Homeಸುದ್ದಿಗಳುವಾರದ ಸತ್ಸಂಗ ಕಾರ್ಯಕ್ರಮ

ವಾರದ ಸತ್ಸಂಗ ಕಾರ್ಯಕ್ರಮ

ಬೆಳಗಾವಿ – ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಸಹ್ಯಾದ್ರಿ ನಗರ, ಕುವೆಂಪು ನಗರ ಬೆಳಗಾವಿಯಲ್ಲಿ ದಿನಾಂಕ 25-5-2025 ರಂದು ವಾರದ ಸತ್ಸಂಗ ಕಾರ್ಯಕ್ರಮ ನಡೆಯಿತು.

‘ಪತಿತರನ್ನು ಪಾವನ ಮಾಡಿದ ಬಸವಣ್ಣ’ ಎಂಬ ವಿಷಯವನ್ನು ಶರಣೆ ವಸಂತಕ್ಕ ಗಡಕರಿಯವರು ಮಾತನಾಡುತ್ತ, ಮುಗ್ಧ ಸಂಗಯ್ಯ ಸ್ವರ್ಗವ ಕಾಣಲು ವೇಶ್ಯೆಯ ಮನೆಗೆ ಹೋಗಿ ಲಿಂಗಾಂಗ ಸಾಮರಸ್ಯದಲ್ಲಿ ಮೈ ಮರೆತು ಮುಂಜಾನೆಯ ಸಮಯದಲ್ಲಿ ಅದರಿಂದ ಹೊರಬಂದು ಬಸವಣ್ಣನ ಬಳಿ ಬಂದು ತನ್ನ ಅನುಭವವನ್ನು ಹೇಳಿದ ಇದೆ ಸಮಯದಲ್ಲಿ ವೇಶ್ಯೆಯು ಇವನ ವರ್ತನೆ ಕಂಡು ಆಶ್ಚರ್ಯಗೊಂಡು ತನ್ನ ಸಹವೃತ್ತಿಯವರನ್ನು ಕರೆದುಕೊಂಡು ಸಂಗಯ್ಯನ ಹಿಂದೆ ಹಿಂಬಾಲಿಸಿ ಬಸವಣ್ಣನ ಮನೆಗೆ ಬಂದಾಗ ಬಸವಣ್ಣನವರು ಅವರನ್ನ ವಿನಯ ಪೂರ್ವಕವಾಗಿ ಎಲೆ ಅವ್ವಗಳಿರಾ, ಎಲೇ ತಾಯೇ ಎಂದು ಮಾತನಾಡಿಸಿದಾಗ ಅವಾಚ್ಯ ಶಬ್ದಗಳನ್ನು ಆಲಿಸಿದ ಅವರಿಗೆ ಬಸವಣ್ಣ ಮೃದು ವಚನ ಅವರನ್ನ ಶರಣೆಯರನ್ನಾಗಿ ಮಾಡಿಸಿತು ಎಂದು ಹೇಳಿ, ಇದೇ ರೀತಿ ಪತಿತರು ಪಾವನರಾದರು, ಬುದ್ದ ಬಸವಣ್ಣನವರ ವಿನಯದ ನುಡಿ, ಶಬ್ದಗಳು ವ್ಯಕ್ತಿತ್ವವನ್ನು ರೂಪಿಸುವಂತಹವು ಎಂದು ಹೇಳಿದರು.

ಶರಣೆಯರಾದ ಮೇಘಾ, ಡಾ. ದಾನಮ್ಮ ಝಳಕಿ, ಸುನಿತಾ ನಂದೆಣ್ಣವರ, ವಿಜಯಲಕ್ಷ್ಮಿ, ಲಲಿತಾ, ಪ್ರೇಮಾ ಹಾಗೂ ಶರಣರಾದ ಶಂಕರ ಶೆಟ್ಟಿ, ಅಧ್ಯಕ್ಷರು ಎಸ್ ಜಿ ಸಿದ್ನಾಳ, ವಚನ ವಿಶ್ಲೇಷಣೆ, ವಾಚನ, ಗಾಯನ ಮಾಡಿದರು.

ಶರಣ ಅಪ್ಪಾಸಾಹೇಬ ತುಪ್ಪದವರು ಮಾತನಾಡಿ, ಲಿಂಗಾಯತ ಧರ್ಮವು ಆರ್ಥಿಕ , ಸಾಮಾಜಿಕ, ವೈಜ್ಞಾನಿಕ ಅಷ್ಟೇ ಅಲ್ಲ ಇದೊಂದು ಸರ್ವಾಂಗೀಣ ಅಭಿವೃದ್ಧಿ ಹೊಂದಿದ ಪರಿಪೂರ್ಣ ಧರ್ಮವಾಗಿದ್ದು ಅತ್ಯಂತ ಶ್ರೇಷ್ಠವಾದ ಧರ್ಮವಾಗಿದೆ ಎಂದು ಹೇಳಿದರು.

ಶೋಭಾ ಶಿವಳ್ಳಿ, ಸುನಿತಾ ನಂದೆಣ್ಣವರ, ಲಲಿತಾ ರುದ್ರಗೌಡರ ಪ್ರಾರ್ಥನೆ ನಡೆಸಿಕೊಟ್ಟರು. ಕಟ್ಟಿಮನಿಯವರು ನಿರೂಪಣೆ ಮಾಡಿದರು. ಎಲ್ಲ ಶರಣ ಶರಣೆಯರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group