- Advertisement -
ಬೀದರ – ಕೊರೋನಾ ಯಾತರ ಕೊರೋನಾ…ಅದು ಕೊರೋನಾ ಅಲ್ಲ ನಾವು ಏಳು ಮಂದಿ ಅಕ್ಕ ತಂಗೇರ ಇದ್ದೀವಿ. ಒಂದು ಹೋತದ ಮತ್ತೊಂದ ಬತ್ತದ ಇದು ಮುಗಿಯಂಗಿಲ್ಲ ……
ಇದು ಹೆಣ್ಣು ಮಗಳ ಮೈಮೇಲೆ ಬಂದಿದೆಯೆಂಬ ದೈವ ಹೇಳಿದ್ದು ಕೊರೋನಾದ ಭೀಕರತೆಯನ್ನು ಸಾರಿದೆ. ಇದು ಇಲ್ಲಿಗೇ ಮುಗಿಯೋದಿಲ್ಲ. ಒಂದು ಹೋದರೆ ಮತ್ತೊಂದು ವೈರಸ್ ರೂಪದಲ್ಲಿ ಬರುತ್ತದೆಯೆಂಬ ಮಾತುಗಳು ಇದೀಗ ನಿಜವೆಂದು ಅನ್ನಿಸತೊಡಗಿವೆ.
- Advertisement -
ಈಗ ಕೊರೋನಾ ಆಮೇಲೆ ಬ್ಲಾಕ್ ಫಂಗಸ್… ಹೀಗೆ ಒಂದರ ಹಿಂದೊಂದು ವೈರಸ್ ಗಳು ಮಾನವಕುಲವನ್ನು ಹೈರಾಣ ಮಾಡುತ್ತಿವೆ.
ಆದರೆ ಈ ದೈವದ ಹೆಣ್ಣುಮಗಳ ಮಾತು ಸತ್ಯವಾಗಿ ಪರಿಣಮಿಸುತ್ತಿದ್ದು ಆಕೆಯ ನುಡಿಯ ವಿಡಿಯೋ ಈಗ ಎಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವೈರಸ್ ಎಂಬ ಅಕ್ಕ ತಂಗಿಯರ ದಾಳಿಯನ್ನು ಈ ಜಗತ್ತು ಹೇಗೆ ತಡೆದುಕೊಳ್ಳುತ್ತದೆಯೋ ಕಾದು ನೋಡಬೇಕು.