ಬೆಂಗಳೂರು – ದೇಶದಲ್ಲಿ ಏಕ ಕಾಲದಲ್ಲಿ ಚುನಾವಣೆ ನಡೆಸಲು ಆಸ್ಪದ ನೀಡುವ ಒಂದು ದೇಶ ಒಂದೇ ಚುನಾವಣೆ ಎಂಬ ಮಹತ್ವಾಕಾಂಕ್ಷಿ ಪ್ರಸ್ತಾಪಕ್ಕೆ ಸದನದಲ್ಲಿ ಕಾಂಗ್ರೆಸ್ ಸದಸ್ಯರು ತೀವ್ವ ವಿರೋಧ ವ್ಯಕ್ತಪಡಿಸಿದರು.
ರಾಜ್ಯ ಸಂಪುಟದ ಬಜೆಟ್ ಅಧಿವೇಶನ ಇಂದಿನಿಂದ ಆರಂಭಗೊಂಡಿದ್ದು ಸದನದಲ್ಲಿ ಸ್ಪೀಕರ್ ಕಾಗೇರಿಯವರು ಒಂದು ದೇಶ ಒಂದೇ ಚುನಾವಣೆಯ ಬಗ್ಗೆ ಚರ್ಚೆಗೆ ಅವಕಾಶ ನೀಡಿದರು.
ಈ ವಿಷಯ ಕುರಿತಂತೆ ಚರ್ಚೆಗೆ ಆಸ್ಪದ ನೀಡುತ್ತಿದ್ದಂತೆ ಕೈ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಪ್ರಸ್ತಾವದ ಪ್ರತಿಯನ್ನು ಹರಿದು ಹಾಕಿದರಲ್ಲದೆ ಸ್ಪೀಕರ್ ವಿರುದ್ಧ ಪ್ರತಿಭಟನೆ ನಡೆಸಿದರು.