ಅಹಮದಾಬಾದ್ ನ ಮೊಟೇರಾ ಸ್ಟೇಡಿಯಮ್ ಈಗ ನರೇಂದ್ರ ಮೋದಿ ಸ್ಟೇಡಿಯಮ್!

Must Read

ಅಹಮದಾಬಾದ್– ಗುಜರಾತ್ ನ ಅಹಮದಾಬಾದ್ ನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಮ್ ಗೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಡಲಾಗಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮೋದಿ ಕ್ರೀಡಾಂಗಣವನ್ನು ಇಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಅವರು, ನರೇಂದ್ರ ಮೋದಿ ಸ್ಟೇಡಿಯಮ್ ನಲ್ಲಿ ಸರ್ದಾರ್ ವಲ್ಲಭಭಾಯಿ ಹೆಸರಿನಲ್ಲಿ ಬೃಹತ್ ಕ್ರೀಡಾ ಸಂಕೀರ್ಣ ನಿರ್ಮಿಸಲಾಗಿದೆ. ಇದರಿಂದ ಪಟೆಲರ ಹೆಸರು ಶಾಶ್ವತವಾಗಿ ನಿಂತಂತಾಗಿದೆ. ಕೆಲವರು ಪಟೇಲರನ್ನು ಭಾರತದ ಇತಿಹಾಸದಿಂದ ಮರೆಸಲು ಪ್ರಯತ್ನಿಸಿದರು ಆದರೆ ಯಶಸ್ವಿಯಾಗಲಿಲ್ಲ ಎಂದರು.

ಮೊಟೇರಾ ( ಮೋದಿ ) ಸ್ಟೇಡಿಯಮ್ ನಲ್ಲಿ ಇದೇ ದಿ. ೨೪ ರಂದು ಭಾರತ ಮತ್ತು ಇಂಗ್ಲೆಂಡ್‌ ಕ್ರಿಕೆಟ್ ತಂಡಗಳ ನಡುವೆ ಮೂರನೇಯ ಟೆಸ್ಟ್ ಪಂದ್ಯ ನಡೆಯಲಿದೆ.

ಆಸ್ಟ್ರೇಲಿಯಾ ದ ಮೆಲ್ಬೋರ್ನ್ ಕ್ರೀಡಾಂಗಣಕ್ಕಿಂತಲೂ ದೊಡ್ಡದಾಗಿದ್ದು ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರು ಕುಳಿತು ಪಂದ್ಯ ವೀಕ್ಷಿಸಬಹುದಾಗಿದೆ.

ಮೋದಿ ಸ್ಟೇಡಿಯಮ್ ವಿಶೇಷತೆಗಳೆಂದರೆ, ಮೈದಾನದ ಮಧ್ಯೆ ಯಾವುದೇ ರೀತಿಯ ಕಂಬಗಳಿಲ್ಲ, ಹಗಲು ರಾತ್ರಿ ಪಂದ್ಯಗಳನ್ನು ಅಡೆತಡೆಯಿಲ್ಲದೆ ವೀಕ್ಷಿಸಬಹುದು, ಸಾಧಾರಣ ಮಳೆಗೆ ಪಂದ್ಯಕ್ಕೆ ಯಾವುದೇ ಅಡ್ಡಿಯುಂಟಾಗುವುದಿಲ್ಲ, ಥ್ರೀಡಿ ಥೇಟರ್ ಗಳು, ೫೫ ಕೊಠಡಿಗಳು, ಸ್ವಿಮ್ಮಿಂಗ್ ಪೂಲ್ ಹಾಗೂ ಜಿಮ್ನಾಶಿಯಮ್ ಗಳನ್ನು ಹೊಂದಿದೆ, ಮೂರು ಸಾವಿರ ಕಾರುಗಳು, ಹತ್ತುಸಾವಿರ ಬೈಕ್ ಗಳ ನಿಲುಗಡೆಗೆ ಅವಕಾಶ ಈ ಸ್ಟೇಡಿಯಮ್ ನಲ್ಲಿ ಇದೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group