ಕವನ

0
156

ವಚನಗಳ ತಿಳಿವು

ಶರಣರ ಸ್ವಾನುಭಾವದ
ಘನವು ಬೆರೆತು ಅರಳಿದ
ಮಿತವಾದ ಭಾಷೆ
ರಾಗತಾಳವಿಲ್ಲ ನಮ್ಮ
ಶರಣರ ವಚನಕೆ
ಅದೊಂದು ನಾದಾತೀತ ಯೋಗ

ಅದೊಂದು ಹಾಲತೊರೆ
ಭಾವಾನುಭಾವಗಳ ತೆರೆ
ಅದರಲ್ಲಿಹುದು ಬೆಲ್ಲದ
ಸಿಹಿಯ ಹೊನಲು
ಮಧುರ ಮಧುರ ಜ್ಞಾನದ
ಘಮಲು

ಶರಣರ ಅಂತಶ್ಚೇತನದ
ಅಚ್ಚಳಿಯದ ನುಡಿಗಳೇ
ವಚನದ ಕಿಡಿಗಳು
ಅದನು ಅರಿತವನೇ
ನಿಜವಾದ ಶರಣ
ಅಕ್ಷರ ಮಾಂತ್ರಿಕದ
ಮಹಾಶರಣ

ಅದರೊಳಗಿರುವ ಸ್ವರವೆಲ್ಲ
ಪರತತ್ವದ ಪರಾಕಾಷ್ಠೆ
ಭಕ್ತಿರಸ ಹೊರಹೊಮ್ಮುವ
ಪ್ರಸಾದಭರಿತ ಹೊನ್ನ ನುಡಿಗಳು
ವಚನಗಳ ತಿಳಿವಳಿಕೆಯೇ
ನಮ್ಮ ಬಾಳಿನ ಹೆಗ್ಗುರಿ

ಸುಧಾ ಪಾಟೀಲ
ಬೆಳಗಾವಿ