ಮೂಡಲಗಿ: ಜಾತಿ, ಮತ-ಪಂಥ ಕಾಂದಾಚಾರಗಳನ್ನು ಖಂಡಿಸುತ್ತಾ ಜೀವನದ ಪರಮ ಸತ್ಯಗಳನ್ನು ನಿರ್ಭೀತಿಯಿಂದ ಸಾರಿದ ವೇಮನ ಒಬ್ಬ ದಾರ್ಶನಿಕ ಕವಿ ಎಂದು ನಿವೃತ್ತ ಪ್ರಾಚಾರ್ಯ ಹಾಗೂ ಮಕ್ಕಳ ಸಾಹಿತಿ ಪ್ರೊ.ಸಂಗಮೇಶ ಗುಜಗೊಂಡ ಹೇಳಿದರು
ಅವರು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಎಸ್.ಎಸ್.ಆರ್.ಪದವಿ ಪೂರ್ವ ಮತ್ತು ಪ್ರೌಢ ಶಾಲೆ, ಬಿ.ಪಿ ಇಡಿ, ಎಮ್.ಪಿ.ಇ.ಡಿ ಮಹಾವಿದ್ಯಾಲಯ, ಹಾಗೂ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಸೋಮವಾರದಂದು ಜರುಗಿದ ಮಹಾಯೋಗಿ ವೇಮನರ ೬೧೪ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಸ್ಥಾನದಿಂದ ಮಾತನಾಡಿ, ಮೇಮನರ ಆರಂಭಿಕ ಜೀವನ ರಾಜ ವೈಬೋಗಗಳಿಂದ ಕೂಡಿದ್ದರು ಜೀವನದ ತಿರುವು ಒಂದರಲ್ಲಿ ಲಿಂಬಿಕಾಯೋಗಿಗಳ ಶಿಷ್ಯನಾಗಿ ಅವರು ಕರುಣಿಸಿದ ಆಧ್ಯಾತ್ಮಿಕ ಶಕ್ತಿಯಿಂದ ಮಹಾಯೋಗಿಯಾಗಿ ಮನುಕುಲದ ಉದ್ಧಾರಕ್ಕಾಗಿ ಧ್ಯಾನ, ಜ್ಞಾನ, ಸುಗುಣ, ದುಡಿಮೆ ಸಂಸಾರ ದೇವರು ಆಧ್ಯಾತ್ಮ ಭಕ್ತಿ ಕರ್ಮ, ಆಸ್ತಿಕ, ನಾಸ್ತಿಕ ಹೀಗೆ ಸಮಾಜದ ಹಲವು ವಿಷಯಗಳ ಮೇಲೆ ತಮ್ಮ ಅನುಭಾವಗಳನ್ನು ನಾಲ್ಕು ಸಾಲಿನ ಅಟಲವೇರಿ ಚೌಪದಿಗಳನ್ನು ರಚಿಸಿದ ಶ್ರೇಷ್ಠ, ಸಚಿತ, ದಾರ್ಶನಿಕ ಕವಿ ವೇಮನ ಎಂದು ಬಣ್ಣಿಸಿದರು.
ಎಸ್.ಎಸ್.ಆರ್ ಪ್ರೌಡ ಶಾಲೆಯ ಶಿಕ್ಷಕ ಆರ್.ಎಂ.ಕಾಂಬಳೆ ಅವರು ವೇಮನರ ಚೌಪದಿಗಳನ್ನು ರಾಗ-ಸ್ವರ ಬದ್ದವಾಗಿ ಹಾಡಿ ಅವುಗಳ ಒಳಾರ್ಥಗಳನ್ನು ಬಿಡಿಸಿ ಹತ್ತು ನಿಮಿಷ ಆನಾ ಪಾನ ಸತಿ ಧ್ಯಾನವನ್ನು ಮಾಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೊನವಾಲಕರ ಅವರು ವೇಮನ ಭಾವ ಚಿತ್ರಕ್ಕೆ ಪೂಜೆಸಲ್ಲಿಸಿ ಮಾತನಾಡಿದರು.
ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಆರ್.ಪಿ.ಸೋನವಾಲಕ, ನಿರ್ದೇಶಕರಾದ ಎ.ವಿ.ಹೊಸಕೋಟಿ, ಅಜ್ಜಪ್ಪ ಗಿರಡ್ಡಿ, ಅನೀಲ ಸತರಡ್ಡಿ, ಡಾ.ಶಿವು ಹೊಸೂರ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಮೂಡಲಗಿ ಪಟ್ಟಣದ ರಡ್ಡಿ ಸಮಾದ ಮುಖಂಡ, ಅಂಗ ಸಂಸ್ಥೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದರು. ಬಿ.ಕೆ.ಬಡಗಣ್ಣವರ ಸ್ವಾಗತಿಸಿದರು, ಲೋಕೇಶ ಹಿಡಕಲ್ ನಿರೂಪಿಸಿದರು, ಬಿ.ಕೆ ಗೌಡಪ್ಪಗೋಳ ವಂದಿಸಿದರು.

