ಸಿಂದಗಿ: ಇಂದಿನ ಯುವ ಪೀಳಿಗೆ ಕಡ್ಡಾಯವಾಗಿ ಮತದಾನ ಮಾಡಬೇಕು ಹಾಗೂ ತಮ್ಮ ಕುಟುಂಬದ ಸುತ್ತಮುತ್ತಲಿನ ಹಿರಿಯರಿಗೆ ಮತದಾನದ ಅರಿವು ಮೂಡಿಸಬೇಕು, ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಸಿ.ಬಿ.ಕುಂಬಾರ ಹೇಳಿದರು.
ಪಟ್ಟಣದ ಕೂಮಾರ್ ಇನ್ಫೋಟೆಕ್ ಸಂಸ್ಥೆಯ ಸಹಯೋಗದೊಂದಿಗೆ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತಾ ಜೀವನೋಪಾಯ ಇಲಾಖೆಯ ವತಿಯಿಂದ ನಡೆದ ಮತದಾನದ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿ, ಚುನಾವಣಾ ಆಯೋಗವು ಮತದಾನದ ಭೂತ್ ನಲ್ಲಿ ಕೈಗೊಂಡಿರುವ ನೀರಿನ ನೆರಳಿನ ವ್ಯವಸ್ಥೆ ಬಗ್ಗೆ ತಿಳಿ ಹೇಳಬೇಕು ಎಂದರು.
ಕುಮಾರ ಇನ್ಫೋಟೆಕ್ ಸಂಸ್ಥೆಯ ನಿರ್ದೇಶಕರಾದ ಕುಮಾರ ಮಠ ಮಾತನಾಡಿ, ಇಂದಿನ ಯುವಕರ ಮತದಾನವು ಮುಂದಿನ ಸದೃಢ ದೇಶ ಕಟ್ಟಲು ಅನುಕೂಲವಾಗುತ್ತದೆ ಯಾವುದೇ ಕಾರಣಕ್ಕು ಮತದಾನದಿಂದ ಯುವಕರು ದೂರ ಉಳಿಯಬಾರದು, ಯಾವುದೇ ಜಾತಿ, ಮತ, ವ್ಯಕ್ತಿ ಪಕ್ಷ ಎನ್ನದೇ ಯಾವುದೇ ಆಮೀಶಕ್ಕೆ ಒಳಗಾಗದೇ ಸೂಕ್ತ ಅಭ್ಯರ್ಥಿಗಳಿಗೆ ಮತದಾನ ಮಾಡಬೇಕು ಎಂದರು.
ಮಹಾಂತೇಶ ಬಾಗೇವಾಡಿ ಅವರು ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು, ಇದೇ ಸಂದರ್ಭದಲ್ಲಿ ಸಿದ್ದು ಪರೀಟ, ಬಾಗೇಶ ಹೂಗಾರ, ಶಾರಧಾ ಮಂಗಳೂರು, ವಿಜಯಲಕ್ಷ್ಮಿ ಹಿರೇಮಠ, ಕಿರಣ ಉಪಸ್ಥಿತರಿದ್ದರು