ಸೆ. 21 ರಂದು ಉದ್ಯಾನ ನಗರಿ ಶ್ರೀ ದೊಡ್ಡ ಗಣಪತಿಗೆ 108 ಬಗೆಯ  ನೈವೇದ್ಯ

Must Read

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...

ಹೆಣ್ಣು ಮಕ್ಕಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು – ಡಾ.ನಯನಾ ಭಸ್ಮೇ

ಸವದತ್ತಿ - “ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರಬೇಕು ಅವರು ಹದಿ ಹರೆಯದ ವಯಸ್ಸಿಗೆ ಬಂದಾಗ ಅವರಲ್ಲಿ ನೈಸರ್ಗಿಕವಾದ ಬದಲಾವಣೆಗಳು ಆಗುತ್ತವೆ ಅಂತಹ ಸಂದರ್ಭದಲ್ಲಿಯೂ...

ಪ್ರೊ.ಅಲಕಾ ಕುರಣೆ ಯವರಿಗೆ ‘ ಶಿಕ್ಷಕ ಶ್ರೀ ‘ ರಾಜ್ಯ ಮಟ್ಟದ ಪ್ರಶಸ್ತಿ

ಬೆಳಗಾವಿ: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ ಬೆಂಗಳೂರು ಘಟಕದಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ...

ಬೆಂಗಳೂರು: ನಗರದ  ಬಸವನಗುಡಿಯಲ್ಲಿರುವ  ನಮ್ಮ ನಾಡಿನ ಐತಿಹಾಸಿಕ  ಶ್ರೀ ದೊಡ್ಡ ಗಣಪತಿ ದೇವಾಲಯದಲ್ಲಿ ದಿ. 21 ರ  ಮಂಗಳವಾರ ಮುಸ್ಸಂಜೆ ಗೋಧೂಳಿ ಸಮಯದಲ್ಲಿ ( ಸಂಜೆ 6:೦೦ ಗಂಟೆಗೆ ) ” ಕನ್ನಡದ ಮನಸ್ಸುಗಳಿಂದ ಮೋದಕ ಪ್ರಿಯ ಗಣಪತಿ – ಉದ್ಯಾನ ನಗರಿ ಶ್ರೀ ದೊಡ್ಡ ಗಣಪತಿಗೆ 108 ಬಗೆಯ  ನೈವೇದ್ಯ ” ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಭಗವದ್ ಭಕ್ತ ಮಹಾಶಯರು ಇಂತಹ ವೈಶಿಷ್ಟ್ಯತೆ ಯ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಭಗವಂತನ ಕೃಪೆ ಗೆ ಪಾತ್ರರಾಗಿ ಎಂದು ಕೃ.ವೆಂ.ರಾಮಚಂದ್ರ ಮನವಿ ಮಾಡಿದ್ದಾರೆ.

ಸಮಾಜದ ಒಳಿತಿಗಾಗಿ ವಿಘ್ನ ವಿನಾಶಕನಲ್ಲಿ  ಪ್ರಾರ್ಥನೆ

- Advertisement -

ಎಲ್ಲಾ ಸ್ನೇಹಿತರು ಬಂಧುಗಳು ಎಲ್ಲಾ ಕನ್ನಡದ ಮನಸುಗಳು ಸೇರಿ ಜೀವಕೋಟಿಯನ್ನೇ ತಲ್ಲಣಗೊಳಿಸುತ್ತಿರುವ ಕೊರೋನಾ ಇತ್ಯಾದಿ ಮಾನವ ಕಂಟಕ ರೋಗ ರುಜಿನಗಳಿಂದಲೂ ಮತ್ತು ಪ್ರಾಕೃತಿಕ ಸಂಕಷ್ಟಗಳಿಂದ ಸಂಕಟವನ್ನು ಅನುಭವಿಸುತ್ತಿರುವ ಜನರಿಗೂ ಹಾಗೂ ಸಮಾಜಕ್ಕೆ ಸಕಲ ರೀತಿಯಲ್ಲು ಒಳಿತಾಗಲಿ ಎಂದು ವಿಘ್ನ ವಿನಾಶಕ ಗಣಪತಿಗೆ ವಿಶೇಷ ಪೂಜೆ ಸಲ್ಲಿಸುವ ಕಾರ್ಯಕ್ರಮ.

108 ಸಂಖ್ಯೆಯಲ್ಲಿ ನೈವೇದ್ಯ 

ಶ್ರೀ ವಿನಾಯಕನನ್ನು 108×108=11664 ಅಂದರೆ ಮೋದಕ ಪ್ರಿಯ ಗಣಪತಿಗೆ 108 ಬಗೆಯ ವೈವಿಧ್ಯಮಯ ತಿನಿಸುಗಳನ್ನು ಒಂದೊಂದು 108 ಸಂಖ್ಯೆಯಲ್ಲಿ ನೈವೇದ್ಯ ಮಾಡುವ ಮೂಲಕ ಅತ್ಯಂತ ವಿಶೇಷವಾಗಿ ಭಕ್ತಿಯಿಂದ ಪೂಜಿಸುವ ಕಾರ‌್ಯಕ್ರಮ ನಡೆಯಲಿದೆ.

ಪ್ರಸಾದ ರೂಪದಲ್ಲಿ ವಿತರಣೆ

108 ಬಗೆಯ  ವೈವಿಧ್ಯಮಯ ತಿನಿಸುಗಳನ್ನು  ಭಗವಂತನಿಗೆ ಅರ್ಪಿಸಿ ದೇವಾಲಯಕ್ಕೆ  ಬಂದ ಭಗವದ್ ಭಕ್ತ ಮಹಾಶಯರಿಗೆ ಪ್ರಸಾದ ರೂಪದಲ್ಲಿ ವಿತರಣೆ ಮಾಡಲಾಗುತ್ತದೆ.

ಇದೊಂದು ಅವಿಸ್ಮರಣೀಯ ಪೂಜಾ ಕಾರ‌್ಯಕ್ರಮವಾಗಿದ್ದು ಎಲ್ಲರೂ ಭಾಗವಹಿಸಿ ಹಾಗೂ ಇದರ ವಿಶೇಷ ಆಯೋಜಕರಾಗಿ ಸಹ ಈ ಒಂದು ಸೇವಾ ಕೈಕಂರ‌್ಯದಲ್ಲಿ ಭಾಗವಹಿಸಿ ನೈವೇದ್ಯಕ್ಕೆ  ಪ್ರಾಯೋಜಕರಾಗಬಹುದು ಎಂದು ಕೃ.ವೆಂ.ರಾಮಚಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃ.ವೆಂ.ರಾಮಚಂದ್ರ ಸಂಪರ್ಕ ಸಂಖ್ಯೆ – 9342921229


ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...
- Advertisement -

More Articles Like This

- Advertisement -
close
error: Content is protected !!