spot_img
spot_img

ಮಹಿಳೆಯನ್ನು ಗೌರವಿಸುವಲ್ಲಿ ದೇವತೆಗಳು ಇರುತ್ತಾರೆ

Must Read

- Advertisement -

ಇಂದು ಮಾರ್ಚ್ 8 ಎಂದರೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸ್ತ್ರೀಯರ ಸಾಮಾಜಿಕ, ಸಾಂಸ್ಕೃತಿಕ, ಮತ್ತು ಅವರ ಸಾಧನೆಗಳನ್ನು ಕೊಡುಗೆಗಳನ್ನು ಸಮಾಜಕ್ಕೆ ಪರಿಚಯಿಸುವ ಸಂಭ್ರಮದ ಸುದಿನ.
ಆಧುನಿಕವಾದ ಭಾರತವು ಪುರುಷ ಪ್ರಧಾನವಾದ ರಾಷ್ಟ್ರವಾಗಿ ಇದ್ದಾಗ ಮಹಾತ್ಮಗಾಂಧಿಯವರ ಒಂದು ಒಂದು ನುಡಿಯು ಹೀಗಿತ್ತು ‘ನಡುರಾತ್ರಿಯಲ್ಲಿ ಮಹಿಳೆಯೊಬ್ಬಳು ನಿರ್ಭಯವಾಗಿ ಏಕಾಂಗಿಯಾಗಿ ನಡೆದಾಡಿದಾಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದಂತೆ’ ಎಂದು ನುಡಿದಿದ್ದರು. ಆದರೆ ಇಂದಿನ ಪ್ರಸ್ತುತ ಸಂದರ್ಭದಲ್ಲಿ ಮಹಿಳೆಯರು ಪುರುಷರಷ್ಟೇ ಕೆಲಸ ಕಾರ್ಯದಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಹಿಂದೊಂದು ಕಾಲದಲ್ಲಿ ಅಂದರೆ ಪ್ರಾಚೀನ ಕಾಲದಲ್ಲಿ ಪುರುಷನ ಭೋಗದ ವಸ್ತುವಾಗಿ ಮತ್ತು ಕೇವಲ ಮನೆಯ ಅಡುಗೆ ಕೆಲಸಕ್ಕೆ ಮೀಸಲಾಗಿ ತನ್ನ ಸಕಲ ಸರ್ವಸ್ವವನ್ನೂ 4 ಗೋಡೆಗಳ ಮಧ್ಯ ಕಳೆಯುತ್ತ ಜೀವಿಸುತ್ತಿದ್ದ ಹೆಣ್ಣು ಇಂದು ಆಕಾಶದಲ್ಲಿ ಹಕ್ಕಿಯಂತೆ ಹಾರಾಡುತ್ತಿದ್ದಾಳೆ, ಗಡಿಯಲ್ಲಿ ಶತ್ರುಗಳ ಎದೆಯನ್ನು ಸೀಳಿ ತನ್ನ ದೇಶವನ್ನು ಕಾಪಾಡುತ್ತಿದ್ದಾಳೆ.

ಅಷ್ಟಕ್ಕೂ ಈ ಸ್ತ್ರೀ ಅಥವಾ ಮಹಿಳೆ ಎಂದರೆ ಸಂಸ್ಕೃತದಲ್ಲಿ ‘ಹೆಣ್ಣು’ ಎಂಬ ಅರ್ಥವನ್ನು ನೀಡುತ್ತದೆ. ಆದಿಯಿಂದಲೂ ಸೃಷ್ಟಿಯ ಮೂಲ ಸ್ತ್ರೀಯಾಗಿದ್ದಾಳೆ. ವಿದ್ಯಾದೇವತೆ. ಲಕ್ಷ್ಮಿಮಾತೆಯಾಗಿ ಶಕ್ತಿದೇವತೆ ಯಾಗಿದ್ದಾಳೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ತನ್ನದೇ ಆದ ಗೌರವ ಸ್ಥಾನಮಾನವನ್ನು ನೀಡಿ ಗೌರವಿಸಲಾಗುತ್ತದೆ. ಅದಕ್ಕಾಗಿ ಸಂಸ್ಕೃತದಲ್ಲಿ ಒಂದು ವಾಕ್ಯವಿದೆ “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ” ಇದರ ಅರ್ಥ ಎಲ್ಲಿ ಮಹಿಳೆಯರನ್ನು ಗೌರವದಿಂದ ಕಾಣಲಾಗುತ್ತದೆಯೋ ಅಲ್ಲಿ ದೇವಾನುದೇವತೆಗಳು ವಾಸಿಸುತ್ತಾರೆ ಎಂದು.

- Advertisement -

ಸ್ತ್ರೀ ಎಂದರೆ ಕನಸು ಹೌದು ವಾಸ್ತವವೂ ಹೌದು ಪ್ರಕೃತಿಗೂ ಸ್ತ್ರೀಗೂ ಅವಿನಾಭಾವ ಸಂಬಂಧವಿದೆ. ಸ್ತ್ರೀಯು ಭೂಮಿಯಾಗಿ ಮುಗಿಲಾಗಿ ಮೇರುಪರ್ವತವಾಗಿ ಬೆಳೆದು ನಿಂತಿದ್ದಾಳೆ ಅದಕ್ಕಾಗಿಯೇ ಕುಟುಂಬದಲ್ಲಿಯೂ ಮಾತೃವಿಗೆ ಪ್ರಧಾನ ಸ್ಥಾನವನ್ನು ನೀಡಲಾಗುತ್ತದೆ.
ಹೆಣ್ಣಿಗೆ ಒಂದು ಜೀವವನ್ನು ಸೃಷ್ಟಿ ಮಾಡುವ ಶಕ್ತಿ ಇದೆ ಅದಕ್ಕಾಗಿಯೇ ಹೆಣ್ಣಿನಲ್ಲಿ ಮಾತೃಶಕ್ತಿ, ತಾಳ್ಮೆ, ಪ್ರೀತಿ,ಕರುಣೆ, ಮಮತೆ ಸಹನೆ, ವಾತ್ಸಲ್ಯ, ಸಾಂತ್ವಾನ, ಆರೈಕೆ ,ಸತ್ಕಾರ ಗುಣಗಳು ಹುಟ್ಟಿನಿಂದಲೇ ಬಂದಿರುತ್ತವೆ.
ಆದರೂ ಕೂಡ ನಿತ್ಯ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯ, ಭ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ ,ಹೆಣ್ಣು ಬಲಿ, ಮುಂತಾದ ವಿಷಯಗಳು ಪ್ರತಿನಿತ್ಯ ನಮ್ಮ ಕಣ್ಣ ಮುಂದೆ ಬರುತ್ತವೆ ಆದರೆ ಇವೆಲ್ಲವನ್ನು ಸವಾಲಾಗಿ ತೆಗೆದುಕೊಂಡು ಹೆಣ್ಣು ಎಂದರೆ ಏನು ಎಂಬುದನ್ನು ಜಗತ್ತಿಗೆ ತಿಳಿಸಲು ಮಹಿಳೆ ಇಂದಿನ ಪ್ರತಿಯೊಂದು ಕ್ಷೇತ್ರದಲ್ಲಿಯೂ ಶಿಕ್ಷಣವನ್ನು ಪಡೆದು ಯಶಸ್ವಿಯಾಗುತ್ತಿದ್ದಾಳೆ.

ಶಿಕ್ಷಣವನ್ನು ಕಲಿತು ತನ್ನ ಸ್ವಂತ ಬಲದಿಂದ ಬದುಕುವಂಥವಳಾಗಿದ್ದಾಳೆ. ಮಹಿಳೆಯರ ಪ್ರಯತ್ನಕ್ಕೆ ಇಂದು ಅವರಿಗಿರುವ ಸ್ಥಾನಮಾನಗಳೇ ಕಾರಣ.ಹೆಣ್ಣುಮುಖ್ಯಮಂತ್ರಿಯಾಗಿಪ್ರಧಾನಮಂತಿಯಾಗಿ, ಅಧಿಕಾರಿಯಾಗಿ ,ಶಿಕ್ಷಕಿಯಾಗಿ, ಯೋಧಳಾಗಿ, ಗಗನಯಾತ್ರಿಯಾಗಿ, ಉದ್ಯಮಿಯಾಗಿ, ಕ್ರೀಡೆ, ಸಂಗೀತ ಒಂದೇ ಎರಡೇ ಆಡು ಮುಟ್ಟದ ಗಿಡ ಇಲ್ಲ ಸ್ತ್ರೀ ಕೈ ಹಾಕದ ಕೆಲಸವೇ ಇಲ್ಲ. ಸಂಸ್ಕೃತ ಶ್ಲೋಕದಲ್ಲಿ ಒಂದು ಸುಂದರ ಮಾತಿದೆ ” ಯತ್ರನಾರ್ಯಸ್ತು ಪೂಜ್ಯಂತೆ, ರಮಂತೇ ತತ್ರ ದೇವತಾ ” ಇದರಅರ್ಥ ಎಲ್ಲಿ ಸ್ತ್ರೀ ಯವರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲಸುತ್ತಾರೆ.

ಬ್ರಿಟಿಷರು ಬರುವ ಮುಂಚಿನವರೆಗೂ ಅವಳನ್ನು ” ಸತಿ ಸಹಗಮನ”ದ ಹೆಸರಲ್ಲಿ ಬೆಂಕಿ ಯಲ್ಲಿ ಜೀವಂತ ಬೇಯಿಸಿದ್ದೇವೆ. ಅವಳ ಕೊರಳಿಗೆ ಸಂಪ್ರದಾಯದ ಉರುಳು ಹಾಕಿ ಬಂಧಿಸಿದ್ದೇವೆ.

- Advertisement -

ಪುರಾಣಗಳಲ್ಲಿ ಹೆಣ್ಣನ್ನು ದೈವೀಕರಿಸಿ ಲಕ್ಷ್ಮೀ ಸರಸ್ವತಿ ಪಾರ್ವತಿ ಯರನ್ನಾಗಿ ಮಾಡಿ ಇಂದಿಗೂ ಪೂಜೆಸುತ್ತಿದ್ದೇವೆ. ಆದರೆ ಅದೇ ರಾಮಾಯಣ ಮತ್ತು ಮಹಾಭಾರತದಲ್ಲಿ ಸೀತೆ ಮತ್ತು ದ್ರೌಪದಿಯರನ್ನು ನಡೆಸಿಕೊಂಡ ರೀತಿ ಇಡೀ ಪುರುಷ ಸಮಾಜ ತಲೆ ತಗ್ಗಿಸುವಂತಿದೆ. ಮಹಿಳೆಯರು ಇಂದಿಗೂ ಪುರುಷರ ಅಡಿಯಾಳಾಗಿಯೇ ಬದುಕುತ್ತಿದ್ದಾರೆ. ತಮ್ಮ ಬುದ್ಧಿವಂತಿಕೆ ಗಟ್ಟಿತನ ದಿಟ್ಟನಿರ್ಧಾರಗಳಿಂದ ಕೆಲವು ಮಹಿಳೆಯರು ಪುರುಷರನ್ನೂ ಸೋಲಿಸಿ ಜಯ ಕಂಡಿದ್ದಾರೆ.

ಅವಿಭಕ್ತ ಕುಟುಂಬ ಇದ್ದಾಗ ಹೆಣ್ಣಿಗೆ ರಕ್ಷಣೆ ಸಹಕಾರ ಕುಟುಂಬ ಪ್ರೀತಿ ವಾತ್ಸಲ್ಯಗಳಲ್ಲಿ ಅವಳು ಮಿಂದೇಳುತ್ತಿದ್ದಳು,ಆದರೆ ಈಗಿನ ವಿಭಕ್ತ ಕುಟುಂಬದಲ್ಲಿ ಅವಳಿಗೆ ನೆಮ್ಮದಿ ಇಲ್ಲದಂತಾಗಿದೆ. ಅವಳ ಜವಾಬ್ದಾರಿ ಹೆಚ್ಚಾಗಿದೆ . ಇದುಗಂಡ ಹೆಂಡತಿ ಮಕ್ಕಳ ಚಿಕ್ಕಕುಟುಂಬ, ಮಕ್ಕಳ ಲಾಲನೆ ಪಾಲನೆ ಗಂಡನ ಬಗ್ಗೆ ಜವಾಬ್ದಾರಿ ಮಕ್ಕಳ ವಿದ್ಯಾಭ್ಯಾಸಇದರೊಂದಿಗೆ ಹೊರಗಡೆ ದುಡಿಯುವುದು. ಇಂಥ ಜವಾಬ್ದಾರಿಗಳ ಹೆಣ್ಣು ಸಮಸ್ಯೆಗಳನ್ನು ಎದುರಿಸಿ ಗಟ್ಟಿಯಾಗಿ ನಿಂತು ಮನೆಯ ನಿರ್ವಹಣೆ ಮಾಡಬೇಕಾಗುತ್ತದೆ.

ಇನ್ನು ಹೆಣ್ಣು ಹುಟ್ಟಿದಾಗ ಮೂಗುಮುರಿಯುವವರೇ ಹೆಚ್ಚು, ಬಹುತೇಕರಿಗೆ ಹೆಣ್ಣು ಎಂದರೆ ಅಲರ್ಜಿ ಅವಳಿಗೆ ಮದುವೆ ಮಾಡುವುದು ವರದಕ್ಷಿಣೆಕೊಡುವುದು, ಸಾಲಮಾಡಿತೀರಿಸಲು ಹೆಣಗಾಡುವುದು,ಅವಳ ರಕ್ಷಣೆ ಇಂಥ ಸಮಸ್ಯೆಗಳು ಪಾಲಕರನ್ನು ಕಾಡುತ್ತಿರುತ್ತವೆ. ವರದಕ್ಷಿಣೆಯಿಂದಾಗಿ ಎಷ್ಟೋ ಕುಟುಂಬಗಳುನಾಶವಾಗಿವೆ.

ಮದುವೆಯಾಗಿ ಗಂಡನ ಮನೆಗೆ ಹೋದಾಗ ವರದಕ್ಷಿಣೆ ತರಲಿಲ್ಲ ಎಂಬ ಕುಹುಕ ಮಾತು ಅತ್ತೆ ಮಾವ, ಗಂಡ ,ಮೈದುನ ನಾದಿನಿಯರ ಕಿರುಕುಳ..ಮನೆಯ ಒಳಗೆ, ಹಾಗೂ ಮನೆಯ ಹೊರಗೆ ಅನೇಕ ಕಿರುಕುಳವನ್ನು ಸಹಿಸಿಕೊಂಡು ಹೋರಾಡಬೇಕಾದ ಪರಿಸ್ಥಿತಿ ಬಂದಿದೆ.

ಯಾವ ಮನೆಯಲ್ಲಿ ದೇವರು ಖುಷಿ ಪಡುವರೋ ಅಲ್ಲಿ ಹೆಣ್ಣು ಮಕ್ಕಳು ಹುಟ್ಟುತ್ತಾರೆ.ಇಷ್ಟು ಇದ್ರೂ ಕೂಡಾ ಹೆಣ್ಣು ಹುಟ್ಟಿದಾಗ ಮೂಗು ಮುರಿಯುವ ಕೆಲಸ ಮಾತ್ರ ಬಿಟ್ಟಿಲ್ಲ. ಸ್ವಾಮಿ ವಿವೇಕಾನಂದರು ಯಾವ ಊರಿನಲ್ಲಿ ಹೆಣ್ಣು ಶಿಕ್ಷಣವನ್ನು ಕಲಿತಿರುತ್ತಾಳೊ ಆ ಊರು ಪ್ರಗತಿಯತ್ತ ಸಾಗುತ್ತದೆ ಎಂದು ಹೇಳಿದ್ದರು.ಶಿಕ್ಷಣ ಕಲಿತ ಮಹಿಳೆಯರು ಇಂದು ಬದುಕಿನ ಪಥವನ್ನು ತುಳಿಯಬೇಕಾಗಿದೆ.

ಬಾಳಿನ ಬಂಡಿಯನ್ನು ಹೊಡೆಯುತ್ತ ಸಾಗಬೇಕಾಗಿದೆ.ಎಲ್ಲಾ ನನ್ನ ಹೆಣ್ಣು ಮಕ್ಕಳೇ ನೀವು ಹೊಡೆಯುವ ದಾರಿಯಲ್ಲಿ ಹೂ ಹಾಸಿಗೆ ಹಾಸಲಿ. ನಗು ಮೊಗದಿಂದ ನೊಗ ಹೊತ್ತ ನಾರಿಯರಿಗೆ ಈ ಅಂತರಾಷ್ಟ್ರೀಯ ಮಹಿಳಾ ದಿನವು ಶುಭ ತರಲಿ ಎಂದು ಹಾರೈಸುವೆ.

ಸಾವಿತ್ರಿ ಕಮಲಾಪೂರ
ಸಾಹಿತಿ ಹಾಗೂ ಉಪನ್ಯಾಸಕಿ
ಮೂಡಲಗಿ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group