spot_img
spot_img

ಕಥೆಗಳಿಗೆ ಆಹ್ವಾನ

Must Read

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮೇರು ಸಾಹಿತಿ ದಿ.ಡಾ.ಕೆ ಶಿವರಾಮ ಕಾರಂತ ಅವರ ೧೨೦ ನೇ ಜನ್ಮದಿನ ಆಚರಣೆಯ ಅಂಗವಾಗಿ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ ವತಿಯಿಂದ ರಾಜ್ಯ ಮಟ್ಟದ ಕಥಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಸಕ್ತ ಕಥೆಗಾರರು ಸ್ವರಚಿತ ಮೂರು ಪುಟವಿರುವ ಕಥೆಯನ್ನು ಹಸ್ತಪ್ರತಿ ಅಥವಾ ಡಿಟಿಪಿ ಮಾಡಿಸಿರುವ ಪ್ರತಿಯನ್ನು ಇದೇ ಏಪ್ರಿಲ್ ೩೦ ರೊಳಗೆ ” ಡಾ.ಭೇರ್ಯ ರಾಮ್ ಕುಮಾರ್, ಅಧ್ಯಕ್ಷರು, ಅಖಿಲ ಭಾರತೀಯ ಕನ್ಮಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್, ಅರ್ಕೇಶ್ವರ ನಗರ ಬಡಾವಣೆ, ಕೆ ಆರ್ ನಗರ ಟೌನ್ – ೫೭೧ ೬೦೨, ಮೈಸೂರು ಜಿಲ್ಲೆ ” ಈ ವಿಳಾಸಕ್ಕೆ ಕಳಿಸಬೇಕು.

ಕಥೆಗಳು ಯಾವುದೇ ಜಾತಿ, ಧರ್ಮಕ್ಕೆ ಧಕ್ಕೆ ತರುವ ವಿಷಯ ಹೊಂದಿರಬಾರದು, ಯಾವುದೇ ಪ್ರಚೋದನಾತ್ಮಕ ವಿಷಯವಿರಬಾರದು, ಸ್ವತಂತ್ರವಾಗಿರಬೇಕು. ಆಯ್ಕೆಯಾಗುವ ಕಥೆಗಳನ್ನು “ಡಾ.ಕೆ ಶಿವರಾಮ ಕಾರಂತ – ೧೨೦” ಕೃತಿಯಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!