ಹಾಸನ : ದಿ. 22:01:25 ರಂದು ಎಸ್. ಪಿ. ಕಚೇರಿಯಲ್ಲಿ ಕರ್ನಾಟಕ ಮಾನವ ಹಕ್ಕುಗಳ ಜನ ಸೇವಾ ಸಮಿತಿ(ರಿ) ಹಾಗೂ ಪ್ರತಿಮಾ ಸಾಮಾಜಿಕ, ಸಾಂಸ್ಕೃತಿಕ ಟ್ರಸ್ಟ್ (ರಿ) ಸಹಯೋಗದಲ್ಲಿ ನೂತನವಾಗಿ ಹಾಸನ ಜಿಲ್ಲೆಗೆ ಆಗಮಿಸಿರುವ ಎಸ್. ಪಿ. ಶುಭಾನ್ವಿತ ಮೇಡಂ ರವರನ್ನು ಭೇಟಿಮಾಡಿ ಹಲವಾರು ಸಮಸ್ಯೆಗಳನ್ನು ಚರ್ಚಿಸುತ್ತಾ ಸಮಸ್ಯೆಗಳನ್ನು ಬಗೆಹರಿಸಬೇಕಾಗಿ ವಿನಂತಿಸಿಕೊಳ್ಳಲಾಯಿತು. ನಂತರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಚರ್ಚಿಸುತ್ತಾ ಅಹಿತಕರ ಘಟನೆಗಳು ನಡೆಯದಂತೆ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿ ಹಾಗೂ ಹೆಣ್ಣು ಮಕ್ಕಳಿಗೆ ಹೆಚ್ಚಿನ ರಕ್ಷಣೆಯ ಅವಶ್ಯಕತೆ ಇದೆ ಎಂದು ತಿಳಿಸುತ್ತಾ ಹಾಸನದಲ್ಲಿ ಗಾಂಜಾ, ಡ್ರಗ್ಸ್, ಹೆಚ್ಚಾಗಿದೆ. ಗಾಂಜಾ, ಡ್ರಗ್ಸ್, ಹಾವಳಿಯ ನಿರ್ಣಾಮ ಮಾಡುವಂತೆ ಸಮಿತಿ ಹಾಗೂ ಟ್ರಸ್ಟ್ ವತಿಯಿಂದ ಕೇಳಿಕೊಳ್ಳಲಾಯಿತು ಹಾಗೂ ನಿಮ್ಮಂತ ಮಹಿಳಾ ಅಧಿಕಾರಿಗಳು ಅನೇಕ ಮಹಿಳೆಯರಿಗೆ ಸ್ಫೂರ್ತಿ ಎಂದು ಶುಭಾನ್ವಿತ ಮೇಡಂ ರವರನ್ನು ಕುರಿತು ಆಶುಕವಿತೆಯನ್ನು ಸಾಹಿತಿ. ಶಿಕ್ಷಕಿ. ಸಮಾಜ ಸೇವಕಿ, ಸಮಿತಿಯ ಹಾಸನ ಮಹಿಳಾ ಜಿಲ್ಲಾಧ್ಯಕ್ಷೆ ಹಾಗೂ ಟ್ರಸ್ಟ್ ನ ಸಂಸ್ಥಾಪಕರು ಹೆಚ್. ಎಸ್. ಪ್ರತಿಮಾ ಹಾಸನ್ ತಿಳಿಸಿದರು.
ನಂತರ ಹಾಸನ ನಗರದ ಸಮಸ್ಯೆಗಳಿಗೆ ಶೀಘ್ರ ಪರಿಹಾರವನ್ನು ನೀಡಬೇಕಾಗಿ ಸಮಿತಿಯ ಜಿಲ್ಲಾಧ್ಯಕ್ಷ ರವಿಕಿರಣ್ ವಿನಂತಿಸಿಕೊಂಡರು. ಎಲ್ಲಾ ಸಮಸ್ಯೆಗಳನ್ನು ಕೇಳಿ ಎಸ್ ಪಿ ರವರು ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ರಮ್ಯಾ, ಧರಣೇಶ , ಮೋಹನ , ವೇಣು ಇನ್ನೂ ಹಲವರು
ಉಪಸ್ಥಿತರಿದ್ದರು.

