ರೆಕ್ಕೆಗಳಿವೆ
ನೀನು ಮೇಲೆ ಹಾರಲು
ಯಾರ ಅನುಮತಿ
ಕೇಳಬೇಕಿಲ್ಲ
ಗುಡುಗು ಸಿಡಿಲು
ಮಳೆ ಗಾಳಿ ಬಿಸಿಲು ಚಳಿ
ಕಷ್ಟ ಸಂಕಟ ನೋವು
ಹಸಿವು ವೇದನೆ ಯಾತನೆ
ಅಳುಕು ಅಂಜಿಕೆ ಏಕೆ?
ನಿನಗೆ ನಿನ್ನ ಕನಸಿನ
ರೆಕ್ಕೆಗಳಿವೆ
ಹಾರಿ ಬಿಡು ಆಗಸಕೆ
ನಿನ್ನ ಗುರಿ ಮುಟ್ಟುವ
ತನಕ ನಿಲ್ಲದಿರು
ಮುಗಿಲು ಯಾರ ಸೊತ್ತಲ್ಲ
ನಿನ್ನ ರೆಕ್ಕೆಯ ಶಕ್ತಿಯಲಿ
ನಿನಗೆ ನಂಬಿಕೆಯಿರಲಿ
________________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ

