spot_img
spot_img

ಸರ್ಕಾರಿ ಆಸ್ಪತ್ರೆಗಳಂತೆ ಗಬ್ಬು ನಾರುತ್ತಿವೆ ವಿಶ್ವವಿದ್ಯಾಲಯಗಳು !

Must Read

spot_img
- Advertisement -

ಪ್ರವೇಶವೇ ಇರದ ಹೆಚ್ಚುವರಿ ವಿಶ್ವವಿದ್ಯಾಲಯಗಳು

ಹಿಂದಿನ ಬಿಜೆಪಿ ಸರಕಾರವು ಮಾಡಿದ ಮಹಾ ತಪ್ಪುಗಳಲ್ಲಿ
ಹೆಚ್ಚುವರಿ ವಿಶ್ವವಿದ್ಯಾಲಯಗಳ ಸ್ಥಾಪನೆಯೂ ಒಂದು.
ಕರ್ನಾಟಕ ರಾಜ್ಯದಲ್ಲಿನ ಮೊದಲಿನ ವಿಶ್ವವಿದ್ಯಾಲಯಗಳಲ್ಲಿ ಪ್ರತಿಶತ 80% ರಷ್ಟು ಭೋಧಕ ಮತ್ತು ಭೋಧಕೇತರ ಸಿಬ್ಬಂದಿಯ ಕೊರತೆ ಇದೆ ಸರಕಾರವು ಕಳೆದ 6 ವರ್ಷಗಳಿಂದ ಯಾವುದೇ ನೇಮಕಾತಿ ಮಾಡಿಲ್ಲ. 5000 ಪ್ರಾಧ್ಯಾಪಕರ ನೇಮಕಾತಿ ಆಗಬೇಕು. ಸರಕಾರಿ ಕಾಲೇಜುಗಳದೂ ಇದೇ ದಯನೀಯ ಸ್ಥಿತಿ ಇದೆ.

ಇದಲ್ಲದೆ ನಾಡಿನ ಅನೇಕ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಸರಕಾರ ಮಾನ್ಯತೆ ಪಡೆದ ಸ್ನಾತಕೋತ್ತರ ಪ್ರವೇಶ ಪಡೆಯುತ್ತಾರೆ . ಮೊದಲಿನ ವಿಶ್ವವಿದ್ಯಾಲಯಗಳಲ್ಲಿಯೇ ಅನೇಕ ಕೋರ್ಸ್ ಗಳು ಮುಚ್ಚುವ ಹಂತ ತಲುಪಿವೆ. ವಸ್ತು ಸ್ಥಿತಿ ಹೀಗಿರುವಾಗ .ಅನಗತ್ಯ ಹೆಚ್ಚುವರಿ ವಿಶ್ವವಿದ್ಯಾಲಯಗಳು ಯಾವ ಪುರುಷಾರ್ಥಕ್ಕೆ ಎನ್ನುವುದು ಒಂದು ಗಂಭೀರ ಪ್ರಶ್ನೆ.

- Advertisement -

ಹಿಂದಿನ ಸರಕಾರ ಸಂಪೂರ್ಣ ಮತ ರಾಜಕಾರಣಕ್ಕೆ ಇಂತಹ ಕೆಟ್ಟ ನಿರ್ಧಾರ ಪಡೆದರೆ ಹೇಗೆ ಎಂಬುದು ಅರ್ಥ ಆಗದೆ ಉಳಿದಿದೆ. ಹೆಚ್ಚುವರಿ ವಿಶ್ವವಿದ್ಯಾಲಯಗಳು ಯಾವುದೇ ಸವಲತ್ತು ಮತ್ತು ಮೂಲಭೂತ ಸಂಶೋಧನಾ ಕೇಂದ್ರ ಸೌಕರ್ಯಗಳನ್ನು ಹೊಂದಿಲ್ಲ.

ಲಾಬಿಯ ಮೂಲಕ ಕುಲಪತಿ ಕುಲಸಚಿವರ ನೇಮಕ

ಜಾತಿ ಹಣ ತೋಳ್ಬಲ ಕುಲಪತಿ ಕುಲಸಚಿವರ ನೇಮಕದ ಮಾನದಂಡ. ಅವರಿಗೆ ಸಂಬಳ ಹೆಚ್ಚುವರಿ ಸಿಬ್ಬಂದಿಯ ನೀಡುವ ಸರಕಾರದ ದಡ್ಡತನಕ್ಕೆ ಏನೇನ್ನ ಬೇಕು? ಹೆಚ್ಚುವರಿಯಾಗಿ ಯಾವುದೇ ಕೆಲಸ ಮಾಡದ ವಿಶ್ವವಿದ್ಯಾಲಯಗಳಲ್ಲಿ ಇವರ ನೇಮಕದಿಂದ ರಾಜ್ಯ ಸರಕಾರಕ್ಕೆ ಸಂಬಳ ನೀಡುವ ಹೊರೆ ಬೀಳುತ್ತದೆ ಹೊರತು ಮತ್ತೇನೋ ಪ್ರಯೋಜನವಿಲ್ಲ. ಅದೂ ನಿವೃತ್ತರಾದವರು ನೇಮಕವಾಗುವುದರಿಂದ ಅತ್ತ ನಿವೃತ್ತಿ ವೇತನವೂ ಇತ್ತ ಕುಲಪತಿಗಳ ಸಂಬಳವೂ ಅವರಿಗೆ !

- Advertisement -

ಗುಣಮಟ್ಟದ ಶಿಕ್ಷಣ ಮರೀಚಿಕೆ

ವಿಶ್ವ ವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟ ಕಳಪೆಯಾಗಿದೆ.
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಯೂನಿವರ್ಸಿಟಿಗಳು
ಸಂಪೂರ್ಣ ಎಡವಿವೆ. ವಿಶ್ವ ವಿದ್ಯಾಲಯಗಳು ಪದವಿ ಪ್ರದಾನ ಮಾಡುವ ಮುಕ್ತ ಮಾರುಕಟ್ಟೆಯಾಗಿವೆ ಅಷ್ಟೆ. ಗುರಿ ಗುರು ಇಲ್ಲದ ವಿಶ್ವ ವಿದ್ಯಾಲಯಗಳು ಇಂದು ವಾಣಿಜ್ಯ ಮಳಿಗೆ ಆಗಿವೆ. ಸರಕಾರಿ ಶಾಲೆ,  ಸರಕಾರಿ ಆಸ್ಪತ್ರೆಗಳು
ಹೇಗೆ ಗಬ್ಬೆದ್ದು ನಾರುತ್ತಿವೆಯೋ ಹಾಗೆಯೇ ಇಂದು ವಿಶ್ವ ವಿದ್ಯಾಲಯಗಳು ತಮ್ಮ ಗುಣಮಟ್ಟ ಕಳೆದುಕೊಂಡು
ಕಾಟಾಚಾರದ ರಂಗ ಮಂದಿರ ಆಗಿವೆಯೆಂದರೆ ತಪ್ಪಲ್ಲ
100 ಕಿಲೋಮೀಟರ ಅಂತರದಲ್ಲಿ ನಾವು ಕನಿಷ್ಠ 5 ವಿಶ್ವ ವಿದ್ಯಾಲಯಗಳನ್ನು ಕಾಣುತ್ತೇವೆ ! ಯಾವ ಪುರುಷಾರ್ಥಕ್ಕೆ ಈ ಸ್ಥಾಪನೆ ? ಹೀಗೆ ಎಲ್ಲೆಂದರಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿದರೆ ಅದರ ಘನತೆಗೆ ಕುಂದುಂಟಾಗುವುದಿಲ್ಲವೆ ?

ಹೆಚ್ಚುವರಿ ವಿಶ್ವ ವಿದ್ಯಾಲಯಗಳಿಗೆ ಸ್ವಂತ ಕಟ್ಟಡಗಳಿಲ್ಲ !

ಇದ್ದ ವಿಶ್ವ ವಿದ್ಯಾಲಯಗಳೇ ಪ್ರವೇಶ ಇರದೇ ತಮ್ಮ ಅಸ್ತಿತ್ವ
ಉಳಿಸಿ ಕೊಳ್ಳಲು ಒದ್ದಾಡುತ್ತಿರುವಾಗ ಏಕೆ ಹೊಸ ಹೆಚ್ಚುವರಿ ವಿಶ್ವ ವಿದ್ಯಾಲಯಗಳು?
ಮಾಧ್ಯಮಿಕ ಶಾಲೆಗಳಲ್ಲಿ ಹೆಚ್ಚುವರಿ ವಿಶ್ವ ವಿದ್ಯಾಲಯಗಳು ಇಂದು ಕಾರ್ಯ ನೀರ್ವಹಿಸುತ್ತಿವೆ !

ಕುಲಪತಿ ಕುಲಸಚಿವ ನೇಮಕ; ಎಷ್ಟು ಕೋಟಿ ಹಣಕ್ಕೆ

ಕೆಲವು ವರ್ಷಗಳಲ್ಲಿ ವಿಶ್ವ ವಿದ್ಯಾಲಯಗಳು ಲಂಚ ವಂಚನೆಯ ಕೇಂದ್ರ ಆಗಿ ಮಾರ್ಪಾಟು ಹೊಂದಿವೆ.
ರಾಜ್ಯದ ಬಹುತೇಕ ವಿಶ್ವ ವಿದ್ಯಾಲಯಗಳ ಕುಲಪತಿ ಕುಲಸಚಿವರು ಲಂಚದ ಆರೋಪ ಹೊತ್ತಿದ್ದಾರೆ. ಒಬ್ಬ ಕುಲಪತಿಯನ್ನು ರಾತ್ರಿ ಪೋಲಿಸರು ಬಂಧಿಸಿದ್ದು ಈಗ ಇತಿಹಾಸ. ವೈದ್ಯಕೀಯ, ತಾಂತ್ರಿಕ, ಕೃಷಿ ವಿಶ್ವವಿದ್ಯಾಲಯಗಳ ಕುಲಪತಿ ಕುಲಸಚಿವರ ನೇಮಕಕ್ಕೆ ಮತ್ತೆ ದರ ನಿಗದಿ ಬೇರೆ !
ಮೊದಲಿನ ವಿಶ್ವವಿದ್ಯಾಲಯಗಳಲ್ಲಿ ಕುಲಪತಿ ನೇಮಕಕ್ಕೆ 5 ಕೋಟಿ ಹಣ ನೀಡ ಬೇಕೆಂದು ಹೇಳಲಾಗುತ್ತಿದೆ.
ಇನ್ನು ವೈದ್ಯಕೀಯ ತಾಂತ್ರಿಕ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿ ಕುಲಸಚಿವರ ನೇಮಕಕ್ಕೆ10 ಕೋಟಿ ಎನ್ನುವುದು ಈಗ ಸುದ್ದಿ. ವಿಶ್ವವಿದ್ಯಾಲಯಗಳೇ ಲಂಚ ರುಷುವತ್ತಿನ ತಾಣಗಳಾದರೆ ಇಲ್ಲಿಂದ ಎಂಥ ವಿದ್ಯೆ ವಿದ್ಯಾರ್ಥಿಗಳಿಗೆ ಸಿಕ್ಕೀತು ?

ಆದ್ದರಿಂದ ಈಗಿನ ಸರ್ಕಾರ ವಿಶ್ವವಿದ್ಯಾಲಯಗಳ ಪುನರ್ ವಿಲಿನೀಕರಣದ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕು. ರಾಜ್ಯದ ಬೊಕ್ಕಸದ ಮೇಲಿನ ಆರ್ಥಿಕ
ಹೊರೆಯನ್ನು ಕಡಿಮೆ ಮಾಡಿ ಕಳಪೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಪ್ರಾಧ್ಯಾಪಕರ ನೇಮಕಾತಿ ಮಾಡ ಬೇಕು. ಹಿಂದಿನ ಸರಕಾರದ ಹೆಚ್ಚುವರಿ
ವಿಶ್ವ ವಿದ್ಯಾಲಯಗಳನ್ನು ಅವುಗಳ ಮೂಲ ವಿಶ್ವ ವಿದ್ಯಾಲಯಗಳಲ್ಲಿ ಸೇರಿಸಲು ತೀವ್ರಗತಿಯ ಆದೇಶ ಹೊರಡಿಸಬೇಕು. ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವರು ಎಂಬ ಭರವಸೆ ಇದೆ.

ಡಾ. ಶಶಿಕಾಂತ ರುದ್ರಪ್ಪ ಪಟ್ಟಣ ರಾಮದುರ್ಗ

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group