ವೀರಾಪುರ ಶ್ರೀಗಳು ರಾಜ್ಯ ಧಾರ್ಮಿಕ ಪರಿಷ ತ್ತಿ ಗೆ ಆಯ್ಕೆ

Must Read

ಮುಜರಾಯಿ ಸಚಿವ ಶ್ರೀರಾಮಲಿಂಗ ರೆಡ್ಡಿ ಯವರು ರಾಜ್ಯ ಧಾರ್ಮಿಕ ಪರಿಷತ್ ಗೆ ಶಿವಮೊಗ್ಗ ಜಿಲ್ಲೆಯ ವೀರಾಪುರ ಹಿರೇಮಠದ ಡಾ. ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳನ್ನು ನೇಮಕ ಮಾಡಿದ್ದಾರೆ.

Mಪಂಡಿತಾರಾಧ್ಯರು ಭಾರತೀಯ ಷೋಡಶ ಸಂಸ್ಕಾರಗಳು ವೈಚಾರಿಕ ದೃಷ್ಟಿಕೋನ ಪ್ರಬಂಧಕ್ಕೆ ಅಮೇರಿಕ ವಿಶ್ವವಿದ್ಯಾಲಯದಿಂದ ಮತ್ತು ಋಷಿ ಮುನಿಗಳ ಕೃಷಿ ಪ್ರಬಂಧಕ್ಕೆ ರಾಯಚೂರು ಕೃಷಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ.

ಪ್ರಾಚೀನ ಅರಸರ ನ್ಯಾಯ ದಾನ ಪದ್ಧತಿ ಸಂಶೋಧನಾ ಕೃತಿಗೆ ಸರ್ಕಾರ ಗೌರವಿಸಿದೆ. ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಡಿ ಲಿಟ್ ಪದವಿ ನೀಡಿ ಗೌರವಿಸಿದೆ. ಜಗದೇಕ ಸುಮುಖ, ದೇವಿ ಪುರಾಣ ಮುಂತಾದ ಕೃತಿಗಳು ಇವರಿಂದ ರಚನೆಯಾಗಿವೆ. ಸಂಸ್ಕೃತ ,ಕನ್ನಡ ,ವೇದ, ಜ್ಯೋತಿಷ್ಯ ,ಆಧ್ಯಾತ್ಮಿಕ ,ಪಾಠ ಶಾಲೆಯನ್ನು ಶ್ರೀ ಮಠದಲ್ಲಿ ತೆರೆದು ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾರೆ. ಇವರನ್ನು ಆಯ್ಕೆ ಮಾಡಿರುವುದು ಇವರ ವಿದ್ವತ್ತಿಗೆ ಸಂದ ಗೌರವವಾಗಿದೆ

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group