spot_img
spot_img

ಸಚಿವ ರಮೇಶ ಜಾರಕಿಹೊಳಿಯವರ ಮೇಲಿನ ಆಪಾದನೆ ರಾಜಕೀಯ ಷಡ್ಯಂತ್ರ – ಗದಿಗೆಪ್ಪ ಹೊನ್ನಪ್ಪನವರ

Must Read

- Advertisement -

ಸವದತ್ತಿ – ಸಚಿವ ರಮೇಶ ಜಾರಕಿಹೊಳಿಯವರ ಮೇಲಿನ ಆಪಾದನೆ ಸುಳ್ಳು ಇದರಲ್ಲಿ ರಾಜಕೀಯ ಷಡ್ಯಂತ್ರ ನಡೆದಿದೆ ಪೂರ್ವ ನಿಯೋಜಿತವಾಗಿ ಅವರ ಮೇಲೆ ಆಪಾದನೆ ಮಾಡಲಾಗುತ್ತಿದ್ದು ಅವರ ರಾಜಕೀಯ ಬೆಳವಣಿಗೆಯನ್ನು ಸಹಿಸಲಾಗದೆ ಅವರ ಮೇಲೆ ಸುಳ್ಳು ಆಪಾದನೆ ಮಾಡಲಾಗುತ್ತಿದೆ. ಸಚಿವ ರಮೇಶ ಜಾರಕಿಹೊಳಿಯವರ ಮೇಲೆ ಮಾಡಿರುವ ಸೆಕ್ಸ ವಿಡಿಯೋದ ಬಗ್ಗೆ ಸಿ ಓ ಡಿ ತನಿಖೆಯಾಗಬೇಕು ತನಿಖೆಯಾದ ನಂತರ ತಪ್ಪಿತಸ್ಥರ ಮೇಲೆ ಕಾನೂನಿನ ಪ್ರಕಾರ ಕ್ರಮ ಜರುಗಿಸಬೆಕು ಎಂದು ತಾಲೂಕಾ ವಾಲ್ಮೀಕಿ ಸಮಾಜದ ಪ್ರಧಾನ ಕಾರ್ಯದರ್ಶಿ ಗದಿಗೆಪ್ಪ ಹೊನ್ನಪ್ಪನವರ ಮಾತನಾಡಿದರು.

ಅವರು ಸವದತ್ತಿ ತಾಲೂಕಿನ ಗೊರವನಕೊಳ್ಳ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಸಮಾಜದವರು ಹಮ್ಮಿಕೊಂಡ ರಸ್ತೆ ತಡೆ ಹಾಗೂ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಅದೇ ರೀತಿಯಾಗಿ ಇನ್ನೋರ್ವ ಯುವ ಮುಖಂಡ ಶೇಖರ ಸಕ್ರಿ ಮಾತನಾಡಿ “ಸಚಿವ ರಮೇಶ ಜಾರಕಿಹೊಳಿಯವರು ಅವರ ಒಂದು ರಾಜಕೀಯ ಜೀವನದಲ್ಲಿ ಯಾರಿಗೂ ಮೋಸ ಮಾಡಿರುವದಿಲ್ಲ ಬಡಜನರಿಗೆ ಸಹಾಯ ಮಾಡುತ್ತ ಬಂದವರು ಅಂತವರ ಮೇಲೆ ಮಾಡಿದ ಆಪಾದನೆ ಸುಳ್ಳು. ಇದರ ಬಗ್ಗೆ ಸಮಗ್ರವಾಗಿ ತನಿಖೆಯಾಗಬೇಕು” ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಗೊರವನಕೊಳ್ಳ ಗ್ರಾಮದ ಮಹರ್ಷಿ ವಾಲ್ಮೀಕಿ ಸಮಾಜದ ಮುಖಂಡರಾದ ಹೂವಪ್ಪ ಮುನವಳ್ಳಿ .ವಿಠಲ ಸಕ್ರಿ.ಹೂವಪ್ಪ ಬಾರಿಗಿಡದ.ಹಣಮಂತ ಸಕ್ರಿ.ತಮ್ಮಾಣಿ ಕಟಮಳ್ಳಿ.ಪಕ್ಕಿರಪ್ಪ ಸಕ್ರಿ.ಸಂತೋಷ ದರಗಾದ .ಪುಟ್ಟು ಇಂಚಲ.ಹಣುಮಂತ ನರಿ.ಗದಿಗೆಪ್ಪ ಹೊಳ್ಳಿ.ಪ್ರಕಾಶ ದಳವಾಯಿ.ದುರಗಪ್ಪ ಸಕ್ರಿ.ಮಂಜು ಮುನವಳ್ಳಿ.ಗಂಗಪ್ಪ ಬೋವಿ.ದರ್ಮರಾಜ ಮುನವಳ್ಳಿ.ಹುಚ್ಚಪ್ಪ ಮಾಯಪ್ಪನವರ.ಮಹೇಶ ಮೇಟಿ.ಮಹಾಂತೇಶ ಬೆಣ್ಣಿ.ನಾಗೇಶ ನಾಗನೂರ.ಕನ್ನಪ್ಪ ಇಂಚಲ.ನಿಂಗಪ್ಪ ಹೊಲಗಜ್ಜನವರ ಉಪಸ್ಥಿತರಿದ್ದರು

- Advertisement -

ಈ ಒಂದು ರಸ್ತೆ ತಡೆ ಮಾಡಿ ಪ್ರತಿಭಟಿಸಿದ್ದರಿಂದ ಸವದತ್ತಿ ಮುನವಳ್ಳಿ ರಸ್ತೆ ಸುಮಾರು ಒಂದು ಘಂಟೆಗಳ ಕಾಲ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು ನಂತರ ಶಾಂತಿಯುತವಾಗಿ ಮುಕ್ತಾಯಗೊಂಡಿತು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group