ಆಸ್ಟ್ರೇಲಿಯಾದಲ್ಲಿ ಹಬ್ಬ ಆಚರಿಸಿದ ಟೀಮ್ ಇಂಡಿಯಾ

Must Read

ತಂಡದ ತುಂಬ ಗಾಯಗಳನ್ನೇ ತುಂಬಿಕೊಂಡಿದ್ದರೂ, ಆಸ್ಟ್ರೇಲಿಯಾ ಮಂಗಗಳ ಗೇಲಿ ಮಾತುಗಳ ನಡುವೆಯೂ ಯುವ ಮನೋಬಲದಿಂದ ದಿಟ್ಟ ಆಟವಾಡಿದ ಭಾರತ ಕ್ರಿಕೆಟ್ ತಂಡದ ಯುವ ಆಟಗಾರರು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ತಮ್ಮದಾಗಿಸಿಕೊಂಡು ಗಬ್ಬಾದಲ್ಲಿ ಹಬ್ಬ ಆಚರಿಸಿದರು.

ಮೊದಲ ಟೆಸ್ಟ್ ನಲ್ಲಿ ಕೇವಲ ೩೬ ರನ್ ಗಳಿಸಿ ಆಲೌಟ್ ಆಗಿ ಹೀನಾಯ ಸೋಲು ಕಂಡಿದ್ದ ಭಾರತ ತಂಡ ಕೊನೆಯ ಟೆಸ್ಟ್ ನಲ್ಲಿ ಅಭೂತಪೂರ್ವ ವಿಜಯ ದಾಖಲಿಸಿತು.

ತಂಡದ ಹಿರಿಯ ಅನುಭವಿ ಆಟಗಾರರಾದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಆಟಗಾರರು ಇಲ್ಲದಾಗಲೇ ಈ ವಿಜಯ ಪ್ರಾಪ್ತಿಯಾಗಿದ್ದು ಗಮನಾರ್ಹ.

ಇನ್ನೊಂದು ಅತ್ಯಂತ ಮಹತ್ವದ ವಿಷಯವೆಂದರೆ, ೩೨ ವರ್ಷಗಳಿಂದ ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಒಂದು ಪಂದ್ಯವನ್ನೂ ಸೋತಿರಲಿಲ್ಲ. ಈಗ ಭಾರತದ ಯುವ ತಂಡದ ಎದುರು ಹೀನಾಯವಾಗಿ ಸೋತು ಮುಖಭಂಗ ಅನುಭವಿಸುವಂತಾಯಿತು.

ಅದರಲ್ಲೂ ಆಸ್ಟ್ರೇಲಿಯಾದ ಬೇಜವಾಬ್ದಾರಿ ಕ್ರಿಕೆಟ್ ಅಭಿಮಾನಿಗಳ ಕೀಟಲೆ, ಜನಾಂಗೀಯ ನಿಂದನೆಗಳಿಗೆ ಭಾರತದ ಆಟಗಾರರು ತಕ್ಕ ಉತ್ತರ ನೀಡಿದಂತಾಗಿದೆ.

ಪ್ರಸ್ತುತ ನಾಲ್ಕನೆಯ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ ೩೬೯ ರನ್ ಹಾಗೂ ಎರಡನೆ ಇನ್ನಿಂಗ್ಸ್‌ನಲ್ಲಿ ೨೯೪ ರನ್ ಗಳಿಸಿತ್ತು.

ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ೩೩೬ ಹಾಗೂ ಎರಡನೆ ಇನ್ನಿಂಗ್ಸ್ ನಲ್ಲಿ ೩೨೯ ರನ್ ಗಳಿಸಿ ಕೇವಲ ೭ ವಿಕೆಟ್ ಕಳೆದುಕೊಂಡು ವಿಜಯ ದಾಖಲಿಸಿತು.

ಪಂದ್ಯ ಶ್ರೇಷ್ಠ ನಾಗಿ ರಿಷಬ್ ಪಂತ ಆಯ್ಕೆಯಾದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group