ಬೈಲಹೊಂಗಲ – ತಾಲೂಕಿನ ಉಡಿಕೇರಿ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಮಡಿವಾಳ ಶ್ರೀ ಮಾಚಿದೇವರ ಜಯಂತಿ ಆಚರಿಸಲಾಯಿತು. ಮಾಚಿ ದೇವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಲಾಯಿತು.
ಮಹಾದೇವಪ್ಪ ಮಡಿವಾಳರ ಅವರು ಮಾಚಿದೇವರ ಜೀವನ ಚರಿತ್ರೆಯ ವಿವಿಧ ಘಟನೆಗಳನ್ನು ಜನರಿಗೆ ತಿಳಿಸಿ, ಸಮಾಜದಲ್ಲಿ ಎಲ್ಲ ಜಾತಿ ಮತ ಪಂಥದವರು ಸಹಬಾಳ್ವೆಯಿಂದ ಬದುಕು ಸಾಗಿಸಲು ಮಾಚಿದೇವರ ನುಡಿ ವಚನಗಳು ಮಾರ್ಗದರ್ಶನವಾಗಿವೆ ಎಂದರು.
ಶಿವಪುತ್ರಯ್ಯ ಸ್ವಾಮೀಜಿ ಯರಗಂಬಳಿಮಠ ಸಾನ್ನಿಧ್ಯ ವಹಿಸಿದ್ದರು.
ಇದೇ ವೇಳೆ ಸಮಸ್ತ ಲಿಂಗಾಯತ ಹೋರಾಟ ವೇದಿಕೆ ಸಂಚಾಲಕ ಬಸನಗೌಡ ಚಿಕ್ಕನಗೌಡರ ಅವರು ಮಾಚಿದೇವರ 25 ಭಾವಚಿತ್ರಗಳನ್ನು ಮಾಡಿಸಿಕೊಡುವುದಾಗಿ ಹೇಳಿದರು.
ಪ್ರಮುಖರಾದ ಮೂಗನಗೌಡ ತಿಪ್ಪನಗೌಡರ, ಮಲ್ಲಪ್ಪ ಗರ್ಜೂರ, ಉಮೇಶ ಹಿತ್ತಲಮನಿ, ಈರಪ್ಪ ಕೋಟಗಿ, ಸಂಗನಗೌಡ ತಿಪ್ಪನಗೌಡರ, ಬಸವರಾಜ ಮೇಟ್ಯಾಲ, ಮಹಾಬಲೇಶ ಗಂಗನ್ನವರ, ಶಿವಾನಂದ ದಳವಾಯಿ, ಶಿವಲಿಂಗಪ್ಪ ದೊಡಮನಿ, ಭರತಗೌಡ ಚಿಕ್ಕನಗೌಡರ ಸೇರಿದಂತೆ ಗ್ರಾಮದ ಗುರು ಹಿರಿಯರು ಭಜನಾ ಮೇಳದವರು ಪಾಲ್ಗೊಂಡಿದ್ದರು.
ವರದಿ: ಸಿದ್ದಪ್ಪ ಕಂಬಾರ