ಕನ್ನಡನಾಡಿನ ಸವಾ೯ಂಗೀಣ ಅಭಿವೃದ್ಧಿಯು ಆ ನಾಡಿನ ಆಚಾರ ವಿಚಾರ ಭಾಷೆಯನ್ನೊಳಗೊಂಡ ಶೈಕ್ಷಣಿಕ ಕ್ಷೇತ್ರವನ್ನು ಅವಲಂಬಿಸಿದೆ ಹಲವಾರು ಶಿಕ್ಷಣ ಸಂಸ್ಥೆಗಳು ಕನ್ನಡದ ಉಸಿರಿನೊಂದಿಗು ಹೆಜ್ಜೆ ಇಟ್ಟು ಹೆಮ್ಮರವಾಗಿ ಬೆಳೆದು ಕನ್ನಡ ಸೇವೆ ಮಾಡುತ್ತಿವೆ ಅದರಲ್ಲಿ ನಿಪ್ಪಾಣಿಯ ಶ್ರೀ ದಾನಮ್ಮಾದೇವಿ ಶಿಕ್ಷಣ ಸಂಸ್ಥೆಯು ಒಂದು.
ಗಡಿನಾಡಿನ ಹೆಬ್ಬಾಗಿಲು ನಿಪ್ಪಾಣಿಯು ಸುಂದರ ನಗರ.ಇಂದು ಹೆಮ್ಮರವಾಗಿ ಬೆಳೆದು ವಾಣಿಜ್ಯ ನಗರಿಯಾಗಿ ಕಂಗೊಳಿಸುತ್ತಿದೆ.ಇದು ಕನ್ನಡದ ಭದ್ರ ನೆಲೆ.
ಇಲ್ಲಿ ಕನ್ನಡ ಮಕ್ಕಳು ಕನ್ನಡ ಕಲಿಕೆಯಿಂದ ವಂಚಿತರಾಗಬಾರದು ಮತ್ತು ಕನ್ನಡದ ಬೆಳವಣಿಗೆ ಆಗಬೇಕು ಎನ್ನುವ ಉದ್ದೇಶವಿಟ್ಟುಕೊಂಡು ಕನ್ನಡದ ಸೇನಾನಿ ದಿ ಪರಗೌಡ ಪಾಟೀಲರ ಮೊಮ್ಮಗ ವೈದ್ಯರಾದ ಡಾ ಎಸ್ ಆರ್ ಪಾಟೀಲ್, ಶಿಕ್ಷಕ ಶ್ರೀ ಶಿವಾನಂದ ಪುರಾಣಿಕಮಠ , ಶ್ರೀ ವಜ್ರಕಾಂತ ಸದಲಗೆ ಅವರನ್ನು ಒಳಗೊಂಡ ಸಮಾನ ಮನಸ್ಕರ ಕನ್ನಡ ಬಳಗ ಒಂದೆಡೆ ಸೇರಿ ಕನ್ನಡದ ಚಿಂತನ ಮಂಥನ ಮಾಡಿ ಕನ್ನಡದ ಗುಡಿ ಕಟ್ಟುವ ದಿಟ್ಟ ಹೆಜ್ಜೆ ಇಟ್ಟು ನಿಡಸೋಸಿ ಜಗದ್ಗುರುಗಳ ಮತ್ತು ಚಿಂಚಣಿಯ ಪೂಜ್ಯರ ಮಾಗ೯ದಶ೯ನದಲ್ಲಿ ೨೦೦೫ ರಲ್ಲಿ ನಿಪ್ಪಾಣಿ ಮರಾಠಿ ಪ್ರದೇಶದಲ್ಲಿ ಶಿವಶರಣೆ ಶ್ರೀ ದಾನಮ್ಮಾದೇವಿ ಶಿಕ್ಷಣ ಸಂಸ್ಥೆ ಎನ್ನುವ ಕನ್ನಡ ಸಂಸ್ಥೆಯನ್ನು ಹುಟ್ಟುಹಾಕಿದರು.
ಕನ್ನಡಕ್ಕಾಗಿ ಹುಟ್ಟಿದ ಸಂಸ್ಥೆಯು ಕನ್ನಡದ ದೀಕ್ಷೆ ತೊಟ್ಟು ಕನ್ನಡದ ಕಾಯಕ ಪ್ರಾರಂಭಿಸಿತು.ಗಡಿಭಾಗದಲ್ಲಿ ಕನ್ನಡವನ್ನು ಉಳಿಸುವ ಉದ್ದೇಶದಿಂದ ೦೫ ಮಕ್ಕಳಿಂದ ಪ್ರಾರಂಭಗೊಂಡ ಈ ಜ್ಞಾನದೇಗುಲ ಇಂದು ೨೦೦ ಕನ್ನಡದ ಕುವರರಿಗೆ ಜ್ಞಾನದಾಸೋಹಗೈಯುತಿದೆ.
ಬಡಮಕ್ಕಳ ಭಾಗ್ಯದ ಬಾಗಿಲಾಗಿ ನೋಂದ ಮಕ್ಕಳ ಧ್ವನಿಯಾಗಿ ಕನ್ನಡವನ್ನೆ ಉಸಿರಾಗಿಸಿಕೊಂಡು ತನ್ನ ಕೆಲಸ ಮುಂದುವರೆಸಿದೆ. ಗಡಿಕಾಯುವ ಕನ್ನಡದ ಶರಣ ಚಿಂಚಣಿಯ ಶ್ರೀ ಮ.ನಿ.ಪ್ರ.ಸ್ವ ಅಲ್ಲಮಪ್ರಭು ಮಹಾಸ್ವಾಮಿಜಿ ಮತ್ತು ಚಿಕ್ಕೋಡಿಯ ಶ್ರೀ ಮ.ನಿ.ಪ್ರ.ಸ್ವ ಸಂಪಾದನಾ ಮಹಾಸ್ವಾಮಿಜಿಯವರ ಅಮೃತಹಸ್ತದಿಂದ ಕನ್ನಡದ ಜ್ಞಾನದರಮನೆ ಉದ್ಘಾಟನೆಯೊಂದಿಗೆ ಪ್ರಾರಂಭಗೊಂಡು ಇಂದು ೭ ನೇ ವಗ೯ದವರೆಗಿನ ಮಕ್ಕಳಿಗೆ ಕನ್ನಡನಾಡು ನುಡಿ ಭಾಷಾಭಿಮಾನ,ಸಾಹಿತ್ಯದ ರಸದೌತನ ನೀಡಿ ಗುಣಮಟ್ಟದ ಶಿಕ್ಷಣ ಧಾರೆ ಎರೆಯುತಿದೆ.
ಉಭಯ ಪೂಜ್ಯರೂ ಅಂದು ನೆಟ್ಟ ಕನ್ನಡದ ಸಸಿ ಇಂದು ಹೆಮ್ಮರವಾಗಿ ಬೆಳೆದಿದೆ. ನಿಪ್ಪಾಣಿಯ ಎಲ್ಲ ಕನ್ನಡ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತ ಸಂಸ್ಥೆಯು ಕನ್ನಡ ಸಾಹಿತ್ಯ ಪರಿಷತ್ತು,ಗಡಿನಾಡು ಕನ್ನಡ ಬಳಗ ,ಶರಣ ಸಾಹಿತ್ಯ ಪರಿಷತ್ತಿನ ಕಾಯ೯ಕೆಲಸಗಳಿಗೆ ತನ್ನ ಶಾಲೆಯಲ್ಲಿ ಕಾಯಾ೯ಲಯ ತೆರೆದು ಕನ್ನಡದ ಏಳಿಗೆಗೆ ಮುನ್ನುಡಿ ಬರೆದಿದೆ.
ಹಿರಿಯರು ಕಷ್ಟದಿಂದ ಬೆಳೆಸಿದ ಕನ್ನಡವನ್ನು ಉಳಿಸುತ್ತಾ ಮುನ್ನಡೆದಿದೆ.ಗಾನಸುಧಾ ಕಲಾ ಬಳಗ,ದಾನಮ್ಮಾದೇವಿ ಸಂಗೀತ ಮಹಾವಿದ್ಯಾಲಯ ತೆರೆದು ನಾಡಿನ ಸೇವೆ ಮಾಡುತ್ತಿದೆ.ಮರಾಠಿ ಪರಿಸರದಲ್ಲಿ ಈ ಶಾಲೆಯಿದ್ದೂ ಅಲ್ಲಿಯ ಮರಾಠಿ ಉದು೯ ಬಾಂಧವರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಿ ನಾಡುನುಡಿ ಅಭಿಮಾನ ಮೆರೆದಿದ್ದಾರೆ.
ಅತಿಕಡಿಮೆ ಫೀ, ಗುಣಮಟ್ಟದ ಶಿಕ್ಷಣ ನೀಡಿ ಕನ್ನಡ ಮಕ್ಕಳನ್ನು ಬೆಳೆಸುತ್ತಿದೆ.ಪುಣೆಯ ಸ್ವಾಮಿ ಸಮಥ೯ ಸಂಸ್ಥೆಯು ಈ ಶಾಲೆಯ ಅಭಿವೃದ್ಧಿಗೆ ಧನಸಹಾಯ ನೀಡಿ ಭಾಷಾ ಬಾಂಧವ್ಯವನ್ನು ಎತ್ತಿ ಹಿಡಿದಿದೆ.ಸಂಕಷ್ಟದಲ್ಲೂ ಕನ್ನಡದ ಕೈ ಹಿಡಿದು ನಡೆದ ಈ ಸಂಸ್ಥೆ ಸದಾವ ಕನ್ನಡ ಕಾಯುವ ಸಂಸ್ಥೆಯಾಗಿದೆ.
ಹನ್ನೊಂದು ಜನರನ್ನೊಳಗೊಂಡ ಆಡಳಿತ ಮಂಡಳಿ ಉತ್ತಮ ಸೇವೆ ನೀಡಿ ಕನ್ನಡದ ದೇಗುಲ ಹೆಮ್ಮರವಾಗಿ ಬೆಳೆಸುತ್ತಿದೆ.ಕೇವಲ ರಾಜ್ಯೋತ್ಸವ ಮಾಡಿ ಕನ್ನಡದ ಕೆಲಸ ಮಾಡಿದರೆ ಸಾಲದು ಅದು ನಿರಂತರವಾಗಿರಲಿ ಎನ್ನುವ ಸದಾಶಯದೊಂದಿಗೆ ಈ ಸಂಸ್ಥೆ ತಲೆ ಎತ್ತಿದೆ ಹಿರಿಯರ ಕನ್ನಡ ಶ್ರಮ ನೆನೆಸಿ ಮುನ್ನಡೆಯುತ್ತಿದೆ.
ವಿಶೇಷವೆಂದರೆ ಕನ್ನಡ ಕಲಿಕೆ ಬಯಸುವ ಮರಾಠಿ ಜನರಿಗೆ ಉಚಿತ ಕಲಿಕಾ ವಗ೯ ನಡೆಸಿ ಇಲ್ಲಿಯವರೆಗೆ ಸುಮಾರು ೪೦ ಜನ ಕಟ್ಟಾ ಮರಾಠಿಗರಿಗೆ ಕನ್ನಡದ ಕಲಿಕೆಯ ತುತ್ತು ನೀಡಿ ಕನ್ನಡ ಪದದ ಅರಿವು ಮೂಡಿಸಿ ದಿಟ್ಟ ಹೆಜ್ಜೆ ಇಟ್ಟಿದೆ ಈ ಅಪ್ಪಟ ಕನ್ನಡ ಕಾಯ೯ ಅಭಿನಂದನಾರ್ಹ.
ಕನ್ನಡ ಸಂಸ್ಥೆಗಳು ಈ ಸಂಸ್ಥೆಯ ಅಡಿಯಲ್ಲಿ ಬೆಳೆಯುತ್ತಾ ಸಂಸ್ಥೆಯನ್ನು ಪೋಷಿಸುತ್ತಿವೆ ವೃತ್ತಿಯಿಂದ ಶಿಕ್ಷಕರಾಗಿದ್ದ ಶಿವಾನಂದ ಪುರಾಣಿಕಮಠ ಸರ್ ಅವರು ನಿವೃತ್ತಿ ನಂತರ ಕನ್ನಡದ ಏಳಿಗೆ ಮಾಡುವುದರೊಂದಿಗೆ ಕನ್ನಡ ಸಂಸ್ಥೆ ಬೆಳೆಸಲು ಹಗಲಿರುಳು ದುಡಿಯುತಿದ್ದಾರೆ.
ಸಂಸ್ಥೆಯ ಆಗುಹೋಗುಗಳಲ್ಲಿ ಸಕ್ರೀಯರಾಗಿ ಕನ್ನಡದ ಸೇವೆಯ ಜೊತೆಯಲ್ಲಿ ಕನ್ನಡದ ಜ್ಞಾನ ಹಂದರ ನಿಮಿ೯ಸುತಿದ್ದಾರೆ. ಇಳಿವಯಸ್ಸಿನಲ್ಲೂ ಇವರ ಕನ್ನಡದ ಕಾಯಕ ನಿಜಕ್ಕೂ ಶ್ಲಾಘನೀಯ.
ಇಂತಹ ಕನ್ನಡ ಸಂಸ್ಥೆಗೆ ಬೆನ್ನೆಲುಬಾಗಿ ನಿಂತು ಸಹಕಾರ ನೀಡಬೇಕಾದದ್ದು ನಮ್ಮ ಕತ೯ವ್ಯವಾಗಿದೆ.ಕನ್ನಡಕ್ಕಾಗಿ ಕನ್ನಡದ ಏಳಿಗೆಗಾಗಿ ಕನ್ನಡದ ಉಳಿಕೆಗಾಗಿ ಕನ್ನಡದ ಬಳಕೆಗಾಗಿ ಜನ್ಮತಾಳಿದ ಈ ಸಂಸ್ಥೆ ಹೆಮ್ಮರವಾಗಿ ಇನ್ನೂ ಬೆಳೆಯಲಿ ಕನ್ನಡದ ಡಿಂಡಿಮ ಬಾರಿಸಲಿ.
ಇಂದು ನಿಪ್ಪಾಣಿ ಕನ್ನಡಮಯವಾಗಿದೆ ಎಂದರೆ ಅದಕ್ಕೆ ಈ ಸಂಸ್ಥೆಯು ಒಂದು ಕಾರಣ.ಈ ಕನ್ನಡದ ಕೋಟೆಗೆ ಪ್ರಣಾಮಗಳು ಕನ್ನಡ ರಾಜ್ಯೋತ್ಸವ ಈ ಸಂದರ್ಭದಲ್ಲಿ ಸಂಸ್ಥೆಯ ಸೇವೆಯನ್ನು ಭಕ್ತಿಯಿಂದ ಸ್ಮರಿಸೋಣ
ಮಾಹಿತಿ
- ಡಾ.ಎಸ್.ಆರ್.ಪಾಟೀಲ
- ಶ್ರೀ ವಜ್ರಕಾಂತ ಸದಲಗೆ
- ಶ್ರೀ ಶಿವಾನಂದ ಪುರಾಣಿಕಮಠ
- ಶ್ರೀ ಮಾರುತಿ ಕೊಣ್ಣುರ
- ಶ್ರೀ ಈರಣ್ಣ ಶಿರಗಾಂವಿ
ಲೇಖನ
- ಪ್ರೋ ಮಿಥುನ ಅಂಕಲಿ
- ಖಡಕಲಾಟ
ಸಹಯೋಗ
- ಕನ್ನಡ ಸಾಹಿತ್ಯ ಪರಿಷತ್ತು
- ಶರಣ ಸಾಹಿತ್ಯ ಪರಿಷತ್ತು
- ಗಡಿನಾಡು ಕನ್ನಡ ಬಳಗ ನಿಪ್ಪಾಣಿ