ಬೀದರ – ಈಗಾಗಲೆ ಕಾಂಗ್ರೆಸ್ ನಲ್ಲಿ ಸಿದ್ದು – ಡಿಕೆಶಿ ಕೋಳಿಜಗಳ ಆರಂಭವಾಗಿದೆ. ಮೂರು ತಿಂಗಳಲ್ಲಿ ಕಾಂಗ್ರೆಸ್ ಮನೆ ಖಾಲಿಯಾಗುತ್ತದೆ ನೋಡುತ್ತಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ವಾಗ್ದಾಳಿ ಮಾಡಿದರು.
ಜಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.
ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಕ್ಷ ತೊರೆದು ಬಂದ ಸಿದ್ಧರಾಮಯ್ಯ ಅವರಿಗೆ ರಾಮನ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಖರ್ಗೆಯಂಥ ಮೂಲ ಕಾಂಗ್ರೆಸ್ಸಿಗರನ್ನೇ ರಾಜಕೀಯವಾಗಿ ಮುಗಿಸಿದ ಖ್ಯಾತಿ ಅವರದು. ಸದ್ಯ ಕಾಂಗ್ರೆಸ್ ನಾಲಾಯಕ್ ಆಗಿದೆ. ಈಶ್ವರ ಖಂಡ್ರೆ ಕಲ್ಯಾಣ ಕರ್ನಾಟಕದಲ್ಲಿ ಚುನಾವಣೆಗೆ ನಿಂತು ಗೆದ್ದು ತೋರಿಸಲಿ ಎಂದು ನಳಿನ್ ಕುಮಾರ ಸವಾಲು ಹಾಕಿದರು.
ಕಾಂಗ್ರೆಸ್ ಗೆ ಈಗ ನೆಲೆ ಇಲ್ಲ. ಇವರ ಮಹಾನಾಯಕ ತಮ್ಮ ಹಳೆಯ ಕ್ಷೇತ್ರ ಬಿಟ್ಟು ಕೇರಳದ ವಯನಾಡು ಸೇರಿ ಚುನಾವಣೆಗೆ ನಿಲ್ಲಬೇಕಾಯಿತು. ಇದು ಕಾಂಗ್ರೆಸ್ ನ ಹೀನ ಪರಿಸ್ಥಿತಿಯನ್ನು ತೋರಿಸುತ್ತದೆ ಎಂದರು.