spot_img
spot_img

ಇದು ಕನ್ನಡದ ಕಾಲ !

Must Read

- Advertisement -

Times of ಕರ್ನಾಟಕ ಎಂಬ ವೆಬ್ ಪತ್ರಿಕೆ ಮಾಡಬೇಕೆಂಬ ಯೋಚನೆ ಬಂದಾಗ ಮೊದಲು ಅನ್ನಿಸಿದ್ದೇ ಇದು ಕನ್ನಡದ ಕಾಲ ಎಂಬ ಅನಿಸಿಕೆ. ಕನ್ನಡಕ್ಕೊಂದು ಕಾಲವೆಂಬುದಿಲ್ಲ. ಅದು ಪುರಾತನ ಭಾಷೆ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು. ಒಂದು ವೈಭವಯುತ ಸಾಂಪ್ರದಾಯಿಕ ಪರಂಪರೆಯನ್ನೇ ಹೊಂದಿದೆ. ಅನೇಕ ಜಗದ್ವಿಖ್ಯಾತ ಕವಿಗಳು ಕನ್ನಡದ ದೀಪವನ್ನು ಪ್ರಾಚೀನ ಕಾಲದಿಂದಲೂ ಬೆಳಗಿಸುತ್ತ ಬಂದಿದ್ದು ಕನ್ನಡ ಭಾಷೆಯೆಂಬುದು ಎಂದೆಂದಿಗೂ ಆರದ ದೀಪವಾಗಿ ಬೆಳಗುತ್ತಲೇ ಇರುತ್ತದೆ. ಆದಿಕವಿ ಪಂಪ, ರನ್ನ,ಜನ್ನ ಅವರ ನಂತರ ಕುವೆಂಪು, ಬೇಂದ್ರೆ, ಮಾಸ್ತಿ,ಕಾರಂತರು,ಗೋಕಾಕರು ಅಲ್ಲದೆ ಅನಂತಮೂರ್ತಿ, ಕಂಬಾರರು,ಕಾರ್ನಾಡರು, ಚನ್ನವೀರ ಕಣವಿ ಮುಂತಾದ ಮಹನೀಯರು ಕನ್ನಡದ ಸೊಂಪನ್ನು ಎಲ್ಲೆಡೆಗೆ ಪಸರಿಸಿದ್ದಾರೆ. ಕನ್ನಡ ತಾಯಿಗೆ ಪ್ರತಿನಿತ್ಯವೂ ಉತ್ಸವ ನಡೆಯುತ್ತಲೇ ಇರುತ್ತದೆ ಎಂದು ಸಾರಿದ ನಿತ್ಯೋತ್ಸವ ಕವಿ ಕೆ ಎಸ್ ನಿಸಾರ್ ಅಹ್ಮದ್ ರವರು ನಮ್ಮನ್ನಗಲಿ ಕನ್ನಡವನ್ನು ಬಡವಾಗಿಸಿದರು.ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಕೋರುತ್ತ….

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡಕ್ಕಿಂದು ಒಂದು ರೀತಿಯ ಕಪ್ಪು ವಕ್ಕರಿಸಿದೆ ಎಂದು ಹೇಳಬಹುದು. ಕನ್ನಡ ಬಳಕೆ ಇಂದು ಕುಗ್ಗುತ್ತ ಸಾಗಿದ್ದು ಕರ್ನಾಟಕದ ಪ್ರಜೆಗಳಲ್ಲಿ ಕನ್ನಡಾಭಿಮಾನ ಹೆಚ್ಚಿಸಲು ಸರ್ಕಾರ, ಕನ್ನಡ ಸಂಘಟನೆಗಳು ತಿಣುಕಬೇಕಾದ ವಿಪರ್ಯಾಸಕರ ಸಂದರ್ಭವಿಂದು ಬಂದೊದಗಿದೆ. ಕನ್ನಡ ರಕ್ಷಣೆಗಾಗಿ ಹಲವಾರು ಸಂಘಟನೆಗಳು ಉದ್ಭವಗೊಂಡಿದ್ದರೂ ಅವುಗಳು ತಮ್ಮದೇ ಆದ ರಾಜಕಾರಣದಲ್ಲಿ ತೊಡಗಿಕೊಂಡಿರುವುದರಿಂದಲೂ ಕನ್ನಡ ಕೈಂಕರ್ಯ ಸಮಗ್ರ ರೀತಿಯಲ್ಲಿ ಜರುಗುತ್ತಿಲ್ಲವೆಂಬುದು ನಿತ್ಯಸತ್ಯ. ಹಾಗೆಂದು ನಾವು ಕೈಕಟ್ಟಿ ಕೂರುವಂತಿಲ್ಲ. ನಮ್ಮ ಕೈಲಾದಷ್ಟು ಕನ್ನಡದ ಕೆಲಸ ಮಾಡಬೇಕಾಗಿದೆ.

ಕನ್ನಡಾಭಿಮಾನಿಗಳನ್ನು ಒಟ್ಟುಗೂಡಿಕೊಂಡು ಕನ್ನಡ ಸಾಹಿತ್ಯ, ಭಾಷೆ, ಸಂಸ್ಕ್ರತಿ, ಸಂಪ್ರದಾಯ ಗಳ ಉನ್ನತಿಗೆ ಶ್ರಮಿಸಬೇಕಾಗಿದೆ. ಆ ನಿಟ್ಟಿನಲ್ಲಿ ಈ ಪ್ರಯತ್ನ ಕನ್ನಡದ ವೆಬ್ ಪತ್ರಿಕೆ – ” Times of ಕರ್ನಾಟಕ “

- Advertisement -

ಇದರಲ್ಲಿ ಕನ್ನಡ ಸಾಹಿತ್ಯ ಅಂದರೆ ಕಥೆ, ಕವನ ಒಳಗೊಂಡಂತೆ ಸ್ಥಳೀಯ ಸುದ್ದಿಗಳು, ರಾಜ್ಯ-ದೇಶದ ರಾಜಕಾರಣ, ರಾಷ್ಟ್ರೀಯ ಅಂತಾರಾಷ್ಟ್ರೀಯ ಸುದ್ದಿಗಳು, ಆರ್ಥಿಕತೆ ಕುರಿತ ಮಾಹಿತಿ ಲೇಖನಗಳು ಪ್ರಕಟಗೊಳ್ಳಲಿವೆ. ವಿದ್ಯಾರ್ಥಿಗಳ ರಚನೆಗಳೂ ಪ್ರಕಟಗೊಂಡು ಒಂದು ರೀತಿಯಲ್ಲಿ ಪ್ರತಿಭಾ ಪ್ರದರ್ಶನಕ್ಕೆಡೆ ಮಾಡಿಕೊಡಲಿದೆ. ಇದಕ್ಕೆಲ್ಲ ನಿಮ್ಮ ಸಹಕಾರ ಬೇಕು.
ಬನ್ನಿ ನಾವೆಲ್ಲ ಒಂದಾಗಿ ಕನ್ನಡದ ಈ ಕಾಲದ ಜೊತೆ ಸಾಗೋಣ.

ಸಂಪಾದಕರು

- Advertisement -
- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group