ವಚನ ಸಾಹಿತ್ಯ ಪ್ರಚಾರ ನಡೆ ನುಡಿಗಳಿಂದ ಆಗಬೇಕು

Must Read

ವಚನ ಸಾಹಿತ್ಯ ನಡೆ ನುಡಿಗಳನ್ನು ಒಂದಾಗಿಸಿಕೊಂಡ ಸಾಹಿತ್ಯ, ಈ ಸಾಹಿತ್ಯದ ಪ್ರಚಾರ ನಡೆ-ನುಡಿಗಳಿಂದಲೇ ಆಗಬೇಕು ಎಂದು ಧಾರವಾಡ ಆಕಾಶವಾಣಿ ಕೇಂದ್ರದ ನಿರ್ದೇಶಕರಾದ ಡಾ ಬಸು ಬೇವಿನಗಿಡದ ಹೇಳಿದರು.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಗರದ ಪತ್ರಿಬಸವೇಶ್ವರ ಅನುಭವ ಮಂಟಪದಲ್ಲಿ ಶ್ರಾವಣ ಮಾಸದ ವಿಶೇಷ ಪ್ರವಚನ ಪತ್ರಿಬಸವೇಶ್ವರ ಶರಣ ಸಂಸ್ಕೃತಿಯ ಉತ್ಸವದ ದ್ವಾದಶೋತ್ಸವ ಹಳಕಟ್ಟಿಯವರ  ವಚನ ಸಾಹಿತ್ಯ ಸಂರಕ್ಷಣೆಯ ಶತಮಾನೋತ್ಸವದ ವರ್ಷಾಚರಣೆ 43ನೆಯ ವಚನೋತ್ಸವ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸ  ಕಾರ್ಯಕ್ರಮ ಒಂಬತ್ತನೇ ಅನುಭಾವಗೋಷ್ಠಿಯ ಎರಡನೆಯ ಶ್ರಾವಣ ಸೋಮವಾರ ವಿಶೇಷ ಕಾರ್ಯಕ್ರಮ ಉದ್ದೇಶಿಸಿ ಅವರು   ವಿಶೇಷ ಉಪನ್ಯಾಸ ನೀಡಿದರು.

ನಡೆ-ನುಡಿಗಳನ್ನು ಒಂದಾಗಿಸಿಕೊಂಡ ವಚನ ಸಾಹಿತ್ಯದ ಪ್ರಚಾರ ನಡೆ-ನುಡಿಗಳಿಂದಲೇ ಆಗಬೇಕು ಪ್ರತಿಯೊಂದು ಮನೆ ಮನಗಳಲ್ಲಿ ವಚನ ಸಾಹಿತ್ಯದ ಪ್ರಸಾರ ಇಂದಿನ ದಿನಮಾನದಲ್ಲಿ ಹೆಚ್ಚಾಗಿ ಪ್ರಚಾರವಾಗುತ್ತಿರುವುದು ಸಂತಸ ತಂದಿದೆ ಎಂದರು. 

     ಹುಬ್ಬಳ್ಳಿಯ ಖ್ಯಾತ ಉದ್ದಿಮೆದಾರ ಶರಣ ದಂಪತಿಗಳಾದ ಆರತಿ ಮೃತ್ಯುಂಜಯ ಮರೋಳ್ ದಂಪತಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.       

      ದಾನೇಶ್ವರಿ ಜಿನ್ನಿಂಗ್ ಫ್ಯಾಕ್ಟರಿಯ ಮಾಲೀಕರಾದ ಶಂಕ್ರಣ್ಣ ಬಾಳಿ ಅವರು ಅಧ್ಯಕ್ಷತೆ ವಹಿಸಿದ್ದರು ರಾಮಲಿಂಗ ಕಾಡನ್ನವರ, ವೀರಣ್ಣ ವಾಲಿ, ದುಂಡಪ್ಪ ಕೋಟೂರ್ ಅನ್ನ ದಾಸೋಹ ಸೇವೆಗೈದರು ಗೌರಮ್ಮ ಕರ್ಕಿ ಸ್ವಾಗತಿಸಿದರು. ಮೋಹನ ಬೇವಿನಗಿಡದ ಪರಿಚಯಿಸಿದರು. ಕಾಡಪ್ಪ ರಾಮಗುಂಡಿ ವಂದಿಸಿದರು. ರಾಜೇಶ್ವರಿ ದ್ಯಾಮಣಗೌಡರ ನಿರೂಪಿಸಿದರು. 

ಸಿದ್ದಣ್ಣ ಗದಗ, ನಾಗನಗೌಡ ಪಾಟೀಲ ಮಾಜಿ ಪುರಸಭೆ ಅಧ್ಯಕ್ಷ ಮಲ್ಲನಾಯ್ಕ ಪಾಟೀಲ ಗೊರವನಕೊಳ್ಳ ದುಂಡಯ್ಯ ಕುಲಕರ್ಣಿ ಚಂದ್ರಗೌಡ ಪಾಟೀಲ ವೀರಭದ್ರ ಶ್ರೀಶೈಲ ಶರಣಪ್ಪನವರ್ ವೀರಭದ್ರ ಕಾಪ್ಸೆ ಬೊಂಗಾಳೆ ಅನ್ನಪೂರ್ಣ ಕನೋಜ ಮಂಗಳ ಅಕ್ಕಿ ಮೀನಾಕ್ಷಿ ಕೊಡಸೋಮನ್ನವರ ಪ್ರೇಮಕ್ಕ ಅಂಗಡಿ   ಪತ್ರಿ ಬಸವನಗರದ ಅಭಿವೃದ್ಧಿ ಸಂಘ ಅಜಗಣ್ಣ ಮುಕ್ತಾಯಕ್ಕ ಕದಳಿ ಮಹಿಳಾ ವೇದಿಕೆ ಬಳಗ  ಪತ್ರಿಬಸವ ನಗರದ ಶರಣ ಶರಣೀಯರು ಹಾಗೂ  ಉಪಸ್ಥಿತರಿದ್ದರು

Latest News

ಬೇವೂರ ಪದವಿ ಮಹಾವಿದ್ಯಾಲಯದಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಆಚರಣೆ.

ಬಾಗಲಕೋಟೆ : ಕನ್ನಡ ಭಾಷೆಗೆ ಸುದೀರ್ಘ ಇತಿಹಾಸ ಪರಂಪರೆ ಇದೆ. ಕದಂಬ ಚಾಲುಕ್ಯರಾದಿಯಾಗಿ ಅನೇಕ ಅರಸು ಮನೆತನಗಳ ಕಾಲಘಟ್ಟದಲ್ಲಿ ಶ್ರೀಮಂತಿಕೆಯ ಸಾಹಿತ್ಯ ರಚನೆಗೊಂಡು ನಾಡಿನ ಗತವೈಭವಕ್ಕೆ...

More Articles Like This

error: Content is protected !!
Join WhatsApp Group