ಭೂಮಿಯ ಮೇಲೆ ಇರುವ ಎಲ್ಲ ಜೀವಿಗಳಿಗೂ ನೀರು ಮೂಲವಾಗಿದೆ. ಈ ನೀರಿನ ಅರಿವಿಗಾಗಿ ಹಾಗೂ ಸಂರಕ್ಷಣೆಗಾಗಿ ಮಾರ್ಚ ೨೨ ರಂದು ವಿಶ್ವ ಜಲ ದಿನ ಆಚರಣೆ ಮಾಡಲಾಗುತ್ತದೆ. ಮುಂದಿನ ಪೀಳಿಗೆಗೆ ಈ ಭೂಮಿಯನ್ನು ಸುರಕ್ಷಿತವಾಗಿ ಬಿಟ್ಟು ಹೋಗಬೇಕಾಗಿರುವದರಿಂದ ನಾವೆಲ್ಲ ನೀರಿನ ಬಳಕೆ ಹಾಗೂ ಉಳಿಕೆಯ ಮಹತ್ವವನ್ನು ಅರಿವುದು ಮುಖ್ಯವಾಗಿದೆ.
ನೀರು ವಿಶ್ವದ ೭೦೦ ಕೋಟಿ ಜನರಿಗೆ ಹಾಗೂ ನೀರನ್ನರಸಿ ಬದುಕುವ ಲೆಕ್ಕವಿರದ ಮಾನವೇತರ ಜೀವಿಗಳಿಗೂ ಇದು ಆಧಾರವಾದ್ದರಿಂದ ಮಿತವ್ಯಯ ಬಳಕೆ ಮಾಡುವದು ಅನಿವಾರ‍್ಯವಾಗಿದೆ. ದಿನೇ ನದಿಗಳು ಕಲುಷಿತವಾಗುತ್ತಿವೆ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿತ ಕಂಡಿದೆ ಬಾವಿಗಳು ಕೆರೆಗಳು ಬತ್ತಿವೆ. ಇವೆಲ್ಲದರ ಅರಿವು ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ತಿಳಿಸುವದರಿಂದ ನೀರಿನ ಬಳಕೆ ಬಗ್ಗೆ ಜಾಗೃತಿ ಮೂಡಿಸಬಹುದಾಗಿದೆ. ಮಳೆ ನೀರನ್ನು ಸಂಗ್ರಹಿಸಿ ಅಂತರ್ಜಲ ಮಟ್ಟ ಹೆಚ್ಚಿಸಬಹುದಾಗಿದೆ. ಸಸ್ಯಗಳು ನೀರನ್ನು ಹಿಡಿದಿಟ್ಟುಕೊಂಡು ಅಂತರ್ಜಲ ಮಟ್ಟ ಹೆಚ್ಚಾಗುವದರಿಂದ ಅರಣ್ಯೀಕರಣಕ್ಕೆ ಹೆಚ್ಚು ಮಹತ್ವ ನೀಡಬೇಕಿದೆ ಇನ್ನು ನೀರು ಉಳಿಸಿಕೊಳ್ಳುವದು ನಮ್ಮ ಮೂಲಭೂತ ಕರ್ತವ್ಯವಾಗಬೇಕು. ರೈತರು ತಮ್ಮ ಗದ್ದೆಗಳಿಗೆ ಕಡಿಮೆ ನೀರನ್ನು ಬಳಕೆ ಮಾಡುವ ನೂತನ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು ದೇಶದ ಕೃಷಿಯಲ್ಲಿ ಭತ್ತದ ಬೆಳೆಗೆ ಶೇ ೪೫ ರಷ್ಟು ಬೇಕಾಗುತ್ತದೆ ರೈತರಿಗೆ ಕಡಿಮೆ ಬಳಕೆ ಮಾಡಿ ಅಧಿಕ ಇಳುವರಿ ಪಡೆಯುವ ತಂತ್ರಗಳನ್ನು ಕೃಷಿ ವಿಶ್ವವಿದ್ಯಾಲಯಗಳು ಪರಿಚಯಿಸಬೇಕಿದೆ. ಈ ಭೂಮಿಯ ಮೇಲೆ ಇರುವ ಕನಿಷ್ಠ ನೀರನ್ನು ಆದಷ್ಟು ಮುತವರ್ಜಿ ವಹಿಸಿ ಉಪಯೋಗ ಮಾಡಬೇಕು.ವಿದ್ಯಾರ್ಥಿ ಜೀವನದಲ್ಲಿ ನೀರಿನ ಬಳಕೆಯ ಶಿಸ್ತಿನ ಪಾಠವನ್ನು ಮುಖ್ಯ ಪಾಠಗಳಲ್ಲಿ ಸೇರಬೇಕಿದೆ ನದಿ ಪಾತ್ರದ ಜನರು ನದಿಗೆ ಕಲುಷಿತ ಸೇರುವದನ್ನು ತಡೆಯಬೇಕು ಇರುವ ಕೆರೆಗಳನ್ನು ಶುದ್ಧವಾಗಿಟ್ಟುವ ಕೆಲಸ ನಾಗರಿಕ ಸಮಾಜದ್ದಾಗಬೇಕು ಮಳೆ ಬಂದಾಗ ಕೆರೆಗೆ ಸೇರುವ ನೀರಿನ ಹರಿವುಗಳನ್ನು ಸರಾಗಮಾಡುವ ಕೆಲಸಗಳನ್ನು ಆಯಾ ಸ್ಥಳೀಯ ಸಂಸ್ಥೆಗಳು ಮಾಡಬೇಕು. ಕಾರ್ಖಾನೆಯ ವಿಷ ಪದಾರ್ಥಗಳ ನೀರು ನದಿಗೆ ಸೇರದಂತೆ ತಡೆಯಬೇಕು. ವ್ಯಕ್ತಿ ನೀರ ಬಳಕೆ ನೀತಿಯನ್ನು ಅಳವಡಿಸಿಕೊಳ್ಳಬೇಕು.
ವಿನೋದ ರಾ ಪಾಟೀಲ, ಚಿಕ್ಕಬಾಗೇವಾಡಿ