ನಗರೋತ್ಥಾನದಡಿ ಚರಂಡಿ ಕಾಮಗಾರಿಗೆ ಚಾಲನೆ

Must Read

ಸಿಂದಗಿ: ಪಟ್ಟಣದ ಬಂದಾಳ ರಸ್ತೆಯಿಂದ ದಳವಾಯಿ ಅವರ ಮನೆಯವರೆಗೆ  ನಗರೋತ್ಥಾನ ಹಂತ 4ರ ಪ್ಯಾಕೇಜ್ 1 ಮತ್ತು 2ರ ಸಿಸಿ ಚರಂಡಿ ಕಾಮಗಾರಿಗೆ ಶಾಸಕ ರಮೇಶ ಭೂಸನುರ ಹಾಗೂ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಅವರು ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಮಾತನಾಡಿ, ನಗರೋತ್ಥಾನ ಯೋಜನೆಯಡಿ  ಬಂದಾಳ ರಸ್ತೆಯಲ್ಲಿ ಸಿಸಿ ಚರಂಡಿ ಕಾಮಗಾರಿ ಮಾಡಲಾಗುತ್ತಿದ್ದು ಸಾರ್ವಜನಿಕರು ಚರಂಡಿಯಲ್ಲಿ ಕಸವನ್ನು ಹಾಕದೇ ಸ್ವಚ್ಚತೆಯನ್ನು ಕಾಪಾಡಬೇಕು ವಿನಂತಿಸಿದರು.

ಶಾಸಕ ರಮೇಶ ಭುಸನೂರ ಮಾತನಾಡಿ,  ಬಹುದಿನಗಳಿಂದ ಮಳೆ ನೀರು ಹಾಗೂ ಮಲೀನ ನೀರು ರಸ್ತೆಯಲ್ಲಿ ಹರಿದು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿತ್ತು ಆ ಕಾರಣಕ್ಕೆ ಸಿಸಿ ಚರಂಡಿ ಕಾಮಗಾರಿ ಹಮ್ಮಿಕೊಳ್ಳಲಾಗುತ್ತಿದ್ದು ಚರಂಡಿ ಸ್ವಚ್ಚತೆ ಕಾಪಾಡುವುದರೊಂದಿಗೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ರಾಜಣ್ಣಿ ನಾರಾಯಣಕರ, ಭಾಷಾಸಾಬ ತಾಂಬೋಳಿ, ಶರಣಗೌಡ ಪಾಟೀಲ, ಗೊಲ್ಲಾಳ ಬಂಕಲಗಿ, ಸಂದೀಪ ಚೌರ, ಮಹಾಮತಗೌಡ ಬಿರಾದಾರ, ಬಸವರಾಜ ಯರನಾಳ, ಮಲ್ಲು ಪೂಜಾರಿ, ರಜಾಕ ಮುಜಾವರ, ಆಶ್ರಯ ಕಮಿಟಿ ಸದಸ್ಯ ಕಾಜು ಬಂಕಲಗಿ, ರಾಕೇಸ ಕಂಟಿಗೊಂಡ, ಸೇರಿದಂತೆ ಪ್ರಶಾಂತ ನಂದಿಕೋಲ, ಅನೀಲ ಕಡಕೋಳ,  ಸೈಪನ್ ನಾಟೀಕಾರ, ಪುರಸಭೆ ಜೆಇ ಎ.ಜೆ.ನಾಟೀಕಾರ, ಶಿವು ಬಡಿಗೆರ ಸೇರಿದಂತೆ ಹಲವರು ಇದ್ದರು.

Latest News

ಗಾರ್ಡನ್ ಅಭಿವೃದ್ದಿಗೆ  ರೂ.೨೩.೩೯ ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ

ಸಿಂದಗಿ; ಆಯಾ ವಾರ್ಡುಗಳು ಸಾರ್ವಜನಿಕರು, ವಯೋ ವೃದ್ಧರು ವಾಯು ವಿಹಾರಕ್ಕೆ ಅನುಕೂಲವಾಗಲೆಂದು ಪಟ್ಟಣದ ಎಲ್ಲ ಉದ್ಯಾನವನಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಪಟ್ಟಣದಲ್ಲಿ ಒಟ್ಟು ೭೨...

More Articles Like This

error: Content is protected !!
Join WhatsApp Group