‘ಯೋಗದೂತ’ ‘ ಯೋಗಪ್ರದರ್ಶನದ ಗಾರುಡಿಗ’ ‘ಯೋಗ ತಿರುಕ’ ಪ್ರೊ.ಲಕ್ಷ್ಮಣಕುಮಾರ ಸಣ್ಣೆಲ್ಲಪ್ಪನವರ

Must Read

ಕರ್ನಾಟಕಕ್ಕೆ ಸಂದ ಭಾರತ ಸರ್ಕಾರದ ‘ ಪಿ ಎಮ್ ಯೋಗ ಪ್ರಶಸ್ತಿ’ (‘PM YOGA AWARD’)

(ದಿ. 21-01-2026 ರಂದು ಪ್ರೊ.ಲಕ್ಷ್ಮಣಕುಮಾರ ಅವರ 91 ನೇ ಜನ್ಮದಿನ)
ನಿಮಿತ್ತ ತಮ್ಮ ಜನಪ್ರೀಯ ದಿನಪತ್ರಿಕೆಯಲ್ಲಿ ಈ ಲೇಖನ ಭಾವಚಿತ್ರ ಸಹಿತವಾಗಿ ಪ್ರಕಟಿಸಲು ವಿನಂತಿ ಸರ್ ದಯವಿಟ್ಟು.)

ದೆಹಲಿಯ ‘ಭಾರತ ಮಂಟಪಮ್ ‘ದಲ್ಲಿ ಜರುಗಿದ ದ್ವಿತೀಯ ‘ವಿಶ್ವ ಆರೋಗ್ಯ ಸಂಸ್ಥೆ’ಯ ಜಾಗತಿಕ ಶೃಂಗಸಭೆ (2 nd WHO Global Summit) ಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕ ವಿಶ್ವವಿದ್ಯಾಲಯದ ಯೋಗ ಅಧ್ಯಯನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಯೋಗದೂತ ಪ್ರೊ. ಲಕ್ಷ್ಮಣ ಕುಮಾರ್ ಸಣ್ಣೆಲ್ಲಪ್ಪನವರ ಅವರಿಗೆ ಜೀವಮಾನದ ಯೋಗ ಸಾಧನೆಗಾಗಿ ಭಾರತ ಸರಕಾರದ ‘ಪಿ ಎಂ ಯೋಗ ಪ್ರಶಸ್ತಿ’ (‘ PM YOGA AWARD’)ಯನ್ನು ಪ್ರದಾನಿಸಿ ಗೌರವಿಸಿದರು.

ಪ್ರೊ ಲಕ್ಷ್ಮಣ ಕುಮಾರವರು ಕಳೆದ 78 ವರ್ಷ, (1948 ರಿಂದ ಇಂದಿನವರೆಗೂ) ಗಳಿಂದ ನಿರಂತರವಾಗಿ ದೇಶ, ವಿದೇಶಗಳಲ್ಲಿ ವಿವಿಧ ಬಗೆಗಳಲ್ಲಿ ಉಚಿತವಾಗಿ ಯೋಗ ಕ್ಷೇತ್ರಕ್ಕೆ ತ್ರಿಕರಣಪೂರ್ವಕವಾಗಿ ಸಲ್ಲಿಸಿದ ಸೇವೆಗೆ ಸಂದ ಪ್ರಶಸ್ತಿಯಿದು.

ಈ ಜನವರಿ ತಿಂಗಳಿಗೆ ತಮ್ಮ ಜೀವನದ 90 ವಸಂತಗಳನ್ನು ಪೂರ್ಣಗೊಳಿಸಿ 91ನೇ ವಯಸ್ಸಿಗೆ ಪಾದಾರ್ಪಣೆ ಮಾಡುತ್ತಿರುವ ಲಕ್ಷ್ಮಣ ಕುಮಾರವರು ತಮ್ಮ 12 ನೆಯ ವಯಸ್ಸಿನಿಂದ ಯೋಗ ಅಭಿಯಾನವನ್ನು ಆರಂಭಿಸಿರುವರು. ತಮ್ಮ ಹಳ್ಳಿಯಿಂದ ದೇಶದ ರಾಜಧಾನಿ ದಿಲ್ಲಿಯವರೆಗೆ ಅವರು ಕೈಕೊಂಡ ಬಹುಮುಖ ಯೋಗ ಸೇವೆಯು ಅವರಿಗೆ ಆಗ ‘ಯೋಗ ತಿರುಕ’ ಎಂಬ ಬಿರುದನ್ನು ನೀಡಿತು.

‘ವಿವರಣಾತ್ಮಕ-ಯೋಗ-ಪ್ರದರ್ಶನ’ (‘Lecture Cum Demonstration’)ದ ‘ಗಾರುಡಿಗ’ ಎಂಬ ಹೆಸರನ್ನೂ ಪಡೆದ ಪ್ರೊ ಲಕ್ಷ್ಮಣಕುಮಾರವರು ತಮ್ಮ ಅಪ್ರತಿಮ ಕಲೆಯಿಂದ ‘ಯೋಗಜಾಗೃತಿ’ಯನ್ನುಂಟು ಮಾಡಿದರು.

‘ಎಲ್ಲರಿಗೂ ಯೋಗ’ (‘YOGA FOR ALL’) ಎಂಬ ಘೋಷವಾಕ್ಯದ ಧ್ಯೇಯದೊಂದಿಗೆ ತಮ್ಮ’ ಉತ್ಸಾಹಿ’ ಯೋಗ ಮಂದಿರದ ಮೂಲಕ ಯೋಗಜ್ಯೋತಿಯನ್ನು ಬೆಳಗಿಸಿದರು. ಯೋಗದ ಬಗ್ಗೆ ಅನೇಕ ತಪ್ಪು ತಿಳಿವಳಿಕೆಗಳಿದ್ದ 50 ರ ದಶಕದಲ್ಲಿ ಹಲವಾರು ಸ್ಥಳಗಳಿಗೆ ಸಂಚರಿಸಿ ಎಲ್ಲ ಕ್ಷೇತ್ರಗಳ ಜನ ಎಲ್ಲ ಜನರಿಗೆ ಯೋಗ ವಿಭಿನ್ನ ವಿಧಗಳಲ್ಲಿ ಹೇಗೆ ಪ್ರಯೋಜನಕಾರಿ ಎಂಬುದನ್ನು ವೈಜ್ಞಾನಿಕವಾಗಿ ಮನದಟ್ಟು ಮಾಡಿದರು.

ಇವರು 1989 ರಲ್ಲಿ ಭಾರತ ಸರಕಾರದಿಂದ ವಿದೇಶ ಸೇವೆಗೆ ರಾಷ್ಟ್ರ ಮಟ್ಟದಲ್ಲಿ ನಡೆದ ಸಂದರ್ಶನದಲ್ಲಿ ಪ್ರಥಮ ರಾಗಿ ಆಯ್ಕೆಯಾಗಿ ಆಗಿನ ಸೋವಿಯತ್ ದೇಶ (USSR) ಕ್ಕೆ ಅಂದಾಜು ನಾಲ್ಕು ವರ್ಷಗಳ ಕಾಲ ಯೋಗ ಬೋಧನೆಗೆ ಕಳುಹಿಸಲ್ಪಟ್ಟ ಭಾರತ ಸರಕಾರದ ಪ್ರಥಮ ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಶಿಕ್ಷಕ (First International Yoga Teacher Selected by Government of INDIA) ರೂ ಆಗಿರುವರು. ಪ್ರಪಂಚದ ಅತಿ ಬಲಿಷ್ಠ ಕಮ್ಯುನಿಸ್ಟ್ ರಾಷ್ಟ್ರವಾದ ಸೋವಿಯತ್ ದೇಶದ ಜನತೆಯಿಂದ “We will die without yoga”) ಎಂಬ ಸ್ಲೋಗನ್ ಹೊರಡಿಸಿದ ಸಾಹಸದ ಕೀರ್ತಿಗೂ ಭಾಜನರಾಗಿರುವರು.

ಪ್ರೊ.ಲಕ್ಷ್ಮಣಕುಮಾರ ಸಣ್ಣೆಲ್ಲಪ್ಪನವರ ಇವರು ಧಾರವಾಡ ಜಿಲ್ಲೆಯ ಯರೇಕುಪ್ಪಿ ಗ್ರಾಮದ ವೀರಪ್ಪ-ಗೌರಮ್ಮ ದಂಪತಿಗಳ ಕುಲದೀಪಕರು. ಬಾಲ್ಯದಿಂದಲೂ ಕಠಿಣ ಪರಿಶ್ರಮಿಗಳು. ಫಿಲಾಸಫಿ ವಿಷಯ ಆಯ್ಕೆಮಾಡಿ ಎಂ.ಎ.ಮುಗಿಸಿದರು.1973 ರಲ್ಲಿ ಪ್ರತಿಷ್ಠಿತ ಯೋಗ ಸಂಸ್ಥೆಯಾದ ಕೈವಲ್ಯಧಾಮ ಲೋನಾವಳ (ಮಹಾರಾಷ್ಪ)ದಲ್ಲಿ ಡಿಪ್ಲೋಮಾ ಯೋಗ ಪದವಿಪಡೆದರು. ಇವರ ಯೋಗ ಪ್ರಯಾಣವು 1948 ರಿಂದಲೇ ಪ್ರಾರಂಭವಾಯಿತು.ನೀಲಕಂದಹರ ಮೇಲಿನಮನಿ ಎಂಬ ಯೋಗ ಗುರುವರ್ಯರ ಮಾರ್ಗದರ್ಶನದಲ್ಲಿ ಯೋಗ ಪರಿಣಿತರಾದರು.ತಮ್ಮ ಯೋಗದ ಕೌಶಲ್ಯವನ್ನು ಜಗತ್ತಿನಾದ್ಯಂತ 32 ರಾಷ್ಟ್ರಗಳಲ್ಲಿ ಪಸರಿಸಿದರು.

1975 ರಲ್ಲಿ ಕವಿವಿ ಧಾರವಾಡದಲ್ಲಿ ‘ಯೋಗ ಅಧ್ಯಯನ ಕೇಂದ್ರ’ ಪ್ರಾರಂಭಿಸಿ ‘ ಸರ್ಟಿಫಿಕೆಟ್ ಕೋರ್ಸ್ ಇನ್ ಯೋಗ ಕೋರ್ಸ್’ ನ್ನು ಸಂಸ್ಥಾಪಿಸಿದರು.ಇವರು ಕವಿವಿ ಯೋಗ ಅಧ್ಯಯನ ವಿಬಾಗದ ಸಂಸ್ಥಾಪಕ ಚೇರ್ ಮನ್ನರಾಗಿ,ರಾಣಿ ಚನ್ನಮ್ಮ ವಿವಿ ಬಳ್ಳಾರಿಯಲ್ಲಿ ಯೋಗ ವಿಭಾಗದ ಸಂಸ್ಥಾಪಕರೆಂಬ ಕೀರ್ತಿಶಾಲಿಗಳೆನಿಸಿರುವದು ಅಭಿಮಾನದ ಸಂಗತಿ. ಇವರ ಕುಟುಂಬದ ಸದಸ್ಯರೆಲ್ಲರೂ ಇವರ ಸಾಧನೆಗೆ ಉತ್ಸಾಹಕ್ಕೆ ಸ್ಪೂರ್ತಿಯ. ಸೆಲೆಯಾಗಿರುವ ಯೋಗ ಗಾರುಡಿಗರಿಗೆ ಸರ್ವ ಅಭಿಮಾನಿಗಳು ತೊಂಭತ್ತೊಂದನೆಯ ಹುಟ್ಟುಹಬ್ಬದ ಹ್ರೃತ್ಪೂರ್ವಕ ಶುಭಾಶಯಗಳನ್ನು ಸಮರ್ಪಿಸಿ ಶತವರುಷಕ್ಕಿಂತ ಮಿಗಿಲಾಗಿ ಆಯುರಾರೋಗ್ಯ ಸೌಭಾಗ್ಯವನ್ನು ಭಗವಂತನು ಕರುಣಿಸಲಿ ಎಂದು ಮನದುಂಬಿ ಶುಭಹಾರೈಸಿರುವರು.
—**—
–ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರ.
ಸಾಹಿತ್ಯ ಚಿಂತಕರು,ಗದಗ.
9980711435–9902841651.
svkundgol@gmail.com

LEAVE A REPLY

Please enter your comment!
Please enter your name here

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group