ಎಲ್ಲರಿಗೂ ಶಿಕ್ಷಣ ಬೇಕು ; ಉಚಿತ ಔಷಧವಲ್ಲ

Must Read

ಆರೋಗ್ಯವೆ ಭಾಗ್ಯ ಎಂದು ಕಷ್ಟಪಟ್ಟು ದುಡಿದು ಸತ್ವಯುತ ಆಹಾರ ತಿಂದು ಜೀವಿಸಿದ ಜನರಿಗೆ ಅನೇಕ ರೀತಿಯಲ್ಲಿ ಭಾಗ್ಯ ಯೋಜನೆಗಳಿಂದ ಸರ್ಕಾರ ಸಾಕಲು ಹೋಗಿ,ಈಗ ಔಷಧ ಭಾಗ್ಯ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಇದರಲ್ಲಿ ಎಷ್ಟು ಭ್ರಷ್ಟಾಚಾರಿಗಳು ಹುಟ್ಟುವರೋ ?

ಸರ್ಕಾರದ ಆರೋಗ್ಯವೆ ಸರಿಯಿಲ್ಲ. ಇನ್ನು ಪ್ರಜೆಗಳ ಆರೋಗ್ಯರಕ್ಷಣೆ ಸಾಧ್ಯವೆ?ನಮ್ಮ ಆರೋಗ್ಯ ನಮ್ಮ ಕೈಯಲ್ಲಿ. ಕೈ ತೊಳೆದುಕೊಂಡು ತಿನ್ನುವುದಷ್ಟೇ ಅಲ್ಲ.ಸಂಪಾದನೆ ಯನ್ನು ಸ್ವಚ್ಚ,ಶುದ್ದ,ಸಾತ್ವಿಕ ಮಾರ್ಗದಲ್ಲಿ ಮಾಡಿ ನಡೆಯುವುದೆ ನಿಜವಾದ ಆರೋಗ್ಯಕರ ಜೀವನ. ಆಗ ಯಾರೂ ಔಷಧ ಕೊಡುವ ಅಗತ್ಯವಿರುವುದಿಲ್ಲ.

ಹೊರಗಿನಿಂದ ಏನೇ ಸೇರಿಸಿದರೂ ಒಳಗೆ ನಡೆದ ಮೇಲೇ ಅದರ ಪ್ರಭಾವ ಅರ್ಥ ಆಗೋದು. ನಮ್ಮೊಳಗೇ ಅನಾರೋಗ್ಯಕರ ವಿಚಾರ, ವಿಷಯ,ಜ್ಞಾನವಿದ್ದರೆ ಹೊರಗಿನ ಅದೇ ಶಕ್ತಿ ಪಡೆದವರಿಗೆ ಹೆಚ್ಚಿನ ತೊಂದರೆ ಎನಿಸುವುದಿಲ್ಲ.

ಆದರೆ, ಒಳಗೆ ಆರೋಗ್ಯಕರ ವಿಚಾರವಿದ್ದು ಸತ್ವಯುತವಾಗಿರುವ ದೇಹಕ್ಕೆ ಹೊರಗಿನಿಂದ ಅನಾರೋಗ್ಯದ ಔಷಧ ಸೇರಿಸಿದರೆ ತಕ್ಷಣ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ, ಯಾವುದೇ ವಿಚಾರವಾಗಲಿ,ಔಷಧ ಆಗಲಿ ಅವರವರ ದೇಹಾರೋಗ್ಯವನ್ನು ಪರೀಕ್ಷಿಸಿಯೇ ಕೊಡಬೇಕು,ನೀಡಬೇಕು.

ಅದು ಬಿಟ್ಟು ಎಲ್ಲರಿಗೂ ಇರೋದು ಒಂದೆ ದೇಶ, ಒಂದೇ ದೇಹ, ಒಂದೇ ಸರ್ಕಾರ, ಒಂದೇ ಆಹಾರ, ಶಿಕ್ಷಣವೆಂದು ಎಲ್ಲರೂ ಒಂದೇ ರೀತಿಯ ಔಷಧವಾಗಲಿ,ಆಹಾರವಾಗಲಿ ಸೇವಿಸಲಾಗುವುದೆ?
ಇದೊಂದು ಅಜ್ಞಾನದ ಅತಿರೇಕ ವೆನ್ನಬಹುದಷ್ಟೆ. ಇಲ್ಲಿ ಯಾರ ಜೀವ ಯಾರಿಗೋ ಸಹಕಾರ ನೀಡಿ ಯಾರನ್ನೋ ಬೆಳೆಸುತ್ತಿದೆ.

ರೋಗಕ್ಕೆ ಔಷಧ ಒಳಗಿನ ಜ್ಞಾನದಿಂದ ತಿಳಿದರೆ
ಔಷಧವೂ ಒಳಗಿರುತ್ತದೆ. ಆಯುರ್ವೇದ ಔಷಧವನ್ನು ಎಲ್ಲಾ ಪ್ರಜೆಗಳಿಗೆ ಉಚಿತವಾಗಿ ಸಿಗುವಂತೆ ಸರ್ಕಾರ ಮಾಡಬಹುದೆ? ಇದು ಆತ್ಮನಿರ್ಭರ ಔಷಧ. ಇದರಿಂದ ದೇಶ ಸಧೃಢವಾಗುತ್ತದೆ. ಆರೋಗ್ಯ ವೃದ್ದಿಯಾಗುತ್ತದೆ. ಜನರಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಸಾತ್ವಿಕ ಜನರಿಗೆ ಆಯುರ್ವೇದವೆ ಔಷಧ.ಉಳಿದವರು ಯಾವುದಾದರೂ ಪಡೆಯಬಹುದು.

ಎಲ್ಲರಿಗೂ ಒಂದೆ ಔಷಧವಲ್ಲ.ಎಲ್ಲರಿಗೂ ಒಂದೆ ಶಿಕ್ಷಣ ನೀಡಿ. ಅದೂ ದೇಶೀಯ ಶಿಕ್ಷಣ.ವಿದೇಶಿ ಶಿಕ್ಷಣ ನಂತರ ಬೇಕಾದರೆ ಪಡೆಯಬಹುದು.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group