ಯಾದಗಿರಿ: ಬೆಂಕಿ ಹಚ್ಚಿ ಯುವಕನ ಹತ್ಯೆಗೈದ ಕಿರಾತಕರು

0
440

ಯಾದಗಿರಿ – ಜಿಲ್ಲೆಯಲ್ಲಿ ದಿನೇ ದಿನೇ ಅಪರಾಧ ಪ್ರಕರಣಗಳು ಜಾಸ್ತಿ ಆಗುತ್ತಾ ಇದ್ದು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಯಾದಗಿರಿ ಜನರು ಆಕ್ರೋಶ ವ್ಯಕ್ತಪಡಿಸಿದರು.

ಯುವಕನೊಬ್ಬನನ್ನು ಹತ್ಯೆಗೈದು ಬೆಂಕಿ ಹಚ್ಚಿರುವ ಪ್ರಕರಣ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯಾರೋ ಕಿಡಿಗೇಡಿಗಳು ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಬೂದನೂರು ಗೇಟ್ ಬಳಿ ಇರುವ ಕಾಲುವೆ ಪಕ್ಕದ ಕಸದಲ್ಲಿ ಮೃತದೇಹವನ್ನು ಬಿಸಾಕಿ ಹೋಗಿರುವುದಾಗಿ ತಿಳಿದುಬಂದಿದೆ.
ಮೃತ ಯುವಕನನ್ನು ನಗನೂರು ಗ್ರಾಮದ ನಾಗೇಶ (26) ಎಂದು ಗುರುತಿಸಲಾಗಿದೆ
ನಿನ್ನೆ ರಾತ್ರಿ ಹತ್ತು ಗಂಟೆ ಸಮಯದಲ್ಲಿ ಮನೆಯಿಂದ ಹೊರಗಡೆ ಹೋಗಿದ್ದ ಯುವಕ ಇಂದು ಬೂದನೂರು ಗೇಟ್ ಬಳಿ ಶವವಾಗಿ ಪತ್ತೆಯಾಗಿದ್ದಾನೆ.
ನಾಗೇಶ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು ಯುವಕನ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.ಆದರೆ ಇಂಥ ಅಪರಾಧ ಪ್ರಕರಣಗಳ ಬಗ್ಗೆ ಪೊಲೀಸರು ಗಂಭೀರವಾಗಿ ಯೋಚಿಸಬೇಕು ಹಾಗೂ ಪ್ರಕರಣಗಳಿಗೆ ತಡೆ ತರಬೇಕೆಂಬುದು ಸಾರ್ವಜನಿಕರ ಅನಿಸಿಕೆಯಾಗಿದೆ
ಘಟನಾ ಸ್ಥಳಕ್ಕೆ ಸಿಪಿಐ ಚನ್ನಯ್ಯ ಹಿರೇಮಠ ಭೇಟಿ, ಪರಿಶೀಲನೆ ನಡೆಸಿದರು

ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ