spot_img
spot_img

ಕವನ: ಇವಳ ದೀಪಾವಳಿ

Must Read

spot_img
- Advertisement -

ಇವಳ ದೀಪಾವಳಿ

ಉಕ್ಕಿ ಬರುವ ನೆನಪುಗಳು
ನೆಲಕೆ ಅಪ್ಪಳಿಸಿ ;
ಗಾಯಗೊಂಡ ಹೃದಯ – ಉಷೆಯ ಕೆಂಗಿರಣದಲಿ – ಇವಳ ದೀಪಾವಳಿ

ಮಾಸಿದ ಜೋಳಿಗೆ,
ಬಗಲಲ್ಲಿ ಕಾದಿದೆ – ತಂಗುಳ ಹೋಳಿಗೆಗೆ ; ಮಕ್ಕಳ ಎಂಜಲು , ಹಪ್ಪಳ ಉಪ್ಪಿನಕಾಯಿ.

ರವಿಕೆ ಮುಚ್ಚದ ಬೆನ್ನಿನ
ಕೂಗಾಟ ಒಂದೇ…..
” ಮಾನ ಕದ್ದ ಕೈಗಳಿಗೆ “ಎಡೆ ಬಿಡದ ಹಿಡಿ ಶಾಪ !!
ತಾಗಿತೋ….ಇಲ್ಲೋ ಎಂಬ ಕನವರಿಕೆಯಲ್ಲಿ – ಇವಳ ದೀಪಾವಳಿ !!

- Advertisement -

ಸೂರಿಲ್ಲದ ಮನೆ
ಸಾವಿರ ಮುಳ್ಳಿನ ಹಾಸು
ಕಾಲ ಹೊದಿಸಿದೆ ” ಹೊದಿಕೆ ”
ಆಗಾಗ ಚುಚ್ಚಿ ನಂಜೇರುವ ಚಿತ್ತ
ತುಂಬಿ ಬಂದ ಕಣ್ಣಾಲಿಗಳಲ್ಲಿ – ಇವಳ ಕತ್ತಲ ದೀಪಾವಳಿ !!

ನೋವೇ ನಲಿವಾಗಿ
ಹಸಿವು ಸಂಕಟ ಅವಮಾನ ಮಾನ್ಯವಾಗಿ
ಬದುಕಿಗೆ ಬೆಸೆದ ರಟ್ಟೆಗಳು
ಮತ್ತೆ ಮಿಸುಕಾಡುತ್ತಾ – ಅದೇ ರಗಳೆಯ – ಇವಳ ದೀಪಾವಳಿ !!

ವಾಯ್.ವ್ಹಿ.ಕಂಬಾರ, ರಾಮದುರ್ಗ

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group