡ, ಮಲಕಪ್ಪ ಕುರನಳ್ಳಿ, ರವಿಂದ್ರ ಬಿರಾದಾರ, ಎ.ಬಿ.ಹುಂಡೇಕಾರ, ಹಣಮಂತ್ರಾಯ ಬಿರಾದಾರ, ಮಲ್ಲಿಕಾರ್ಜುನ ಬಿರಾದಾರ, ಶ್ರೀಶೈಲ ಯಳಮೇಲಿ, ಸದಾನಂದ ಧರಿಕಾರ, ಸಂಜೀವ ಪಾಟೀಲ, ಮಡಿವಾಳಪ್ಪ ಕರಿಗೌಡ್ರು, ಶಿವಲಿಂಗ ವಡಿಯರ, ಮಲ್ಲಿಕಾರ್ಜುನ ಕುಳೇಕುಮಟಗಿ, ಜಗದೀಶ ಶಿವಣಗಿ, ಶಂಕರಗೌಡ ಆಸಂಗಿಹಾಳ ಸಚೀನ ಪಾಟೀಲ, ಜಾಗೀರಪಟೇಲ ಬಿರಾದಾರ ಸೇರಿದಂತರೆ ಅನೇಕರಿದ್ದರು.

Latest News

ಡಾ.ಮಹಾಂತೇಶ ಬೀಳಗಿ ಯುವಕರಿಗೆ ಸ್ಫೂರ್ತಿ – ಮೌಲಾಲಿ ಆಲಗೂರ

ಸಿಂದಗಿ: ಸ್ಪೂರ್ತಿದಾಯಕ ಮಾತುಗಳಿಂದ ಲಕ್ಷಾಂತರ ಸ್ಪರ್ಧಾತ್ಮಕ ಓದುಗರ ಕೀರ್ತಿ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಐಎಎಸ್ ಅಧಿಕಾರಿ ಮಹಾಂತೇಶ...

More Articles Like This

error: Content is protected !!
Join WhatsApp Group