Homeಕ್ರೀಡೆಇಂಗ್ಲೆಂಡ್ ಟಿ-೨೦ ಪಂದ್ಯಕ್ಕೆ ಶೇ.೫೦ ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುವುದು

ಇಂಗ್ಲೆಂಡ್ ಟಿ-೨೦ ಪಂದ್ಯಕ್ಕೆ ಶೇ.೫೦ ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುವುದು

ಅಹಮದಾಬಾದ್– ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಇಲ್ಲಿ ನಡೆಯಲಿರುವ ಟಿ-೨೦ ಪಂದ್ಯಗಳಿಗೆ ಕೇವಲ ಅರ್ಧದಷ್ಟು ಪ್ರೇಕ್ಷಕರಿಗೆ ಮಾತ್ರ ಪಂದ್ಯ ವೀಕ್ಷಣೆಗೆ ಅನುಮತಿ ನೀಡಲಾಗುವುದು ಎಂದು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಹೇಳಿದೆ.

ದೇಶದಲ್ಲಿ ಕೊರೋನಾ ಮಹಾಮಾರಿ ಮತ್ತೆ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರ ಅಂಗವಾಗಿ ಕ್ರಿಕೆಟ್ ವೀಕ್ಷಕರ ಸಂಖ್ಯೆಯನ್ನು ಶೇ.೫೦ ಕ್ಕೆ ಇಳಿಸಲಾಗಿದೆ ಎಂದು ಜಿಸಿಎ ಉಪಾಧ್ಯಕ್ಷ ಧನರಾಜ್ ನಥ್ವಾನಿ ಹೇಳಿದ್ದಾರೆ.

ರಕ್ಷಣಾ ಕ್ರಮವಾಗಿ ಇಡೀ ಕ್ರೀಡಾಂಗಣವನ್ನು ಸ್ಯಾನಿಟೈಸ್ ಮಾಡಲಾಗುತ್ತದೆ ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

RELATED ARTICLES

Most Popular

error: Content is protected !!
Join WhatsApp Group