spot_img
spot_img

ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿಸೂಚಿ ಸಂಪುಟ : ಹತ್ತು

Must Read

- Advertisement -

ಸೂಚಿ ರಚನೆ ಸಂತೋಷದ ಕೆಲಸವಲ್ಲ, ಬೇಸರ, ಶ್ರಮದ ಕೆಲಸ, ಅಸ್ಪಷ್ಟವಾದ ಅಕ್ಷರಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಓದುವುದು. ಅಸ್ತವ್ಯಸ್ತ ಗರಿಗಳನ್ನು ಹೊಂದಿಸುವುದು. ಹಸ್ತಪ್ರತಿಯಲ್ಲಿನ ವಿಷಯವನ್ನು ಗುರುತಿಸುವದು, ಮೇಲಾಗಿ ಯಾಂತ್ರಿಕವಾಗಿ ಸೂಚಿಯ ವಿವರಗಳನ್ನು ಸಂಗ್ರಹಿಸುವುದು-ಇಷ್ಟೆಲ್ಲ ಶ್ರಮಗಳ ನಡುವೆ ಸಹನೆ ಕಳೆದುಕೊಳ್ಳದಿದ್ದರೆ ಮಾತ್ರ ಈ ಕಾರ್ಯ ಯಶಸ್ಸು ಪಡೆಯುತ್ತದೆ.

ಈ ಶ್ರಮದ ಯಶಸ್ಸಿನ ಕಾರ್ಯವನ್ನು ಮಾಡಿ ಈ ಕೃತಿ ಸಂಪಾದಿಸಿದವರೇ ಡಾ. ವೀರಣ್ಣ ರಾಜೂರ ಅವರು. ಇದು 900-1000 ಕಟ್ಟುಗಳ ಹತ್ತನೆಯ ಸಂಪುಟ. ಈ ನೂರು ಕಟ್ಟುಗಳಲ್ಲಿ ಅಡಕವಾದ 245 ಕನ್ನಡ ಕೃತಿಗಳ ಸೂಚಿ ಈ ಸಂಪುಟವಾಗಿದೆ. ಇದು 1992 ರಲ್ಲಿ ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟವಾಗಿದೆ. 230 ಪುಟಗಳ ಹರವು ಪಡೆದಿದೆ.

ಈ ಕೃತಿಯಲ್ಲಿ ಅಳವಟ್ಟ ಒಂದು ಕಟ್ಟಿನ ಸೂಚಿಶಿಲ್ಪದ ಉದಾಹರಣೆಯನ್ನು ಗಮನಿಸಬಹುದು:

- Advertisement -

ಅಕ್ಕತಂಗಿಯರ ಚೌಪದನ
ಕ್ರಾಪ್ರ: 947/1 ಚೌಪದಿ
8 x5.8 ?
ಪು. 15-19 ಸಾಲು: 17-18
ಆದಿ : ಶ್ರೀಗುರು ಬಸವಲಿಂಗಾಯಂ ನಮಃ|ಅಕ್ಕತಂಗೇರ ಚೌಪದನ ಬರವದಕ್ಕೆ ಶುಭಮಸ್ತು|

ಎನ್ನಗುಣವ ಏನ ನೋಡಿ ಲಿಂಗಯ್ಯ
ನಿಮ್ಮ ಪಾದವನು ನೆಂಬಿದೆನೊ ಲಿಂಗಯ್ಯ
ಹಿಂದೆ ಬಳ ಭವಗಳಲ್ಲೆ ಲಿಂಗಯ್ಯ
ನಾನು ಬಂದು ಬಂದು ಹುಟ್ಟಲಾರೆ ಲಿಂಗಯ್ಯ ||1||

ಅಂತ್ಯ : ಅಕ್ಕ ತಂಗಿ ಒಂದಾದರು ಗುರುರಾಯ
ಬಂದು ಮುಕ್ಕಣ್ಣಗೆ ಎರಗಿದರು ಗುರುರಾಯ
ಸಿಕ್ಕು ತೊಡಕು ಭೇದವಿಲ್ಲ ಗುರುರಾಯ
ಶಿವನ ಸಕ್ಕರಿಯ ಗುಟಕದರು ಅಕ್ಕಯ್ಯ ||40|| ಶ್ರೀ ಶ್ರೀ ಶ್ರೀ

- Advertisement -

ವಿಷಯ: ಗಂಗೆ ಗೌರಿಯರ ಸಂವಾದ

ವಿಶೇಷ: ಸಮಗ್ರ; ಉತ್ತಮ; ಅಕ್ಷರ ಸಾಧಾರಣ.
ಈ ಕಟ್ಟಿನಲ್ಲಿರುವ ಇತರ ಕೃತಿಗಳಿಗಾಗಿ ನೋಡಿ: ಕಾಪ್ರ 947/1 (ಭಸಿತ ರುದ್ರಾಕ್ಷಿ ಮಹತ್ವ)

ಹೀಗೆ ಡಾ. ವೀರಣ್ಣ ರಾಜೂರ ಅವರು ಈ ಕಟ್ಟಿನ ಪರಿಚಯವನ್ನು ಗ್ರಂಥಸಂಪಾದನ ನೆಲೆಯಲ್ಲಿ ಮಾಡಿರುವರು.

ಒಂದನೆಯ ಸಾಲು : ಮದ್ಯದಲ್ಲಿರುವುದು (ದಪ್ಪಗಾತ್ರದ ಅಂಕಿ) ಕೃತಿಯ ಅನುಕ್ರಮಸಂಖ್ಯೆ.

ಎರಡನೆಯ ಸಾಲು : ಮಧ್ಯದಲ್ಲಿ ಕೃತಿಯ ಹೆಸರು,

ಮೂರನೆಯ ಸಾಲು : ಎಡಗಡೆ ಲಿಖಿತ ವಸ್ತು ಹಾಗೂ ಹಸ್ತಪ್ರತಿ ಭಾಂಡಾರದ ಕ್ರಮಸಂಖ್ಯೆ; ಬಲಗಡೆ ಸಾಹಿತ್ಯ ಪ್ರಕಾರ, ಮಧ್ಯದಲ್ಲಿ ಕರ್ತೃವಿನ ಹೆಸರು.

ನಾಲ್ಕನೆಯ ಸಾಲು : ಎಡಗಡೆ ಹಸ್ತಪ್ರತಿಯ ಅಳತೆ (ಉದ್ದ-ಅಗಲ), ಬಲಗಡೆ ಕರ್ತೃವಿನ ಕಾಲ.

ಐದನೆಯ ಸಾಲು : ಮಧ್ಯದಲ್ಲಿ ಹಸ್ತಪ್ರತಿಯ ಒಡೆತನ-ಲಭಿಸಿದ ಸ್ಥಳ, ಎಡಗಡೆ ಕೃತಿಯ ಪುಟ ಸಂಖ್ಯೆ, ಬಲಗಡೆ ಪ್ರತಿಪುಟದಲ್ಲಿರುವ ಸಾಲಿನಸಂಖ್ಯೆ ಎಂದು ಪರಿಚಯಿಸಲಾಗಿದೆ.

ಆ ಮೇಲೆ ಆದಿ ಎಂಬುದರ ಆದಿಯಲ್ಲಿ ಆಯಾ ಕೃತಿಯ ಪ್ರಾರಂಭದ ಸ್ವಲ್ಪ ಪಾಠವನ್ನೂ ಅಂತ್ಯ ಎಂಬುದರ ಕೆಳಗೆ ಆಯಾ ಕೃತಿಯ ಅಂತ್ಯದ ಪಾಠವನ್ನು ಬರೆಯಲಾಗಿದೆ. ಈ ಎರಡೂ ವಿಭಾಗಗಳಲ್ಲಿ ಮುಂದುವರಿದ ಪಾಠವನ್ನಾಗಿ ———–ಎಂಬ ಚಿಹ್ನೆಯನ್ನು, ಲುಪ್ತ ಪಾಠಕ್ಕಾಗಿ xxx ಸಂಕೇತವನ್ನೂ ಬಳಸಲಾಗಿದೆ. ವಿಷಯ ವಿಭಾಗದಲ್ಲಿ ಕೃತಿಯ ಕೇಂದ್ರ ವಿಷಯವನ್ನು ಸಂಕ್ತಿಪ್ತವಾಗಿ ಹೇಳಲಾಗಿದೆ.

ಹಸ್ತಪ್ರತಿಯ ಸಮಗ್ರತೆ, ಅಸಮಗ್ರತೆ, ಸ್ಥಿತಿ, ಅಕ್ಷರ ಸ್ವರೂಪ ಮುಂತಾದ ಅಂಶಗಳನ್ನು ವಿಶೇಷದಲ್ಲಿ ಸಮಾವೇಶಗೊಳಿಸಿದ್ದಾರೆ. ಈ ಕಟ್ಟಿನಲ್ಲಿಯ ಕೃತಿಗಳು ವಿಭಾಗದಲ್ಲಿ ಪ್ರತಿಯೊಂದು ಕಟ್ಟಿನಲ್ಲಿರುವ ಎಲ್ಲ ಕೃತಿಗಳ ಪಟ್ಟಿಯನ್ನು ಕೊಡಲಾಗಿದ್ದು, ಕನ್ನಡೇತರ ಭಾಷೆಯ ಕೃತಿಗಳ ಮುಂದೆ ಮಾತ್ರ ದುಂಡ ಕಂಸಿನಲ್ಲಿ ತೆಲಗು, ತಮಿಳು, ಸಂಸ್ಕøತ ಎಂದು ಸೂಚಿಸಲಾಗಿದೆ. ಈ ಪಟ್ಟಿಯನ್ನು ಆಯಾ ಕಟ್ಟಿನ ಮೊದಲ ಕೃತಿಯ ಪರಿಚಯದ ಕೊನೆಗೆ ಮಾತ್ರ ಕೊಡಲಾಗಿದೆ.

ಆದರೆ ಆ ಕಟ್ಟಿನಲ್ಲಿರುವ ಪ್ರಥಮೇತರ ಕೃತಿಗಳನ್ನು ಸೂಚಿಸುವ ಸಂದರ್ಭದಲ್ಲಿ ಈ ಕಟ್ಟಿನಲ್ಲಿರುವ ಇತರ ಕೃತಿಗಳಿಗಾಗಿ ನೋಡಿ: ತಾಪ್ರ, ಕಾಪ್ರ ಎಂದು ಸೂಚಿಸಿ, ಆ ಕಟ್ಟಿನ ಕ್ರಮ ಸಂಖ್ಯೆಯನ್ನು ಕಂಸಿನಲ್ಲಿ ಇತರ ಕೃತಿಗಳಿಗಾಗಿ ನೋಡಿ:ತಾಪ್ರ:ಕಾಪ್ರ ಎಂಬ ಎರಡೂ ವಿಭಾಗಗಳನ್ನು ಸಹಜವಾಗಿಯೇ ಕೈಬಿಡಲಾಗಿದೆ. ಕರ್ತೃ, ಕಾಲಲಭ್ಯವಿಲ್ಲದಲ್ಲಿ ಪ್ರಶ್ನಾರ್ಥಕ ಚಿಹ್ನೆ ಹಾಕಲಾಗಿದೆ. ಹೀಗೆ ಈ ಸೂಚಿಯ ರೂಪಶಿಲ್ಪವನ್ನು ರೂಪಿಸಿರುವದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.

ಈವರೆಗೆ ಪ್ರಕಟವಾದ ಇಂಥ ಎಲ್ಲ ಸೂಚಿಗಳನ್ನು ಆಳವಾಗಿ ಅಭ್ಯಸಿಸಿ ಅವುಗಳಲ್ಲಿಯ ಕೊರತೆಯನ್ನು ನೀಗಿಸಿಕೊಂಡು ಈ ಸೂಚಿ ಸರ್ವ ಸಮರ್ಪಕವಾಗುವಂತೆ ಯೋಚಿಸಲಾಗಿದೆ. ಅಂದರೆ ಹಸ್ತಪ್ರತಿಯ ಒಡೆತನ-ಲಭಿಸಿದ ಸ್ಥಳ, ಈ ಕಟ್ಟಿನಲ್ಲಿರುವ, ಕೃತಿಗಳ ಸಂಖ್ಯೆ, ಈ ಕಟ್ಟಿನಲ್ಲಿರುವ ಇತರ ಕೃತಿಗಳಿಗಾಗಿ ನೋಡಿ, ತಾಪ್ರ:ಕಾಪ್ರ-ಇದು ಈ ಸೂಚಿ ರಚನೆಯಲ್ಲಿ ನಾವು ಅಳವಡಿಸಿಕೊಂಡ ಹೊಸ ಅಂಶಗಳಾಗಿರುತ್ತವೆ ಎಂದು ಸಂಪಾದಕರು ಸ್ಪಷ್ಟವಾಗಿ ಹೇಳಿದ್ದಾರೆ.

ಸೂಚಿ ರಚನಾಕಾರ್ಯ ಅತ್ಯಂತ ಪರಿಶ್ರಮದಾಯಕವಾದುದು. ಹಸ್ತಪ್ರತಿವಾಚನ ಪರಿಣತಿ, ಆಸಕ್ತಿ ಕಾರ್ಯೋತ್ಸಾಹ ಇತ್ಯಾದಿ ಬಲ-ಛಲಗಳ ಫಲ, ಪ್ರಸ್ತುತ ಹಸ್ತಪ್ರತಿ ಸೂಚಿ. ಎಷ್ಟೇ ಎಚ್ಚರ ವಹಿಸಿದರೂ ಅಚಾತುರ್ಯದಿಂದ ಈ ಕಟ್ಟಿನಲ್ಲಿರುವ ಕೃತಿಗಳು ಎಂಬುದಕ್ಕೆ ಬದಲು ಕಟ್ಟಿನಲ್ಲಿರುವ ಕೃತಿಗಳು ಕಟ್ಟಿನಲ್ಲಿರುವ ಇತರ ಕೃತಿಗಳು ಎಂಬಿವು ಅಚ್ಚಾಗಿವೆ. ಇವುಗಳನ್ನು ಈ ಕಟ್ಟಿನಲ್ಲಿರುವ ಕೃತಿಗಳು ಎಂದು ಓದಿಕೊಳ್ಳಬೇಕೆಂದು ಸೂಚಿಸಿದ್ದಾರೆ. ಹೀಗೆ ಡಾ. ವೀರಣ್ಣ ರಾಜೂರ ಅವರು ಪರಿಶ್ರಮದ ಮೂಲಕ ಈ ಕೃತಿ ಸಂಪಾದಿಸಿರುವದು ಅರ್ಥಪೂರ್ಣವೆನಿಸಿದೆ.


ಡಾ. ವ್ಹಿ.ಬಿ.ಸಣ್ಣಸಕ್ಕರಗೌಡರ
ಉಪನ್ಯಾಸಕರು, ಬಾದಾಮಿ

- Advertisement -
- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group