spot_img
spot_img

ಎ ಬಿ ಮ್ಯೂಸಿಕ್ ಸ್ಟುಡಿಯೋ ಉದ್ಘಾಟನೆ

Must Read

spot_img

ಬೆಳಗಾವಿ ನಗರದ ರಾಮತೀರ್ಥ ನಗರದಲ್ಲಿ ಕುಮಾರ ಅಭಿಷೇಕ ಕೋರಿಶೆಟ್ಟಿ (ಸೌಂಡ ಇಂಜನೀಯರ) ಇವರ ಎ.ಬಿ. ಮ್ಯೂಸಿಕ್ ಸ್ಟೂಡಿಯೋವನ್ನು ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಅವರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಅಲ್ಪ ಸಂಖ್ಯಾತ ನಿಗಮದ ಅಧ್ಯಕ್ಷರಾದ ಮುಖ್ತಾರ ಪಠಾಣ ಮತ್ತು ರಾಮತೀರ್ಥ ನಗರದ ನಗರ ಸೇವಕ ಹನಮಂತ ಕೊಂಗಾಲಿಯವರು ಆಗಮಿಸಿದ್ದರು.

ಸಮಾರಂಭದಲ್ಲಿ ಶಾಸಕರು ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಚಲನಚಿತ್ರೋದ್ಯಮ ಬೆಳೆಯಬೇಕಾದರೆ ಮತ್ತು ಇಲ್ಲಿಯ ಸ್ಥಳೀಯ ಕಲಾವಿದರಿಗೆ ಅವಕಾಶ ಮಾಡಿಕೊಡಲು ಇಂತಹ ಸ್ಟುಡಿಯೋ ಅವಶ್ಯಕ ಎಂದು ಹೇಳಿದರು. ಕೆ.ಎಮ್.ಡಿ.ಸಿ ಅಧ್ಯಕ್ಷರಾದ ಮುಖ್ತಾರ ಪಠಾಣ ಮಾತನಾಡಿ, ಬೆಳಗಾವಿಯಲ್ಲಿ ಬೆರಳೆಣಿಕೆಯಲ್ಲಿರುವ ಈ ಮ್ಯೂಸಿಕ ಸ್ಟೂಡಿಯೋ ಬೆಳೆಯಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.

ಉಪಸ್ಥಿತರಿದ್ದ ರಾಮತೀರ್ಥ ನಗರ ಸೇವಕರಾದ ಹನಮಂತ ಕೊಂಗಾಲಿ, ನಾವು ಸಂಗೀತದ ಮಿಕ್ಸಿಂಗ್, ಕಂಪೋಸಿಂಗ್ ಮತ್ತು ರೆಕಾರ್ಡಿಂಗ್ ಇದಕ್ಕೆ ಬೆಂಗಳೂರಿಗೆ ಹೋಗಬೇಕಾಗಿತ್ತು. ಈಗ ಈ ಕೊರತೆಯನ್ನು ಈ ಸ್ಟೂಡಿಯೋ ಹೋಗಲಾಡಿಸುತ್ತದೆ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಇತ್ತೀಚೆಗೆ ನಿವೃತ್ತರಾದ ಕೆ.ಎಸ್.ಆರ್.ಟಿ.ಸಿ. ನೌಕರ ಮುಖಂಡರಾದ ಸಿ.ಎಸ್. ಬಿಡ್ನಾಳ ಇವರನ್ನು ಕೋರಿಶೆಟ್ಟಿ ಕುಟುಂಬದ ಪರವಾಗಿ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಮಹಾಪೌರ ಎನ್.ಬಿ. ನಿರ್ವಾಣಿ, ಈರಯ್ಯಾ ಖೋತ, ಬಿ.ಸಿ. ಯರಗಣವಿ, ಡಿ.ಡಿ.ಪಿ.ಐ. ಏ.ಬಿ. ಪುಂಡಲೀಕ, ಸುರೇಶ ಯಾದವ. ಎಮ್.ಟಿ. ಪಾಟೀಲ. ನಗರ ಯೋಜನಾಧಿಕಾರಿ (ಬುಡಾ) ಎ.ಎಸ್. ಕಾಂಬಳೆ, ಎಚ್.ಎಫ್. ಹುಂಡೇಕರ, ವಜ್ರಕಾಂತ ಸಾಲಿಮಠ. ಉದಯ ಸಿದ್ದಗೌಡರ, ಎ.ಎನ್. ಪ್ಯಾಟಿ.ಡಾ. ಬಿದರಿ. ವಿಲಾಸ ಕೆರೂರ. ಶ್ರೀಕಾಂತ ವಣ್ಣೂರ. ಕೆ.ಬಿ. ಹಿರೇಮಠ. ಎನ್. ಬಿ. ಪಾಟೀಲ. ಎ.ಕೆ. ಮಳಗಲಿ, ಎ.ಟಿ. ಬದ್ರಶೆಟ್ಟಿ ಉಪಸ್ಥಿತರಿದ್ದರು.

ಕೆ.ಎಸ್. ಅಷ್ಟಗಿ ಸ್ವಾಗತ ಹಾಗೂ ನಿರೂಪಣೆ ಮಾಡಿದರು. ಎಮ್.ಬಿ. ಹೊಸಮನಿ ವಂದಾನಾರ್ಪಣೆ ಮಾಡಿದರು.

- Advertisement -
- Advertisement -

Latest News

ಸೈನಿಕರಂತೆ ಸದಾ ಸೇವೆ ಸಲ್ಲಿಸುವ ಪೊಲೀಸರ ಕಾರ್ಯ ಸ್ತುತ್ಯರ್ಹ- ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸರು ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯರ್ಹವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು. ರವಿವಾರದಂದು ತಾಲೂಕಿನ ಕುಲಗೋಡ...
- Advertisement -

More Articles Like This

- Advertisement -
close
error: Content is protected !!