spot_img
spot_img

ಕಲ್ಲೋಳಿ ಪಿಕೆಪಿಎಸ್‌ದಿಂದ ಟ್ರ್ಯಾಕ್ಟರ್ ವಿತರಣೆ

Must Read

spot_img
- Advertisement -

ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ವಿವಿಧೋದ್ದೇಶಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರ ಸಂಘದ ಮುಖಾಂತರ ಸಂಘದ ಸದಸ್ಯರುಗಳಿಗೆೆ ಶೇ. ೩ ಬಡ್ಡಿ ದರದಲ್ಲಿ ಟ್ರ್ಯಾಕ್ಟರ್ ಸಾಲ ವಿತರಿಸಲಾಯಿತು.

ಸಂಘದ ಅಧ್ಯಕ್ಷ ನೀಲಕಂಠ ಬಸಪ್ಪ ಕಪ್ಪಲಗುದ್ದಿ ಅವರು ಕಲ್ಲೋಳಿ ಪಟ್ಟಣದ ಪ್ರವೀಣ ಮಾಯಪ್ಪ ಯಾದಗೂಡ ಅವರಿಗೆ ಟ್ರ್ಯಾಕ್ಟರ್ ಕೀ ವಿತರಿಸಿ ಮಾತನಾಡಿ, ಕಲ್ಲೋಳಿ ಪಟ್ಟಣದ ಪಿಕೆಪಿಎಸ್ ದಿಂದ ಬಿಡಿಸಿಸಿ ಬ್ಯಾಂಕ ಸಹಯೋಗದೊಂದಗೆ ಸಂಘದ ಶೇರುದಾರ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದು ರೈತರು ಇದರ ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.

ಈ ಸಮಯದಲ್ಲಿ ಸಂಘದ ಉಪಾಧ್ಯಕ್ಷ ಭೀಮಪ್ಪ ವ್ಯಾಪಾರಿ, ನಿರ್ದೇಶಕರಾದ ಬಸವರಾಜ ಬೆಳಕೂಡ, ಮಲ್ಲಪ್ಪ ಪರಪ್ಪ ಕಡಾಡಿ, ಆನಂದ ಹೆಬ್ಬಾಳ, ಶಂಕರ ನಿಂಗಪ್ಪ ಗೋರೋಶಿ, ಬಸಪ್ಪ ಬಿ. ಪಾಟೀಲ, ಧರೀಶ ಖಾನಗೌಡ್ರ, ಮಹಾದೇವಿ ಖಾನಾಪೂರ, ಕೆಂಪವ್ವ್ಪ ಗೋರೋಶಿ, ಮಲ್ಲಪ್ಪ ಪೂಜೇರಿ, ಧರ್ಮಣ್ಣ ನಂದಿ, ಬಿಡಿಸಿಸಿ ಬ್ಯಾಂಕ ಪ್ರತಿನಿಧಿ ವಸಂತ ತಹಶೀಲದಾರ, ಬಿಡಿಸಿಸಿ ಬ್ಯಾಂಕ ನಿರೀಕ್ಷ ಎ.ಕೆ.ಮಳವಾಡ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಜೀವನದಲ್ಲಿ ಶಿಕ್ಷಣದಂತೆ ಸಂಸ್ಕಾರ ಕೂಡಾ ಅಷ್ಟೇ ಅವಶ್ಯಕವಾಗಿದೆ -ಮುಕುಂದ ಮಹಾರಾಜರು

ಮೂಡಲಗಿ:-ಪ್ರತಿಯೊಬ್ಬರಿಗೂ ಶಿಕ್ಷಣ ಎಷ್ಟು ಅವಶ್ಯಕವಾಗಿದೆಯೋ,ಸಂಸ್ಕಾರ ಕೂಡಾ ಅಷ್ಟೇ ಮುಖ್ಯವಾಗಿದೆ ಎಂದು ಮುಕುಂದ ಮಹಾರಾಜರು ಹೇಳಿದರು. ತಾಲೂಕಿನ ಗುಜನಟ್ಟಿ ಗ್ರಾಮದ ಶ್ರೀ ಮಾಧವಾನಂದ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ...
- Advertisement -

More Articles Like This

- Advertisement -
close
error: Content is protected !!
Join WhatsApp Group