ಮೂಡಲಗಿ – ಸ್ಥಳೀಯ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಪರಭಾಷಾ ಸಿಬ್ಬಂದಿಯನ್ನು ಹಾಕಿದ್ದು ಗ್ರಾಹಕರಿಗೆ ತೊಂದರೆಯಾಗಿ ಪರಿಣಮಿಸಿದೆ. ಇಂಥ ಸಿಬ್ಬಂದಿ ಯಾಕೆ ಎಂದು ಮೂಡಲಗಿ ಸ್ವಾಭಿಮಾನ ಕನ್ನಡ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಸುಭಾಸ ಕಡಾಡಿ ಕೇಳುತ್ತಾರೆ.
ಮೂಡಲಗಿಯ ಕೆನರಾ ಬ್ಯಾಂಕ್ ಹಾಗೂ ಎಸ್ ಬಿಐ ಬ್ಯಾಂಕುಗಳಿಗೆ ಸ್ಥಳೀಯ ಗ್ರಾಹಕರು ಬರುತ್ತಾರೆ ಅವರಲ್ಲಿ ಹೆಚ್ಚಿನವರು ಅಶಿಕ್ಷಿತರಿರುತ್ತಾರೆ. ಅದರಲ್ಲೂ ಮೋದಿಯವರು ೨೦೧೪ ರಲ್ಲಿ ಝೀರೋ ಖಾತೆ ಮಾಡಿದ ನಂತರ ಅಶಿಕ್ಷಿತ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ ಅವರೇ ಬ್ಯಾಂಕಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಆದರೆ ಬ್ಯಾಂಕ್ ಸಿಬ್ಬಂದಿ ಪರಭಾಷೆಯವರಾಗಿರುವುದರಿಂದ ಸ್ಥಳೀಯ ಗ್ರಾಹಕರಿಗೆ ಸಮಸ್ಯೆಯಾಗುತ್ತದೆ. ಅದರಲ್ಲೂ ಸಿಬ್ಬಂದಿ ಸರಿಯಾಗಿ ಸಹಕಾರ ನೀಡದ್ದರಿಂದ ಗ್ರಾಹಕರು ಪರದಾಡಬೇಕಾಗಿದೆ.
ಕರ್ನಾಟಕದಲ್ಲಿ ಬೀದರದಿಂದ ಚಾಮರಾಜನಗರದವರೆಗೂ ಕನ್ನಡದಲ್ಲಿ ಮಾತನಾಡುತ್ತಾರೆ ಅಂಥ ಸಿಬ್ಬಂದಿ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಯಾಕೆ ಸಿಗೋದಿಲ್ಲ ಎಂದು ಕಡಾಡಿಯವರು ಪ್ರಶ್ನೆ ಮಾಡಿದ್ದಾರೆ.
ಸ್ಥಳೀಯ ಭಾಷೆ ಅರ್ಥವಾಗದ ಸಿಬ್ಬಂದಿಯನ್ನು ಬ್ಯಾಂಕಿಗೆ ಹಾಕಬಾರದು ಎಂದು ಅವರು ಆಗ್ರಹಿಸಿದ್ದಾರೆ.