spot_img
spot_img

ವಿಶ್ವ ವನ್ಯ ಜೀವಿಗಳ ದಿನ

Must Read

spot_img

ಮನುಷ್ಯ ತನ್ನ‌ ದುರ್ಬುದ್ದಿ‌ಯಿಂ ದ ಮೂಕ ಪ್ರಾಣಿಗಳ‌ ಆವಾಸ ಸ್ದಾನವಾದ ಕಾಡುಗಳನ್ನೆ ನಾಶ ಮಾಡುತ್ತಾ ಇದ್ದಾನೆ.. ಯಾಕೆ ಅಂದರೆ ಪಾಪ ಕಾಡು ಪ್ರಾಣಿ ಗಳಿಗೆ, ಅಲ್ಲಿರುವ ಮರ-ಗುಡ್ಡ ಗಳಿಗೆ ಆಗಲಿ ಮಾತನಾಡೋಕೆ ಆಗಲಿ ,ತನ್ನ ಹಕ್ಕುಗಳನ್ನು ಕೇಳೋಕೆ ಬರಲ್ಲ ಅಂತ ….ಅದು ಮೂಕ ಪ್ರಾಣಿ ಮಾತುಬರಲ್ಲ ,ಆದರೆ ಮನುಷ್ಯರಿಗೆ ಪ್ರಾಣಿಗಿಂತ ಹೆಚ್ಚಿಗೆ ವರ ಕೊಟ್ಟಿರೋದೆ ಅರ್ಥ ಮಾಡುಕೊಳ್ಳುವ,ಯೋಚನೆ ಮಾಡುವ ಗುಣ ಆದರೆ‌ ಇತ್ತೀಚೆಗೆ ಮನುಷ್ಯ ಎಲ್ಲದರಲ್ಲೂ ಏನು ಯೋಗ್ಯತೆ ಇದೆ ಅಂತ ಕೇಳುತ್ತಾನೆ ….ಅದನ್ನ ಪ್ರಾಣಿಗೂ apply ಮಾಡಿದ್ದರೆ ಪ್ರಾಣಿಗೂ ಕಾಡಿನಲ್ಲಿ ವಾಸಿಸುವ ಯೋಗ್ಯತೆ ಇದೆ.

ಆ ಕಾಡು ಪ್ರಾಣಿ ನಾಡಿಗೆ ಆಹಾರ ಹುಡುಕಿ ಕೊಂಡೋ ಅಥವಾ ದಾರಿ ತಪ್ಪೋ ಬಂದರೆ ಮೃಗ ಅಂತೀವಿ .ನಮ್ಮ ಆವಾಸ ಸ್ದಾನಕ್ಕೆ ಬಂದಿದೆ ,ನೆಮ್ಮದಿನೆ ಇಲ್ಲ ,ಇಲ್ಲಿಗೆ ಬರೋಕೆ ಅದಕ್ಕೆ ಹಕ್ಕು ಇಲ್ಲಾ ಅಂತೀವಿ ಆದರೆ ಪಾಪ ಆ‌ ಪ್ರಾಣಿಗಳಿಗೂ ಅದೇ ಥರ ತಿರುಗಿಸಿ ಕೇಳೊ ಥರ ಇದ್ದಿದ್ದರೆ‌ ನನಗೂ ನನ್ನ ಥರ ಕಾಡನ್ನೇ ಆವಾಸ ಸ್ಥಾನ ಮಾಡಿಕೊಂಡಿರೋ ಈ ಕಾಡಿಗೆ ಮಾನವರೂ ಬರೋ ಹಾಗಿಲ್ಲ‌ ಅಂತ ಕಡ್ಡಿತುಂಡು ಮಾಡಿ ಹೇಳೊ ಹಾಗೆ ಇದ್ದಿದ್ದರೆ ಚೆನ್ನಾಗಿ ಇರೋದೇನೋ ….ಮಾನವರಿಗೆ‌ ಇವೆಲ್ಲಾ ಅರ್ಥಾನೂ ಆಗಲ್ಲ ಯಾಕೆ ಅಂದರೆ‌ ಒಂದೊಂದು ಬಾರಿ ಹೇಳೊದೆ ಅರ್ಥ ಆಗಲ್ಲ ಇನ್ನೂ ಆ ಪ್ರಾಣಿಗಳು ಹೇಳದೆ‌ ಇರೋದನ್ನ‌ ಹಾಗೂ ಅದರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಗುಣ ಇಲ್ಲವೆ ಇಲ್ಲ‌ …. ಕಾಡಿದ್ದರೆ ನಾಡು ಅನ್ನೋದು ಮೊದಲು ಅರಿಯಬೇಕು…. ನಮಗೆ ಹೇಗೆ ಯೋಗ್ಯತೆ ಇದೆ‌ ಭೂಮಿ ಮೇಲೆ ಅದಕ್ಕೂ ಅಷ್ಟೇ ಸಮನಾದ‌ ಹಕ್ಕಿದೆ.

ಆದರೆ ಇವೆಲ್ಲಾ ಮಾನವನಿಗೆ ಅರ್ಥ ಆಗಲ್ಲ‌ ಯಾಕೆ ಅಂದರೆ ಮಾನವರು ಬರೀ‌ ಯೋಗ್ಯತೆ ಅಂತ ಅಂದ ತಕ್ಷಣ‌ ನೆನಪು ಮಾಡಿಕೊಳ್ಳೋದೆ ಸಮಾಜದಲ್ಲಿ ಎಷ್ಟು ಮನೆ ಇದೆ,ಸೈಟ್ ಇದೆ ,ಕಾರು,ದುಡ್ಡು ಅಂತ ,ಆ ರೀತಿ ಯೋಚನೆ ಮಾಡುವವನಿಗೆ ಈ ಮುಗ್ಥ ಮೂಕ ಪ್ರಾಣಿಗಳ ಬಗ್ಗೆ ಅರ್ಥ ಮಾಡಕೊಳ್ಳುತ್ತಾನ….?ಅದು ಬಂದು ಒಬ್ಬರದೋ ಇಬ್ಬರದೋ ಜೀವ ತೆಗದರೆ ಅದು ಹಿಂಸೆ,ಮೃಗ ವರ್ತನೆ…. ಅದೇ ಮಾನವ ಅಲ್ಲಿ ಹೋಗಿ ಅಲ್ಲಿರುವ ಪ್ರಾಣಿ ಹಿಂಸೆನೋ,ಪ್ರಾಣಿ ಹತ್ಯೆ ಮಾಡಿದರೆ,ತನ್ನ ಸ್ವಾರ್ಥ ಸಾಧನೆಗೆ ಮರ ಕಡಿದರೆ ಅದು ಮಾನವನ ಶಕ್ತಿ ಶಾಲಿ ನಡೆ,ಅದು ಮಾನವನ‌ಹಕ್ಕು‌ ….ಒಟ್ಟಿನಲ್ಲಿ ಮನುಷ್ಯ ಕಾಡು ,ಪ್ರಾಣಿಗಳ ಮೌಲ್ಯ ತಿಳಿಯಬೇಕು‌ ಮತ್ತು ಅದರ ಉಳಿವಿಗಾಗಿ ಬೇಕಾಗಿರುವ ಕ್ರಮಗಳನ್ನ ತೆಗೆದುಕೊಂಡರೆ ಪ್ರಕೃತಿಯಲ್ಲಿ ಸಮತೋಲನ ಮೂಡಿಸಬಹುದು

ಬಿ.ಆರ್.ಸಾಹಿತ್ಯ, ಮೈಸೂರು

- Advertisement -
- Advertisement -

Latest News

ವಿದ್ಯುತ್ ಕಳ್ಳತನ ಮಹಾಪರಾಧ: ಎಇಇ ಧರೆಪ್ಪಗೋಳ

ಸಿಂದಗಿ: ವಿದ್ಯುತ್ ಕಳ್ಳತನ ಮಹಾಪರಾಧ, ಕಳ್ಳತನ ಮಾಡಿದ ಗ್ರಾಹಕರಿಗೆ ಜೈಲುವಾಸ ಮತ್ತು ದಂಡ ಕಟ್ಟಿಟ್ಟಬುತ್ತಿ ಎಂದು ಸಿಂದಗಿ ಸಹಾಯಕ ಕಾರ್ಯನಿರ್ವಾಹಕ ವಿಶಾಲ್ ಧರೆಪ್ಪಗೋಳ ಹೇಳಿದರು. ತಾಲೂಕಿನ ಮೋರಟಗಿ...
- Advertisement -

More Articles Like This

- Advertisement -
close
error: Content is protected !!