ಸಿಂದಗಿ; ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ, ಕೊಟ್ಟಿದ್ದು ಕೆಟ್ಟಿತು ಅನಬೇಡ, ಮುಂದೆ ಕಟ್ಟಿಟ್ಟ ಬುತ್ತಿ ಸರ್ವಜ್ಞ, ಎನ್ನುವ ವಾಡಿಕೆಯಂತೆ ಭೀಮಾ ನದಿಯ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಸಮೀಪದ ಕುಮಸಗಿ ಗ್ರಾಮದ ೪೦ ರೈತ ಕುಟುಂಬಕ್ಕೆ ಸ್ಥಳೀಯ ಶ್ರೀವೆಂಕಟೇಶ್ವರ ಮಠದ ಅಭಿನವ ವೆಂಕಟೇಶ್ವರ ಮಹಾಸ್ವಾಮಿಗಳು ಸ್ವಾಮೀಜಿ ನೆರವಿಗೆ ನಿಂತಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕಿನ ಕುಮಸಗಿ ಗ್ರಾಮದಲ್ಲಿ ಭೀಮಾನದಿಯ ಪ್ರವಾಹ ದಿಂದ ಮನೆ ಕಳೆದುಕೊಂಡ ೪೦ ಸಂತ್ರಸ್ತರು ಕುಟುಂಬಗಳು ಆತಂಕದಲ್ಲಿ ಗ್ರಾಮದ ಶಾಲೆ ಒಂದರಲ್ಲಿ ತಮ್ಮ ಬದುಕು ನಡೆಸುತ್ತಿದ್ದು ಸಂಕಷ್ಟ ದಲ್ಲಿರುವ ಗ್ರಾಮದ ಜನರ ಕಷ್ಟ ಕ್ಕೆ ಸ್ಪಂದಿಸಲು ನಮ್ಮ ವೆಂಕಟೇಶ್ವರ ಪೂಜ್ಯರ ಮಠ ತಮ್ಮ ಜೊತೆಗೆ ಇರುತ್ತದೆ ಎಂದು ಸಂತ್ರಸ್ತರಿಗೆ ಧೈರ್ಯ ತುಂಬಿದರು ಮತ್ತು ತಮ್ಮ ಅನುಕೂಲಕ್ಕಾಗಿ ತಾಲೂಕಿನ ಆಡಳಿತ ಮಂಡಳಿಯ ಜೊತೆಗೆ ಮತ್ತು ಶಾಸಕರ ಜೊತೆ ಮಾತನಾಡಿ ತಮಗೆ ಸಕಲ ಸೌಲತ್ತು ಒದಗಿಸಲು ಒತ್ತಡ ಹೇರುವೆ ಎಂದರು.
ಸಂತ್ರಸ್ಥರನ್ನು ಕಂಡು ಅವರ ಜೀವನಕ್ಕೆ ಬೇಕಾಗಿರುವ ದಿನನಿತ್ಯದ ದಿನಸಿ ಸಾಮಗ್ರಿಗಳು ಪೂರೈಸಬೇಕೆನ್ನುವ ಇಚ್ಛಾಶಕ್ತಿಯು ಹೊಂದಿರುವ ಕುಮಸಿಗಿ ಗ್ರಾಮದ ವೆಂಕಟೇಶ್ವರ ಮಠದ ಪೂಜ್ಯರು ಮಾನವೀಯತೆ ದೃಷ್ಟಿಯಿಂದ ಎಲ್ಲ ಕುಟುಂಬಗಳಿಗೆ ಮಠ ದಿಂದ ಸಂತ್ರಸ್ಥರ ನೆರವಿಗೆ ಧಾವಿಸಿ ದಿನಸಿ ಸಾಮಗ್ರಿಗಳನ್ನು ಪ್ರತಿಯೊಬ್ಬರಿಗೂ ಕಿಟ್ ಗಳ ಮುಖಾಂತರ ವಿತರಿಸಿದ್ದರು
ಇದಕ್ಕೆ ಸಂತ್ರಸ್ತರು ಗುರುಗಳ ಮೇಲೆ ಅಪಾರ ಪ್ರೀತಿ ತೋರಿಸಿ ರಾಜಕೀಯ ನಾಯಕರು ಮತ್ತು ಸರ್ಕಾರ ಜವಾಬ್ದಾರಿತವಾಗಿ ನಡೆದುಕೊಳ್ಳಬೇಕಾದ ಸಂದರ್ಭದಲ್ಲಿ ಸರ್ಕಾರ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಮರೆತಿದ್ದಾರೆ ತಾವು ಬಂದು ನಮ್ಮ ದಿನನಿತ್ಯದ ಜೀವನಕ್ಕೆ ಬೇಕಾಗಿರುವ ದವಸ ಧಾನ್ಯಗಳನ್ನು ನೀಡಿರುವುದು ನಮಗೆ ಧೈರ್ಯ ಬಂದಿದೆ ಎಂದು ಪೂಜ್ಯರ ಎದುರು ತಮ್ಮ ಅಳಲು ತೋಡಿಕೊಂಡರು.
ನಂತರ ರಾಜ ಕಬ್ಬು ಬೆಳೆಗಾರರ ಸಂಘದ ಸಿಂದಗಿ ತಾಲೂಕ ಅಧ್ಯಕ್ಷ ಧರೇಪ್ಪಗೌಡ ಬಿರಾದಾರ ಮಾತನಾಡಿ ಬಿಜಾಪುರ ಜಿಲ್ಲೆಯ ಅಲ್ಮೆಲ್ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಮತ್ತು ಭೀಮಾನದಿ ಪ್ರಭಾವದಿಂದ ಕಬ್ಬು ಹತ್ತಿ ತೊಗರಿ ಉದ್ದು ಹೆಸರು ಮೆಣಸಿನ ಗಿಡ ತೋಟಗಾರಿಕೆ ಬೆಳೆಗಳು ಅತಿವೃಷ್ಟಿಯಿಂದ ಮತ್ತು ಭೀಮಾನದಿ ಪ್ರಭಾವದಿಂದ ಹಾಳಾಗಿ ರೈತರು ಸಂಕಷ್ಟ ಕ್ಕೆ ಸಿಲುಕಿದ್ದಾರೆ, ನದಿ ಪ್ರಭಾವದಿಂದ ತಮ್ಮ ಮನೆಗಳನ್ನು ಕಳೆದುಕೊಂಡು ಶಾಲೆಯಲ್ಲಿ ಜೀವನ ನಡೆಸುತ್ತಿದ್ದು ಸರ್ಕಾರ ಕೂಡಲೇ ಸೂಕ್ತ ಬೆಳೆ ಪರಿಹಾರ ಒಂದು ಎಕರೆಗೆ ೫೦,೦೦೦ ಪರಿಹಾರ ನೀಡಬೇಕು ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ಕಟ್ಟಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಲಕ್ಷ್ಮಿಕಾಂತ ಚಾವರ,ಬಸರಾಜ್ ಯಾತ್ನೂರ್, ವಿಶ್ವನಾಥ್ ಸಿಂಪಿ, ಗುರುಪಾದ ಚಾವರ್, ದತ್ತು ವಾಲಿಕಾರ,ದರೆಪ್ಪ ಗಿಣಿಯಾರ, ಸಿದ್ದರಾಮ ಸಮಗಾರ,ಗುರು ಜಾದವ, ಮಹಾಂತಪ್ಪ ಮರದಗ್ರಾಮದ, ಸೇರಿದಂತೆ ಗ್ರಾಮಸ್ಥರು ಇದ್ದರು.