ಉತ್ತರ ಕರ್ನಾಟಕದ ಮೊದಲ ಮಹಿಳಾ ಶಾಲೆ

Must Read

ಇದೊಂದು ಅಪರೂಪದ ಫೋಟೋ. ಉತ್ತರ ಕರ್ನಾಟಕದ ಮೊದಲ ಮಹಿಳಾ ಶಾಲೆಯದು. ಸನ್ 1912 ರಲ್ಲಿ ವಿದ್ಯಾರ್ಥಿನಿಯರಿಗಾಗಿ ವಿ ಜಿ ದೇಸಾಯಿಯವರು ಮೊದಲ ಮಹಿಳಾ ಶಾಲೆಯನ್ನು ಬೈಲಹೊಂಗಲ ತಾಲೂಕಿನ ಚಚಡಿ ಎಂಬಲ್ಲಿ ಸ್ಥಾಪಿಸಿದರು.

ಅರಟಾಳ ರುದ್ರಗೌಡರ ಅಳಿಯ ವಿ ಜಿ ದೇಸಾಯಿಯವರು. ಇಪ್ಪತ್ತನೆಯ ಶತಮಾನದ ಕೊನೆಯ ದಶಕದ ವರೆಗೆ ಮಹಿಳೆಗೆ ಶಿಕ್ಷಣಕ್ಕೆ ಪ್ರಬಲ ಕಾನೂನು ಬೆಂಬಲ ಇರಲಿಲ್ಲ. 1991 ರಲ್ಲಿ ಜಾರಿಗೆ ಬಂದ ಸರ್ವ ಶಿಕ್ಷಣ ಅಭಿಯಾನದಲ್ಲಿ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಲಾಯಿತು.

ಆಗಿನ ಕಾಲದಲ್ಲಿಯೇ ಮಹಿಳೆಯರಿಗಾಗಿ ಶಿಕ್ಷಣದ ಕನಸು ಕಂಡು ಅದನ್ನು ಸಾಕಾರಗೊಳಿಸಿದ ವಿ ಜಿ ದೇಸಾಯಿಯವರು ಮಹಿಳೆಯರ ಪಾಲಿಗೆ ಪ್ರಾತಃಸ್ಮರಣೀಯರು. ಭಾರತದಂಥ ಸಾಂಪ್ರದಾಯಿಕ ದೇಶದಲ್ಲಿ ಮಹಿಳಾ ಶಿಕ್ಷಣಕ್ಕೆ ಪ್ರಾಶಸ್ತ್ಯ ಕೊಟ್ಟ ದೇಸಾಯಿಯವರು ಕರ್ನಾಟಕದಲ್ಲಿ ಮೈಸೂರು ಅರಸರ ನಂತರ ಇವರೇ ಪ್ರಥಮರು ಎನ್ನಲಾಗಿದೆ.

ಫೋಟೋದಲ್ಲಿ ಕಂಡುಬರುವ ಆಗಿನ ವಿದ್ಯಾರ್ಥಿನಿಯರ ವೇಷಭೂಷಣ ಕರ್ನಾಟಕ ಸಂಪ್ರದಾಯದ ಮೆರುಗನ್ನು ತೋರಿಸುತ್ತದೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group