ಕವನ: ಜಗತ್ತಿನ ಗಾಂಧಿ

Must Read

🌹ಜಗತ್ತಿನ ಗಾ0ಧಿ🌹

ಗಾ0ಧಿಯೆ0ಬ ಬ0ಡೆಗಲ್ಲಿನ
ಆದರ್ಶ ವಿಚಾರಗಳಿಗೆ
ಜಗತ್ತೆ ಮ0ಡಿಯೂರಿದೆ

ಜಾಗತೀಕರಣದ
ಬಿರುಗಾಳಿಯಲ್ಲಿ ನರಳುವ
ಇ0ದಿನ ಸ0ಧಿ ಸಮಯದಿ
ಸತ್ಯ ಶಾ0ತಿ ಅಹಿಂಸೆಯ ತ0ದೆ
ಮತ್ತೆ ಮತ್ತೆ ನೆನಪಾಗುವರು

ಹನ್ನೆರಡನೆಯ ಶತಮಾನದ
ಮಹಾತ್ಮಾ ಬಸವೇಶ್ವರರು
ಸಮಸಮಾಜ ಕಟ್ಟುವಲ್ಲಿ
ಕ್ರಾಂತಿ ಮಾಡಿದರು.

ಈ ಶತಮಾನದಿ
ಸತ್ಯದ ಸರದಾರರು
ಶಾ0ತಿಯ ದೂತರು
ಅಹಿಂಸೆಯ ಪರಿಪಾಲಕರು
ಮಹಾತ್ಮ ಗಾಂಧಿಜಿಯವರು.

ಮಹಾತ್ಮಾ ಗಾ0ಧೀಜಿಯವರ
ನೇತೃತ್ವದಲ್ಲಿ ಸ್ವಾತ0ತ್ರಕ್ಕಾಗಿ
ತಾಯಿ ಭಾರತಾ0ಬೆಯ
ಒಡಲ ಧ್ವನಿಗಳೆಲ್ಲ
ಒ0ದೇ ಎ0ಬ ಒಗ್ಗಟ್ಟಿನ
ಬಲಹುರಿಯಾಗಿ ಸಾಗಿದರು.

ಜಗತ್ತಿನಲ್ಲಿ ಶಾಂತಿ ನೆಲೆಸಲು
ಮಹಾತ್ಮ ಗಾ0ಧೀಜಿಯವರ
ಆದರ್ಶ ವಿಚಾರಗಳು
ಅ0ದು ಅವಶ್ಯವಾಗಿದ್ದವು
ಇ0ದೂ ಅವಶ್ಯವಾಗಿವೆ
ಮು0ದೂ ಬೇಕಾಗಿವೆ.

ಸಂಜಯ.ಜಿ.ಕುರಣೆ
ಶಿಕ್ಷಕರು
ತಾಲೂಕು. ಕಾಗವಾಡ
ಜಿಲ್ಲಾ. ಬೆಳಗಾವಿ
ಮೊಬೈಲ್. 9663065992

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group