ಎರಡು ಕವನಗಳು : ಶ್ಯಾಮಲಾ ಪಾಟೀಲ

Must Read

ರೈತ ಯೋಗಿ

ಕಷ್ಟಪಟ್ಟು ದುಡಿಯುವ.
ಬೆಟ್ಟದಷ್ಟು ಕಷ್ಟ ಸಹಿಸುವ.
ಭೂತಾಯಿ ನಂಬಿ ಹೊಲದಿ.
ತಾನೇ ದುಡಿಯುವ ಅನ್ನದಾತ ನಮ್ಮ ರೈತ ನಮ್ಮ ರೈತ

ನಾಡ ಜನರು ಬದುಕಲೆಂದು .
ಹಗಲು ರಾತ್ರಿ ಹೊಟ್ಟೆಗಾಗಿ
ಕಾಳುಕಡಿ ಬೆಳೆಯುವ ರೈತಯೋಗಿ
ನಮ್ಮ ರೈತ ನಮ್ಮ ರೈತ

ಗುಡುಗು ಮಳೆ ಮಿಂಚು .
ಲೆಕ್ಕಿಸದೆ ಭೂಮಿ ಅಂಚಿನಲ್ಲಿ.
ಸಂಚು ಮಾಡದೆ ದುಡಿಯುವ.
ನಮ್ಮ ರೈತ ನಮ್ಮ ರೈತ

ಮಳೆಯ ಗುಡುಗು.
ಚಳಿಯ ನಡುಗು.
ನೋವ ನುಂಗಿ ನಲಿವ.
ನಮ್ಮ ರೈತ ನಮ್ಮ ರೈತ

ಭೂಮಿತಾಯಿ ಹದವ ಮಾಡಿ.
ಹಸಿಯ ನೋಡಿ ಬೀಜ ಬಿತ್ತಿ.
ಭೂತಾಯಿಗೆ ಉಡಿಯ ತುಂಬುವ.
ನಮ್ಮ ರೈತ ನಮ್ಮ ರೈತ

ಹಚ್ಚ ಹಸಿರು ಭೂಮಿ ಒಡಲು.
ಬೆಳೆದ ಪೈರ ಕಂಡು ಹಿಗ್ಗಿ.
ಹಾಡಿ ಕುಣಿದು ಸುಗ್ಗಿ ಮಾಡುವ.
ನಮ್ಮ ರೈತ ನಮ್ಮ ರೈತ

ಜಗಕೆಲ್ಲ ಅನ್ನ ನೀಡುವ ಅನ್ನದಾತ.
ನೀನೆ ನಮಗೆ ಪುಣ್ಯವಂತ.
ಜನರ ರಕ್ಷಿಪ ಶ್ರೀ ಕೃಷ್ಣ ರೂಪಿ ರೈತ.
ನಮ್ಮ ರೈತ ನಮ್ಮ ರೈತ

ಚೆಲುವಿನ ಚಿಟ್ಟೆ

ಚೆಲುವಿನ ಚಿಟ್ಟೆ
ಚಂದದ ಚಿಟ್ಟೆ.
ಹೂ ಗಿಡ ಬಳ್ಳಿಗೆ.
ಹೂವಿಂದ ಹೂವಿಗೆ.
ಹಾರುತ ಬನಬನ ಸುತ್ತುತ್ತಿದೆ!!

ಸದ್ದು ಗದ್ದಲ ಮಾಡದೆ.
ಗೊಂದಲವಿಲ್ಲದೆ ಚಂದದಿ.
ಹಸುರಿನ ವನದಲಿ.
ಹೂವಿನ ಒಡಲಲಿ.
ಹೂವಿನಹುಡಿಯಲಿ ರಂಗೆರುತಿದೆ!!

ಕಂಪನು ಸೂಸುವ.
ಮಲ್ಲಿಗೆ ಸಂಪಿಗೆ.
ಗಲ್ಲಕೆ ಮೆಲ್ಲನೆ.
ಮುತ್ತನು ಕೊಡುತ.
ಅರಳಿದ ಸುಮಾಲಿ ನಲಿಯುತ್ತಿದೆ!!

ಶ್ರೀಮತಿ ಶ್ಯಾಮಲಾ ಬ. ಪಾಟೀಲ.
ಸ ಉ ಹಿ ಪ್ರಾ ಶಾಲೆ ಸುಳೇಭಾವಿ

LEAVE A REPLY

Please enter your comment!
Please enter your name here

Latest News

ಕವನ : ಎಡಗೈ ಶಕ್ತಿ

ಎಡಗೈ ಶಕ್ತಿ ಬಲಕ್ಕಿಲ್ಲದ ವೇಗ, ಎಡಕ್ಕಿಹುದು ನೋಡಿ ಯುವರಾಜ್ ಸಿಂಗ್ ನ ಬ್ಯಾಟಿಂಗ್ ಶಕ್ತಿಯಲ್ಲಿ ಹರಿಯಿತು ರನ್ ಮಳೆ ಎಡಗೈಯ ಸವಿನಯ ನಗು ಎಲ್ಲರನು ಮೋಡಿಮಾಡಿದಾಗ ಜಗವೆಲ್ಲ ಕೊಂಡಾಡಿತು ಸಾಧನೆಯನುವಿಷ್ಣುವರ್ಧನ್ ಎಡಗೈ...

More Articles Like This

error: Content is protected !!
Join WhatsApp Group