ಕಾಮೆಡಿ ಕ್ವೀನ್ ಭಾರತಿ ಸಿಂಗ್ ಡ್ರಗ್ಸ್ ಜಾಲದಲ್ಲಿ !

Must Read

ಖ್ಯಾತ ಕಾಮೆಡಿ ಕ್ವೀನ್ ಭಾರತಿ ಸಿಂಗ್ ಡ್ರಗ್ಸ್ ಪ್ರಕರಣದಲ್ಲಿ ನಾರ್ಕೋಟಿಕ್ಸ ಕಂಟ್ರೋಲ್ ಬೋರ್ಡ್ ನಿಂದ ಬಂಧಿತರಾಗಿದ್ದಾರೆ.

ಬೆಳಿಗ್ಗೆ ಏಕಾಏಕಿ ಭಾರತಿ ಅವರ ಮನೆಯ ಮೇಲೆ ದಾಳಿಮಾಡಿದ ಎನ್ ಸಿಬಿ ತಂಡಕ್ಕೆ ಭಾರತಿ ಮನೆಯಲ್ಲಿ ಗಾಂಜಾ ಸಿಕ್ಕಿದೆಯೆಂದು ಹೇಳಲಾಗುತ್ತಿದ್ದು ಭಾರತಿ ಹಾಗೂ ಅವರ ಪತಿ ಹರ್ಷ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ.

ಸೋನಿ ಟಿವಿಯ ಖ್ಯಾತ ಕಾಮೆಡಿ ಆ್ಯಂಕರ್ ಭಾರತಿ ಸಿಂಗ್ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದ್ದು ಇನ್ನೊಬ್ಬ ಕಾಮೆಡಿ ಕಿಂಗ್ ರಾಜು ಶ್ರೀವಾಸ್ತವ ಈ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಒಳ್ಳೆಯ ಜೋಕುಗಳಿಂದ ಜನರನ್ನು ನಗಿಸುವುದೇ ಒಂದು ತೆರನಾದ ನಶೆ ಇದ್ದಂತೆ ಇದರ ಮೇಲೆ ಬೇರೆ ನಶೆ ನಮಗೆ ಯಾಕೆ ಬೇಕು ? ಎಂದು ರಾಜು ಪ್ರಶ್ನೆ ಮಾಡಿದರು.

ಖ್ಯಾತ ಬಾಲಿವುಡ್ ನಟ ಸುಶಾಂತ ಸಿಂಗ್ ಅವರ ಆತ್ಮಹತ್ಯೆ ಯ ಪ್ರಕರಣದ ತನಿಖೆಗೆ ಹೊರಟ ತನಿಖಾ ತಂಡಕ್ಕೆ ಇದರ ಹಿಂದೆ ಡ್ರಗ್ಸ್ ಜಾಲ ಇದ್ದದ್ದು ಬೆಳಕಿಗೆ ಬಂದಿತ್ತು. ಈ ಜಾಲದಲ್ಲಿ ರಿಯಾ ಚಕ್ರವರ್ತಿ, ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ, ಅಲ್ಲದೆ ಇನ್ನೂ ಹಲವು ಬಾಲಿವುಡ್ ನಟನಟಿಯರು ಸಿಲುಕಿದ್ದು ಬೆಳಕಿಗೆ ಬಂದಿದೆ.

ಇನ್ನೂ ತನಿಖೆ ನಡೆಯುತ್ತಿದ್ದು ಈಗ ಟಿವಿ ಕಲಾಕಾರರತ್ತಲೂ ಡ್ರಗ್ಸ್ ಬೆಳಕು ಬಿದ್ದಿದ್ದು ಇಡೀ ಕಲಾವಿದ ಸಮೂಹವನ್ನೇ ಬೆಚ್ಚಿ ಬೀಳಿಸಿದೆ.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group