spot_img
spot_img

ಬದುಕು ಬದಲಿಸಬಲ್ಲೆವು!

Must Read

- Advertisement -

ಬಹುತೇಕ ಜನರು ತಮ್ಮ ಜೀವನದಲ್ಲಿ ಉದ್ದೇಶಿತ ಗುರಿ ತಲುಪುವುದೇ ಇಲ್ಲ. ಅಂಥವರೆಲ್ಲ ‘ತಮ್ಮಿಂದ ಅದೆಲ್ಲ ಆಗದ್ದು.’ ಎಂದು ಬಲವಾಗಿ ನಂಬಿರುತ್ತಾರೆ. ಹೀಗಾಗಿ ಪ್ರಯತ್ನಕ್ಕೆ ಕೈ ಹಾಕುವುದೇ ಇಲ್ಲ. ಸ್ಥಿರತೆಯ ಕೊರತೆಯಿಂದ ಹಿಂದೆ ಬೀಳುತ್ತಾರೆ. ಕೆಲವರು ಮಾತ್ರ ಫಲಾಫಲಗಳ ಬಗೆಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ತಮ್ಮ ಶ್ರದ್ಧಾಪೂರ್ವಕ ಪ್ರಯತ್ನದಿಂದ ಜಯಶಾಲಿಗಳಾಗುತ್ತಾರೆ.

ಅತ್ತ ಇತ್ತ ಅಲುಗಾಡದಂತೆ ಸೀಮಿತಗೊಳಿಸದಿದ್ದರೆ ಆವಿಯು ಇಂಜಿನ್ನನ್ನು ಚಲಾಯಿಸಲಾರದು.ಫಲಾಪೇಕ್ಷೆಯ ಚಿಂತೆಯಲ್ಲಿ ಕೈ ಕೆಸರು ಮಾಡಿಕೊಳ್ಳದಿದ್ದರೆ ಬಾಯಿ ಮೊಸರಾಗುವುದು ಅಸಾಧ್ಯ. ತಮ್ಮೊಳಗೆ ನಕಾರಾತ್ಮಕ ಶಕ್ತಿಯನ್ನು ತುಂಬಿಟ್ಟುಕೊಂಡವರು ಕೆಲಸವು ಆಗುವುದೇ ಇಲ್ಲವೆಂದು ವಾದಿಸುವುದರಲ್ಲಿ ಪರಿಣಿತರಾಗಿರುತ್ತಾರೆ ಎಂಬುದಕ್ಕೆ ನಾ ಓದಿದ ಕಥೆಯೊಂದು ಹೀಗಿದೆ:

ವ್ಯಕ್ತಿಯೊಬ್ಬ ಕಡಲ ತೀರದಲ್ಲಿ ನಡೆದು ಹೋಗುತ್ತಿದ್ದ. ಕಡಲ ಅಲೆಗಳು ದಡವನ್ನು ಮುಟ್ಟಿ ಹಿಂದೆ ಹೋಗುವಾಗೊಮ್ಮೆ ನೂರಾರು ಸಂಖ್ಯೆಯಲ್ಲಿ ನಕ್ಷತ್ರ ಮೀನುಗಳು ಅಲೆಗಳೊಂದಿಗೆ ತೇಲಿ ಬಂದು ದಡದಲ್ಲೇ ಉಳಿದುಕೊಳ್ಳುವುದನ್ನು ಗಮನಿಸಿದ. ಕಡಲಿನಿಂದ ಬೇರಾದ ಮೀನುಗಳು ಸೂರ್ಯನ ಪ್ರಖರ ಕಿರಣಕ್ಕೆ ವಿಲವಿಲನೆ ಒದ್ದಾಡುತ್ತಿರುತ್ತವೆ. ಅದನ್ನು ಕಂಡ ಆ ವ್ಯಕ್ತಿ ಮೀನುಗಳನ್ನು ಎತ್ತಿ ಸಮುದ್ರಕ್ಕೆ ಎಸೆಯತೊಡುಗುತ್ತಾನೆ.

- Advertisement -

ಮೀನುಗಳನ್ನು ಮತ್ತೆ ಮತ್ತೆ ಸಮುದ್ರಕ್ಕೆ ಎಸೆಯುತ್ತಿದ್ದ ವ್ಯಕ್ತಿಯನ್ನು ನೋಡಿದ ಮೀನುಗಾರನೊಬ್ಬ ಅವನ ಬಳಿ ಬಂದು,’’ಹೀಗೇಕೆ ಮಾಡುತ್ತಿದ್ದಿಯಾ? ಪ್ರತಿಸಲ ಅಲೆಗಳು ದಡವನ್ನು ಅಪ್ಪಳಿಸಿದಾಗ ಈ ರೀತಿ ಸಾಕಷ್ಟು ಮೀನುಗಳು ದಡದಲ್ಲಿ ಬಂದು ಬೀಳುತ್ತವೆ. ಆ ಎಲ್ಲ ಮೀನುಗಳನ್ನು ನಿನ್ನಿಂದ ಕಡಲಿಗೆಸೆದು ಬದುಕಿಸಲು ಸಾಧ್ಯವಿದೆಯಾ? ಎಂದು ಪ್ರಶ್ನಿಸುತ್ತಾನೆ. ಮಾತನ್ನು ಮುಂದುವರೆಸುತ್ತ ‘ನೀನು ಈ ರೀತಿ ಪ್ರಯತ್ನ ಪಡುವುದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ.’ ಎಂದ ಮೀನುಗಾರ. ‘ ಆಗುವುದು ಬಿಡುವುದು ದೇವರಿಚ್ಛೆ. ನನ್ನ ಪ್ರಯತ್ನವನ್ನು ಮುಂದುವರೆಸುವೆ.ಅದರಿಂದ ಬದಲಾವಣೆ ಆಗೇ ಆಗುತ್ತದೆ.’ ಎನ್ನುತ್ತ ವ್ಯಕ್ತಿ ಮತ್ತೊಂದು ಮೀನನ್ನು ನೀರಿಗೆಸೆಯುತ್ತಾನೆ.

ಕ್ಷಿಪ್ರ ಪ್ರತಿಫಲ ಬಯಸಿ ಪ್ರಯತ್ನ ಕೈ ಬಿಡಬಾರದು ಪಟ್ಟು ಹಿಡಿಯುವಿಕೆಯಷ್ಟು ಸರ್ವಶಕ್ತ ಮತ್ಯಾವುದು ಇರಲಾರದು. ಬದವಾವಣೆಯೆಡೆಗಿನ ಪಯಣ ಅಷ್ಟು ಸುಲಭದ್ದಲ್ಲ. ಅದು ಕಲ್ಲು ಮುಳ್ಳುಗಳಿಂದ ಕೂಡಿದೆ. ಸಂಕಲ್ಪ ಶಕ್ತಿಯಿಂದ ಪ್ರಯತ್ನಿಸಿದರೆ ದಾಟಬಲ್ಲೆವು. ಭಾಗಶಃ ಕಿವುಡಿಯಾದ ತನ್ನ ಪತ್ನಿಗೆ ಶ್ರವಣ ಸಾಧನ ಕಂಡು ಹಿಡಿಯಲೆತ್ನಿಸಿದ ಗ್ರಹಾಂ ಬೆಲ್‍ನ ತೀವ್ರ ಪ್ರಯತ್ನ ಫಲಿಸಲಿಲ್ಲ.

ಆದರೆ ಆ ಯತ್ನ ವಿಫಲವಾಗಲಿಲ್ಲ.ಈ ಪ್ರಕ್ರಿಯೆಯಲ್ಲಿ ಆತ ಟೆಲಿಫೋನನ್ನು ಕಂಡು ಹಿಡಿದ. ಕಷ್ಟ ಪಟ್ಟು ದುಡಿಯುವವರಿಗೆ ಪ್ರಯತ್ನ ಪಡುವವರಿಗೆ ಎಲ್ಲೆಲ್ಲೂ ಭಾರಿ ಬೇಡಿಕೆಯಿದೆ. ಕೊಡುವ ಸಂಬಳಕ್ಕೆ ತಕ್ಕುದಾದ ಕೆಲಸವನ್ನು ಮಾಡಲು ಬೇಸರಿಸಿಕೊಳ್ಳುವವರು, ಎಷ್ಟು ಕೆಲಸ ಹೇಳುವರೋ ಅಷ್ಟೇ ಮಾಡಿ ಪಾರಾಗುವವರು. ಕೆಲಸ ಉಳಿಸಿಕೊಳ್ಳಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ಮಾಡುವವರು ಕಾಣ ಸಿಗುತ್ತಾರೆ. ವಹಿಸಿದಕ್ಕಿಂತ ಜಾಸ್ತಿ ಕೆಲಸ ಮಾಡುವವರು ನಾಯಕರಾಗುತ್ತಾರೆ. ಬದಲಾವಣೆಗೆ ಪ್ರಯತ್ನದ ಕೊಂಡಿ ಬೇಕೇ ಬೇಕು. ಅದನ್ನು ಕಳಚದಂತೆ ನೋಡಿಕೊಂಡರೆ ಬದುಕು ಬದಲಿಸಬಲ್ಲೆವು! ಬದಲಾವಣೆಯ ನಗು ಚೆಲ್ಲಬಲ್ಲೆವು.

- Advertisement -

ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ 9449234142

- Advertisement -
- Advertisement -

Latest News

ಹುನಗುಂದದ ಜನ ಭಕ್ತಿವಂತರು – ಪ್ರಶಾಂತ ದೇವರು

ಹುನಗುಂದ :-ಧರ್ಮ ಮಾನವನ ಅವಿಭಾಜ್ಯ ಅಂಗ ಧರ್ಮ ಎಂದರೆ ಬದುಕಿನ ರೀತಿ ಮಾನವ ಕುಲ ಸುಖದಿಂದ ಇರಬೇಕಾದ ಧರ್ಮ ಬೇಕೇ ಬೇಕು ಧರ್ಮದಿಂದ ಮಾತ್ರ ಜಗತ್ತಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group