ಜಯದೇವಿತಾಯಿ ಲಿಗಾಡೆ ಅವರ ಬಗ್ಗೆ ಎರಡು ತಪ್ಪು ಕೃತಿಗಳು

Must Read

ಜಯದೇವಿತಾಯಿ ಲಿಗಾಡೆ ಅವರು ಕರ್ನಾಟಕ ಏಕೀಕರಣದ ಸಿಂಹಿಣಿ. ಕೇಂದ್ರ ರಾಜ್ಯ ಸರಕಾರಕ್ಕೆ ಸವಾಲು ಹಾಕಿ ಕನ್ನಡ ಭಾಷೆಯ ಅಸ್ಮಿತೆಯನ್ನು ಉಳಿಸುವಲ್ಲಿ ತಮ್ಮ ಪ್ರಾಣ ಒತ್ತೆ ಇಟ್ಟು ಹೋರಾಡಿದ ದಿಟ್ಟ ಮಹಿಳೆ.

ಇಂತಹ ಒಬ್ಬ ಅಪರೂಪದ ಪ್ರಬುದ್ಧ ಸಾಹಿತಿಯವರ ಜೀವನ ಚರಿತ್ರೆಯನ್ನು ಕಟ್ಟಿಕೊಡುವಲ್ಲಿ ಇಬ್ಬರು ಮಹಿಳಾ ಸಾಹಿತಿಗಳು ಅದರಲ್ಲಿ ಒಬ್ಬರು ಜಯದೇವಿತಾಯಿ ಕುಟುಂಬದ ಸದಸ್ಯರು.

ಪುಸ್ತಕ ; ಕನ್ನಡದ ಶಕ್ತಿ ಜಯದೇವಿತಾಯಿ ಲಿಗಾಡೆ

ಲೇಖಕಿ ಡಾ ಕಲ್ಯಾಣಮ್ಮ ಲಂಗೋಟಿ ರಾಮದುರ್ಗ

ಲಿಗಾಡೆಯವರ ಚೆನ್ನಮಲ್ಲಪ್ಪ ಮತ್ತು ಮೈನಾಬಾಯಿಯವರಿಗೆ
ಮಲ್ಲಿಕಾರ್ಜುನ ಅಡಿವೆಪ್ಪ ನಾಗಪ್ಪ ತಂಗೆವ್ವ ಎಂದು ನಾಲ್ಕು ಜನ ಮಕ್ಕಳಿದ್ದರು. ಮಲ್ಲಿಕಾರ್ಜುನಪ್ಪ ಇವರಿಗೆ ಆರು ಜನ ಹೆಂಡಂದಿರು. ಐದನೆಯ ಹೆಂಡತಿ ಸಿದ್ದವ್ವನವರಿಗೆ ಚೆನ್ನಮಲ್ಲಪ್ಪ ಮತ್ತು ಜಯದೇವಪ್ಪ ಎಂಬ ಎರಡು ಗಂಡು ಮಕ್ಕಳಿದ್ದರು . ಉಳಿದವರಿಗೆ ಗಂಡು ಮಕ್ಕಳಾಗಲಿಲ್ಲ .ಚಿಕ್ಕಪ್ಪ ನಾಗಪ್ಪ ಮತ್ತು ಪ್ರಯಾಗಬಾಯಿ ಇವರಿಗೆ ಮಕ್ಕಳೇ ಆಗಲಿಲ್ಲ. ನಾಗಪ್ಪನವರ ನಿಧನದ ನಂತರ ಸಮಸ್ತ ಆಸ್ತಿಯ ನಿರ್ವಹಣೆ ಜವಾಬ್ದಾರಿ ಪ್ರಯಾಗಬಾಯಿಯ ಮೇಲೆ ಬೀಳುತ್ತದೆ. ಔಸಾ ಊಟಗೆ ಶ್ರೀಮಂತ ಮನೆತನದವರು. ನಾಗಪ್ಪನವರ ಸಹೋದರ ಮಗ ಚೆನ್ನಮಲ್ಲಪನವರನ್ನು ಪ್ರಯಾಗಬಾಯಿ ದತ್ತಕ ತೆಗೆದುಕೊಂಡರು ಎಂದು ಮುಂದೆ ಈ ಸಾಕು ಮಗನಿಗೆ ಪ್ರಯಾಗಬಾಯಿ ಮಡಕಿ ಕುಟುಂಬದ ಜಯದೇವಿಯವರನ್ನು ತೆಗೆದುಕೊಳ್ಳಲು ನಿರ್ಧರಿಸಿದರು . ಆದರೆ ವಿವಾಹ ನಿಶ್ಚಿತಾರ್ಥ ಮಾಡಲು ಎರಡು ವರ್ಷ ಬೇಕಾಯಿತು. ಆ ಕಾಲದಲ್ಲಿ ಲಿಂಗಾಯತ ಒಳಪಂಗಡಗಳ ಕನ್ಯೆ ವರ ತೆಗೆದುಕೊಳ್ಳುವುದು ಮದುವೆ ವ್ಯವಹಾರ ಇರಲಿಲ್ಲ. ಕಾರಣ ವಾರದ ಮತ್ತು ಮಡಕಿ ಕುಟುಂಬದವರು ಬಣಜಿಗರು ಮತ್ತು ಲಿಗಾಡೆ ಮನೆತನದವರು ಪಂಚಮಸಾಲಿ ( ದೀಕ್ಷವಂತ ಪಂಚಾಚಾರ) ಪಂಗಡದವರಾಗಿದ್ದು ಎರಡು ವರ್ಷಗಳ ಸುದೀರ್ಘ ಚರ್ಚೆಯ ನಂತರ ಎಲ್ಲರೂ ಒಪ್ಪಿದರು ಎಂದು ಡಾ ಕಲ್ಯಾಣಮ್ಮ ಲಂಗೋಟಿ ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ದಾಖಲಿಸಿದ್ದಾರೆ. ಇದಕ್ಕೆ ಯಾವುದೇ ಪುರಾವೆ ದಾಖಲೆಗಳಿಲ್ಲ. ಮೇಲಾಗಿ ವಾರದ ಮಡಕಿ ಮತ್ತು ಲಿಗಾಡೆ ಕುಟುಂಬದವರು ಶೀಲವಂತ ಬಣಜಿಗರು. ಮೇಲಾಗಿ ವಾರದ ಮಲ್ಲಪ್ಪನವರು ಆದಿಯಾಗಿ ಈ ಮೂರು ಕುಟುಂಬಗಳು ಆಂತರಿಕ ವೈವಾಹಿಕ ಜೀವನದಲ್ಲಿ ಬೆಸೆತವರು. ಸಂಬಂಧಿಗಳು ವಸ್ತು ಸ್ಥಿತಿ ಹೀಗಿರುವಾಗ ಡಾ ಕಲ್ಯಾಣಮ್ಮ ಲಂಗೋಟಿ ರಾಮದುರ್ಗ ಇವರು ಈ ರೀತಿ ತಪ್ಪು ಮಾಹಿತಿ ಕೊಡಬಾರದು.

_________________________

ದೇವಿ ಕಣಾ ಶಕ್ತಿ ಕಣಾ ತಾಯಿ ಕಣಾ

ಲೇಖಕಿ
ಡಾ ಮಧುಬಾಲಾ ಲಿಗಾಡೆ
( ಜಯದೇವಿತಾಯಿ ಅವರ ಸೊಸೆ)
ಬಾಲ್ಯದಲ್ಲಿ ಅಜ್ಜ ವಾರದ ಮಲ್ಲಪ್ಪನವರು ಮೊಮ್ಮಗಳಾದ ಜಯದೇವಿ ತಾಯಿ ಲಿಗಾಡೆ ಅವರ ಗಲ್ಲವನ್ನು ಚಿವುಟಿ ಜಯ ಎಂದು ಕರೆದಾಗ ಬಾಲಕಿ ಜಯದೇವಿ ತಾಯಿ ಅವರು
ನನ್ನ ಹೆಸರು ಜಯ ಅಲ್ಲ ನನಗೆ ಜಯದೇವಿ ಎಂದು ಕರೆಯಬೇಕು ಎಂದು ಅಜ್ಜನಿಗೆ ಹೇಳಿದರಂತೆ.
ಇದು ಹಸಿ ಸುಳ್ಳು. ಸನ್ಮಾನ್ಯ ವಾರದ ಮಲ್ಲಪ್ಪನವರು ಲಿಂಗೈಕ್ಯ ಆಗಿದ್ದು ಜನವರಿ 1910 ಜಯದೇವಿ ತಾಯಿ ಲಿಗಾಡೆ ( ಮಡಕಿ) ಹುಟ್ಟಿದ್ದು 1912 ಜಯದೇವಿ ತಾಯಿ ಲಿಗಾಡೆ ಅವರು ಹುಟ್ಟಿದಾಗ  ವಾರದ ಮಲ್ಲಪ್ಪನವರು ಲಿಂಗೈಕ್ಯರಾಗಿದ್ದರು.

ಇಂತಹ ತಪ್ಪು ಪ್ರಮಾದಗಳನ್ನು ಜವಾಬ್ದಾರಿಯುತ ಸ್ಥಾನವನ್ನು ಹೊಂದಿರುವ ಸಾಹಿತಿಗಳು ಮಾಡಬಾರದು. ಅದರಲ್ಲೂ ಡಾ ಮಧುಬಾಲಾ ಲಿಗಾಡೆ ಅವರು ಜಯದೇವಿ ತಾಯಿ ಲಿಗಾಡೆ ಅವರ ಸೊಸೆ. ಅವರೇ ಹೀಗೆ ತಪ್ಪು ಮಾಹಿತಿಯನ್ನು ತಮ್ಮ ಕೃತಿಗಳಲ್ಲಿ ದಾಖಲಿಸಿದರೆ ಇದು ವಾರದ ಮಡಕಿ ಮತ್ತು ಲಿಗಾಡೆ ಅಂತಹ ಕುಟುಂಬಕ್ಕೆ ಅಪಚಾರ ಬಗೆದಂತಾಗುತ್ತದೆ. ಇನ್ನು ಮುಂದಾದರೂ ಸಾಹಿತಿಗಳು ಇಂತಹ ವಿಷಯವನ್ನು ದಾಖಲಿಸದೆ
ಜಯದೇವಿ ತಾಯಿ ಲಿಗಾಡೆ ಅವರ ಕಾರ್ಯ ಸೇವೆ ಬಗ್ಗೆ ಬರೆಯಲಿ ಎಂದು ಹಾರೈಸುತ್ತೇನೆ
____________________ ( ನಿಮ್ಮ ಅಭಿಪ್ರಾಯಗಳನ್ನು 9448863309 ಇಲ್ಲಿಗೆ ವಾಟ್ಸಪ್ ಮಾಡಿ- ಸಂ. )

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ 9552002338

LEAVE A REPLY

Please enter your comment!
Please enter your name here

Latest News

ಶ್ರೀ ಕೃಷ್ಣ ಸಮೂಹ ವಿದ್ಯಾಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ ಸಂಭ್ರಮ

ಶ್ರೀ ಕೃಷ್ಣ ಸಮೂಹ ವಿದ್ಯಾಸಂಸ್ಥೆಯ ಆವರಣದಲ್ಲಿ 77ನೇ ಗಣರಾಜ್ಯೋತ್ಸವವನ್ನು ಭವ್ಯವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಮೇಲ್ಮನವಿ ನ್ಯಾಯಪೀಠದ ಸದಸ್ಯರು ಹಾಗೂ ಗೌರವಾನ್ವಿತ ಜಿಲ್ಲಾ...

More Articles Like This

error: Content is protected !!
Join WhatsApp Group