ಘಟಪ್ರಭಾ : ತನ್ನ ಅಪ್ರಾಪ್ತ ತಂಗಿಯ ಹಿಂದೆ ಪ್ರೀತಿಗೆ ಬಿದ್ದ ಯುವಕನನ್ನು ಯುವತಿಯ ಅಪ್ರಾಪ್ತ ವಯಸ್ಸಿನ ಅಣ್ಣನೇ ಕೊಲೆ ಮಾಡಿರುವ ಘಟನೆ ಸಮೀಪದ ರಾಜಾಪೂರ ಗ್ರಾಮದಲ್ಲಿ ನಡೆದಿದೆ
ಕೊಲೆಯಾದ ಯುವಕ ಮಂಜುನಾಥ ಸುಭಾಷ ಎಣ್ಣೆ(23) ಎಂದು ತಿಳಿದು ಬಂದಿದೆ. ಸೋಮವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಗ್ರಾಮದ ವಿಠಲ ದೇವರ ಪೂಜೆ ಮಾಡಲು ಹೋದಾಗ ದೇವಸ್ಥಾನದ ಹತ್ತಿರವೆ ಯುವತಿಯ ಅಣ್ಣ ಕಬ್ಬಿಣದ ರಾಡಿನಿಂದ ತಲೆಗೆ ಬಡಿದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ನಂತರ ಕೊಲೆ ಮಾಡಿದ ಯುವಕ ಹಿರಿಯರ ಮುಖಾಂತರ ಪೊಲೀಸ್ ಠಾಣೆಗೆ ಬರುತ್ತಿರುವಾಗ ಪೊಲೀಸ್ ಠಾಣೆಯ ಹತ್ತಿರ ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ.
ರವಿವಾರ ಸಂಜೆ ಯುವತಿಯ ಜತೆ ಮಾತನಾಡುತ್ತಿರುವಾಗ ಕೊಲೆಯಾದ ಯುವಕ ಸಿಕ್ಕಿ ಬಿದಿದ್ದು ಆ ಸಂದರ್ಭದಲ್ಲಿ ಗ್ರಾಮದಲ್ಲಿ ಗಲಾಟೆಯಾಗಿದೆ. ಆಗ ಕೊಲೆಯಾದ ಯುವಕ ತಪ್ಪಿಸಿಕೊಂಡಿದ್ದು ಇಂದು ಬೆಳಿಗ್ಗೆ ಗ್ರಾಮದ ವಿಠಲ ದೇವರ ಗುಡಿಯ ಪೂಜೆಗೆ ಬರುತ್ತಿರುವಾಗ ಮೊದಲೆ ದಾರಿಯಲ್ಲಿ ಕಾದು ಕುಳಿತಿದ್ದ ಯುವತಿಯ ಅಣ್ಣ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಘಟಪ್ರಭಾ ಪೊಲೀಸ್ ಠಾಣೆಯ ಪಿಐ ಎಚ್.ಡಿ. ಮುಲ್ಲಾ ಹಾಗೂ ಸಿಬ್ಬಂದಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

