ವಾಯ್.ಬಿ.ಕಡಕೋಳ ಅವರ ಸಂಪಾದಿತ ಕೃತಿ ‘ಬೆಳಕಿನೆಡೆಗೆ’ ಲೋಕಾರ್ಪಣೆ

Must Read

ಮುನವಳ್ಳಿಃ  ಪಟ್ಟಣದ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಸಂಪಾದಕತ್ವದಲ್ಲಿ ಹೊರತಂದ ಸರ್ವಿ ಗುರುಗಳ ಕುರಿತು ಬೆಳಕಿನೆಡೆಗೆ ಸ್ಮರಣ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಮುನವಳ್ಳಿಯ ಬಿ.ಎಫ್.ಯಲಿಗಾರ ಬಿ.ಈಡಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಇದೇ ಡಿಸೆಂಬರ್ ೨೩ ರಂದು ಶನಿವಾರ ಮುಂಜಾನೆ ೧೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಮುನವಳ್ಳಿ ಶ್ರೀ ಸೋಮಶೇಖರ ಮಠದ ಶ್ರೀ.ಮ.ನಿ.ಪ್ರ.ಸ್ವ.ಮುರುಘೇಂದ್ರ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದು ಸಾನ್ನಿಧ್ಯವನ್ನು ನಿತ್ಯಾನಂದ ಸತ್ಸಂಗ ಆಶ್ರಮದ ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಮುಕ್ತಾನಂದ ಸ್ವಾಮಿಗಳು ವಹಿಸುವರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ.ಎಸ್.ಪಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಂ.ಆರ್.ಗೋಪಶೆಟ್ಟಿ ವಹಿಸುವರು. ಕೃತಿ ಲೋಕಾರ್ಪಣೆಯನ್ನು ಜೆ.ಎಸ್.ಪಿ. ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ವ್ಹಿ.ಎಸ್.ಯಕ್ಕುಂಡಿ ಮಾಡಲಿರುವರು.ಘನ ಉಪಸ್ಥಿತಿ ಸರ್ವಿ ಗುರುಗಳ ಧರ್ಮಪತ್ನಿ ನೀಲಾತಾಯಿ ಸರ್ವಿ ವಹಿಸುವರು. ಸರ್ವಿ ಗುರುಗಳ ಕುರಿತು  ಮುನವಳ್ಳಿಯ ಹಿರಿಯ ಸಾಹಿತಿ ಮತ್ತು ನಿವೃತ್ತ ಡಿ.ವೈ.ಎಸ್.ಪಿ ಪಾಂಡುರಂಗ ಯಲಿಗಾರ ಹಾಗೂ ಬಾಗಲಕೋಟೆಯ ನಿವೃತ್ತ ಆಂಗ್ಲ ಉಪನ್ಯಾಸಕ ಪ್ರೊ.ಎಸ್.ವ್ಹಿ.ಚವಡಾಪುರ ಸ್ಮರಣೆಯ ನುಡಿಗಳನ್ನು ಆಡಲಿದ್ದು ವೇದಿಕೆಯಲ್ಲಿ ಮುನವಳ್ಳಿ ಟಿ.ಎ.ಪಿ.ಸಿ.ಎಂ.ನ ಅಧ್ಯಕ್ಷರಾದ ರವೀಂದ್ರ ಯಲಿಗಾರ, ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಮುನವಳ್ಳಿ ಹೋಬಳಿ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮೋಹನ ಸರ್ವಿ ಉಪಸ್ಥಿತರಿರುವರು ಎಂದು ಗೌರವ ಕಾರ್ಯದರ್ಶಿಗಳಾದ ಗುರುನಾಥ ಪತ್ತಾರ ಹಾಗೂ ಸುಧೀರ ವಾಗೇರಿ ಪ್ರಕಟಣೆಯಲ್ಲಿ ತಿಳಿಸಿರುವರು

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group