ದಿ.೩೦.೧೧.೨೫ ರಂದು ಮಹಾಲಿಂಗಪೂರದಲ್ಲಿ ನಡೆದ ಕೊಪ್ಪಳ ಗವಿ ಸಿದ್ದೇಶ್ವರರ ಪ್ರವಚನದ ಸಾರ
ದುಡ್ಡಿದವರು ಯಶಸ್ವಿ ಮನುಷ್ಯ ಅಲ್ಲ
ಸಾಕಷ್ಟು ಬಂಗಾರ ಗಳಿಸಿದವರು ಯಶಸ್ವಿ ಮನುಷ್ಯ ಅಲ್ಲ
ಯಾರ ಎದೆ ಸಂತೋಷದಿಂದ ತುಂಬಿರುತ್ತದೆಯೋ ಆವನು ಯಶಸ್ವಿ ಪುರುಷ ಈ ಜೀವನದಲ್ಲಿ ಸದಾ ಸಂತೋಷವಾಗಿರುವುದೇ ಮೋಕ್ಷ. ಮನುಷ್ಯ ಆರೋಗ್ಯ ಲೆಕ್ಕಿಸದೇ ಗಳಿಸುತ್ತಾನೆ ಆದರೆ ಆರೋಗ್ಯ ಸಂಪಾದನೆಗಾಗಿ ದವಾಖಾನೆಗೆ ಹಣ ಸುರಿಯುತ್ತಾರೆ. ಆದ್ದರಿಂದ ಜೀವನದಲ್ಲಿ ಆರೋಗ್ಯ ಮತ್ತು ಆನಂದ ಬಹಳ ದೊಡ್ಡದು.
ನಾವು ಎಷ್ಟೇ ಸಂಪತ್ತು ಗಳಿಸಿದರೂ ಆ ಸಂಪತ್ತು ದೊಡ್ಡದಲ್ಲ ನಾವು ಬದುಕಿನಲ್ಲಿ ಕಂಡುಕೊಂಡ ಸಂತೋಷ ಬಹಳ ದೊಡ್ಡದು ಉರಿಲಿಂಗ ಪೆದ್ದಿಯ ಪುಣ್ಯ ಸ್ರ್ತೀ ಕಾಳವ್ವೆ
ಒಂದು ಮಾತು ಹೇಳ್ತಾಳೆ
ಮನುಷ್ಯ ಸಂತಸವಾಗಿರಲು ನಾಲ್ಕು ಕೆಲಸ ಮಾಡಬೇಕು
1. ಭೂಮಿ ಮೇಲಿನ ಪ್ರತಿಯೊಬ್ಬರೂ ಕಾಯಕ ಮಾಡಬೇಕು
2. ಮಾಡುವ ಕೆಲಸ ಪ್ರೀತಿಯಿಂದ ಮಾಡಬೇಕು
3. ನಾವು ಮಾಡುವ ಕೆಲಸ ಸತ್ಯ ಶುದ್ಧವಾಗಿರಬೇಕು.
4.ಯಾವ ಕೆಲಸ ಮಾಡಿದರೂ ಫಲದ ಅಪೇಕ್ಷೆ ಇರಬಾರದು
ಇವುಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಪಾಲಿಸಿದರೆ ಎಲ್ಲಾ ಕಡೆ ಸಂತೋಷ ನೆಲೆಸಿರುತ್ತದೆ. ಬದುಕು ಭಗವಂತ ನೀಡಿದ ಬಹುದೊಡ್ಡ ಕಾಣಿಕೆ ಇದನ್ನು You use it other wise you loose it
ಆಲಸ್ಯ ಮನುಷ್ಯನ ಬಹುದೊಡ್ಡ ರೋಗ ಅದರಿಂದ ಹೊರಬರಬೇಕು. Facebook ದಾಗ ಲಕ್ಷ ಮಂದಿ ಫಾಲೋವರ್ಸ್ ಇರುವುದಕ್ಕಿಂತ ನಮ್ಮ ಪೇಸ್ ಒಂದು ದಿನ ಬುಕ್ (ಪುಸ್ತಕ)ದಾಗ ಬರಬೇಕು ಹಂಗ ಬದುಕು ನಡೆಸಬೇಕು
ನಮ್ಮ ಬದುಕನ್ನು Try to better than yesterday ಅನ್ನುವ ರೀತಿಯಲ್ಲಿ ನಡೆಸಬೇಕು. ನೂರು ಒಳ್ಳೆಯ ಕೆಲಸ ಮಾಡಿದರೂ ಯಾವುದಾದರೂ ಒಂದು ಕೆಲಸ ತಪ್ಪು ಮಾಡಿದರ ಜಗತ್ತು ಅದನ್ನು ನೆನಪಿಡತೈತಿ ಅದಕ್ಕ ಬಹಳ ಎಚ್ಚರದಿಂದ ಜೀವನ ನಡೆಸಬೇಕು.
ಬದುಕಿನೊಳಗ ಬಹಳ ಅಡೆತಡೆಗಳು ಬರತಾವ ಅದರಲ್ಲಿ
ಕಹಿ ಕೊಟ್ಟಿದ್ದನ್ನು ಮರೀಬೇಕು
ಸಿಹಿ ಕೊಟ್ಟಿದ್ದನ್ನು ನೆನೆಬೇಕು
ಭಗವಂತ ಕೊಟ್ಟ ತೀರ್ಪಿಗೆ ನಾವೆಲ್ಲರೂ ತಲೆಬಾಗಬೇಕು
ಅವನ ಆಜ್ಞೆಯಂತೆ ನಾವು ನಡೆಯಬೇಕು.
ಸಂಗ್ರಹ:-
✍️✍️ ಶಿವಕುಮಾರ.
ಕೋಡಿಹಾಳ ಮೂಡಲಗಿ

