spot_img
spot_img

ಕವನಗಳು

Must Read

spot_img
- Advertisement -

💕💭💭 ಮತ್ತದೇ ಕನಸು 💭💭💕

ಹೊಡೆದರೂ ಸಿಡಿದೇಳುತಿದೆ ಆ ಕನಸು
ನಾನಾಗಬಾರದೇ “ಭಗವಂತ” ॥

ತಮದೊಳು ಸಿಲುಕಿಹ ಜೀವಿಗಳು
“ಬಾ” “ಬಾ” ಎಂದು ಕರೆಯುತಿರುವಾಗ,
ತನು~ಮನವೆಲ್ಲಾ ಕಣ್ಣಾಗಿಸಿ ಕಾಯುವೆ,
ಕತ್ತಿ ~ಬಾಂಬು~ಚೂರಿ, ಮಾರಕಾಸ್ತ್ರ ನಾಶಗೊಳಿಸಿ
ಪ್ರೀತಿ~ಪ್ರೇಮ~ಅಹಿಂಸೆ ಸಿಡಿಸಿ
ಆತ್ಮೀಯ ಕಿಡಿಹಚ್ಚಿದ ಕನಸು
ಕ್ಷಣವೂ ಏರಲು ಹವಣಿಸುತಿಹುದು ।

ಅಹಂಕಾರದಲಿ ಬೀಗುತಾ..
ಸಜ್ಜನರಿಗೆ ” ಕಣ್ಣು ಕುರುಡು”
ದೇವನಿಗೆ ” ಬುದ್ಧಿ ಬರಡು”
ಎಂದು ಪೇಳುವ ಸಜ್ಜನ ಮೊಗ ಹೊತ್ತ ನಿರಹಂಕಾರಿಗೆ
ಪಶ್ಚಾತ್ತಾಪದ ಕೊರಗು ನೀಡಿ ನರಳಿಸುವ
ಕಾಯಕದ ಕನಸು ಮತ್ತೂ ಮತ್ತೂ….
ಮರುಕಳಿಸುತಿಹುದೆನ್ನ ಮನದೊಳು ॥

- Advertisement -

ನವ ಜನರ ಸೃಷ್ಟಿಸಿ,ಅವಲೋಕನ ನಡೆಸಿ
ಏಕ ಧರ್ಮದ ಅನೇಕ ಧರ್ಮಾನುಸಾರ ತಂದು
ಅಲ್ಲಾ,ಏಸು,ವರ್ಧಮಾನ,ರಾಮ,ಬುದ್ಧನನ್ನೆಲ್ಲಾ ಸ್ಮರಿಸಿ
ಕುಟಿಲ ಜಟಿಲತೆಯಲಿ ಸುಲಲಿತ ಸಲಿಲ ಹರಿಸಿ
ಮಿತ್ರತ್ವದ ಬೆಸುಗೆ ಬೆಸೆದ
ನಿರ್ಮಲತೆ ಸೃಷ್ಟಿಸಿದ ಕನಸು
ಮತ್ತದೇ,ಧ್ವನಿ ಸುರುಳಿಯಂತೆ ತಿರುಗುತ್ತಿದೆ ।

✍🏻 *ಸಮ್ಯಕ್ತ್. ಹೆಚ್.ಜೈನ್*
9632662818


ಆಕ್ರಂದನ

ಎಲ್ಲಿ ಅಡಗಿಹೆ ?
ನನ್ನ ಮಾತೃದೈವವೇ
ಮೊಗ್ಗಾದ ನನ್ನ ಬದುಕ
ತಿಪ್ಪೆ ಮೇಲೆಸೆದು
ನೀನೆಲ್ಲಿ ಓಡಿಹೋದೆ ???

- Advertisement -

‘ತಾಯಿ ದೇವರು,
ತಾಯಿ ಮಮತಾಮಯಿ’
ಎಂದುಲಿಯುತಿದೆ ಈ ಜಗ,
ಆ ಪವಿತ್ರ ತಾಯಿ ಹೃದಯ ವ
ನೀನೇಕೆ ಮರೆತೆ ಅಮ್ಮಾ ??

ಓ ಮಹಾತಾಯಿ
ನನ್ನ ಜೀವದುಸಿರೇ,
ನನ್ನ ಬದುಕ
ತಿಪ್ಪೆ ಮೇಲಿಟ್ಟು
ನೀನೇಕೆ ಓಡಿಹೋದೆ ??

ಯಾರ ಪ್ರೇಮದ
ಫಲವು ನಾನು ?
ಯಾರ ಕಾಮದ
ಪ್ರತಿಫಲವು ನಾನು ?
ತಂದೆ ಯಾರು ? ತಾಯಿ ಯಾರು ?
ಅಣ್ಣ ಯಾರು? ತಂಗಿ ಯಾರು?
ಎಂದು ನನಗೆ ಜನ್ಮದಿನ ?

ಮಕ್ಕಳಿಲ್ಲ ಎಂದು
ನಿಟ್ಟುಸಿರು ಬಿಟ್ಟವರು
ಸಾವಿರ, ಸಾವಿರ
ಅಮಾಯಕ ದಂಪತಿಗಳು
ಕಣ್ಣೀರಲಿ ಕೈತೊಳೆಯುತಾ
ಬದುಕಿದ್ದಾರೆ ಈ ಜಗದಲಿ,
ನಿನ್ನ ಕ್ಷಣದ ಅತಿಶಯಕೆ
ನಾನು ಬಲಿಪಶುವೇ ???

ಜಡೆ ತುಂಬಾ ಹೂ ಮುಡಿದು
ಕೆನ್ನೆಗೆ ಅರಿಶಿನ ಬಳಿದು
ಓಡಾಡುವ ನೂರಾರು
ಮಹಾಮಾತೆಯರ
ಕಂಗಳಲಿ ಅನುದಿನವೂ
ಅರಸುತ್ತಿದ್ದೇನೆ,
ನನ್ನ ಬದುಕ ತಿಪ್ಪೆ ಪಾಲು ಮಾಡಿದ
ನನ್ನ ಮಹತಾಯಿಯ ??

ಕ್ಷಣಿಕ ಸುಖಕೆ ಮನಸೋತು
ಪಾಪಿ ಸಮಾಜಕೆ ಬೆದರಿ
ನನ್ನ ಬದುಕ
ಬೀದಿಪಾಲು ಮಾಡಿದ
ಆ ನನ್ನ ಮಾತೃಹೃದಯಿಯ !!

ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು
ಮೊ:94496 80583,
63631 7236


ಮಣ್ಣ ಮಹಿಮೆ

ಕಲಿತೆನೆಂದು ಅಂದುಕೊಂಡವನೂ,
ಏನೂ ಕಲಿತಿಲ್ಲವೆಂದಂದು
ಕೊಂಡವನೂ
ಎಲ್ಲಾ ಉಳ್ಳವನೂ
ಏನೂ ಇಲ್ಲದವನೂ
ಸೇರಿದ್ದು ಮಾತ್ರಮಣ್ಣಿಗೇ..

ಎತ್ತರೆತ್ತರಕ್ಕೇರಿ*
ಮೇಲೆ ಹೋದವನೂ,
ಕೆಳಗೆ ನೆಲ ಕಂಡು
ಬಾಗಿ ಇದ್ದವನೂ
ಕೊಟ್ಟವನೂ
ಏನೂ ಕೊಡದವನೂ

ಸೇರಿದ್ದು ಮಾತ್ರ ಮಣ್ಣಿಗೇ..

ನಾನೂ ನೀನೂ
ಅವನೂ ಇವನೂ
ಅವರೂ,ಎಲ್ಲರೂ ಹಿಂದೆಯೋ, ಮುಂದೆಯೋ

ಸೇರುವುದು ಮಣ್ಣಿಗೇ….

ಮಣ್ಣ ಕಂಡು ಹಾರಿದವರೂ ಮಣ್ಣ ಮೇಲೆ
ಮಹಲು ಕಟ್ಟಿದವರೂ
ಕೂಡಿಟ್ಟವರೂ‌ ಕೂಡಿಡದವರೂ
ಸೇರಿದ್ದು ಮಾತ್ರಮಣ್ಣಿಗೇ..

ಮಣ್ಣ ಹಿರಿಮೆ ಕಂಡವರೂ ಮಣ್ಣು ಮಣ್ಣೆಂದು
ಕೀಳರಿಮೆ ಹೊಂದಿದವರೂ
ಬಾಳಿ ಬದುಕಿದವರೂ, ಶೂನ್ಯ ಕಂಡವರೂ
ಸೇರಿದ್ದು ಮಾತ್ರ
ಮಣ್ಣಿನೊಳಗೇ

ಎಲ್ಲಾ ಮಣ್ಣು ಮಸಿ ಎಂದವರೂ,
ಎಲ್ಲಾ ಮಣ್ಣಿಂದಲೇ‌ ಎಂದೆನ್ನುವವರೂ
ಮಣ್ಣು ಬೇಕು ಎನ್ನುವವರೂ
ಮಣ್ಣೇ ಬೇಡವೆನ್ನುವವರೂ
ಸೇರಿದ್ದು ಮಾತ್ರ ಮಣ್ಣಿಗೇ…

ಇದೇನು ಮಣ್ಣ ಮಹಿಮೆಯೋ?? ಭೂತಾಯಿಯ
ಮಹಿಮೆಯೋ
ಎಲ್ಲವೂ ನಿನ್ನಿಂದಲೆನ್ನುತ
ನಮಸ್ಕರಿಸುವೆನು ನಾ ಪುನಃ ಪುನಃ ಬಗ್ಗಿ ಮಣ್ಣಿಗೆ

ಶಾಂತಾ ಕುಂಟಿನಿ ಶಕುಂತಲಾ


ನವಿರಾದ ನನ್ನ ನವಿಲೇ

ಗಿರಿಯಲಾಡೊ ಚೆಲುವ ನವಿಲೇ
ಬಣ್ಣ ಬಣ್ಣ ಗರಿಯ ನವಿಲೆ//

ನಿನ್ನ ಅಂದ ಚಂದ
ನನ್ನ ಕಂದ ತಂದ
ತಿದ್ದಿ ತೀಡಿದ ಹುಬ್ಬಿನಂದ
ನವಿರಾದ ಕಣ್ಣಿನೆವೆಯ ಚೆಂದ//

ನಯನ ಮನೋಹರ
ನಿನ್ನ ನಡಿಗೆ ಶಿವ ಹರ
ಬಣ್ಣಬಣ್ಣದ ಚಿನ್ನದುಡಿಗೆ ಪರಿ
ಭೂಮಿಯಲಾಡು ಹಕ್ಕಿಬುಗುರಿ //

ಮನ್ಮಥನೊಲು ಅಂದ ಚಂದ
ರತಿಯ ಸೆಳೆಯೊ ಅಂತರಂಗ
ಕುಣಿವ ಹಾವಭಾವ ಕಣ್ಣಕಣ್ಣ
ನಯನ ಮನೋಹರ ಮೃದಂಗ//

ಒಂದನ್ನೊಂದು ಹೋಲುವಂಥ
ನೂರು ನಯನ ರತ್ನದಂಥ
ನಿನ್ನ ಮೈಯ ತುಂಬ ಕುಂತ
ಸಾವಿರಾರು ನವಿರ ಗರಿಯು ಸ್ವಂತ//

ಕಾಮನಬಿಲ್ಲಿನಂದ ಗರಿಯಲಿಟ್ಟು
ಬಾನ ಬೆಳಕ ಉಡಿಗೆ ತೊಟ್ಟು
ಹಲವು ಬಣ್ಣ ಒಡಲಲ್ಲಿ ಇಟ್ಟು
ಯಾರೂ ಅರಿಯರು ನಿನ್ನ ಅಂದದ ಗುಟ್ಟು//

ಅನ್ನಪೂರ್ಣ ಹಿರೇಮಠ
ಶಿಕ್ಷಕಿ, ಬೆಳಗಾವಿ

- Advertisement -
- Advertisement -

Latest News

ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮ ಆಂದೋಲನಕ್ಕೆ ಚಾಲನೆ

ಮೂಡಲಗಿ : ಕಳೆದ ಶನಿವಾರದಂದು ಗೋಸಬಾಳದ ಸರಕಾರಿ ಕೆ.ಹೆಚ್.ಪಿ.ಎಸ್ ಮತ್ತು ಉನ್ನತೀಕರಿಸಿದ ಪ್ರೌಢ ಶಾಲೆಯಲ್ಲಿ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ವತಿಯಿಂದ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group