ಎಂದರೆ ಇಂದಿನ ದ್ವೈತಾದ್ವೈತದ ಭಿನ್ನಾಭಿಪ್ರಾಯ ಎನ್ನಬಹುದಷ್ಟೆ.
ತತ್ವಗಳನ್ನು ವಾದ ವಿವಾದದಿಂದ ಬೆಳೆಸಿಕೊಂಡು ಮುಂದೆ ನಡೆದ ಧರ್ಮ ಇಂದು ಅಧರ್ಮದಕಡೆಗೆ ಹೆಜ್ಜೆ ಹಾಕಿರೋದೆ ಕುರುಡು ಜಗತ್ತಿಗೆ ಕಾರಣವಾಗುತ್ತಿದೆ. ಇಷ್ಟಕ್ಕೂ ನಾವು ಇಲ್ಲಿ ಸಾಧನೆ ಮಾಡಿರೋದು ಯಾವುದರಿಂದ ಎಂದಾಗ ಹಿಂದಿನ ಮಹಾತ್ಮರ ಅನುಭವದ ಸತ್ಯವನ್ನು ಪ್ರಚಾರ ಮಾಡುವುದೇ ಸಾಧನೆ.
ಇದನ್ನು ಕೇಳಿಕೊಂಡು ಸಂಸಾರ ನಡೆಸೋದೆ ಸಾಧನೆ. ಈ ಸಾಧಕರಿಗೆ ಸಹಕಾರ ನೀಡಿರುವುದೆ ಸಾಧನೆ. ಇಲ್ಲಿ ನನ್ನದೇನಿದೆ? ಎಲ್ಲಾ ಪರಮಾತ್ಮ ನ ನಡೆಸಿರೋವಾಗ ನಾನ್ಯಾರು? ಈ ಪ್ರಶ್ನೆಗೆ ಉತ್ತರ ಹುಡುಕಲಾಗದೆ ಹೊರಗಿನ ಜಗತ್ತಿಗೆ ಹಿಂದಿನ ಪುರಾಣ,ಇತಿಹಾಸ ವನ್ನು ನಮ್ಮ ಅರಿವಿಗೆ ಬರದಿದ್ದರೂ ಇದೇ ಸತ್ಯವೆಂದು ವಾದ ವಿವಾದ ಮಾಡಿಕೊಂಡು,ಜನರಲ್ಲಿ ಭಿನ್ನಾಭಿಪ್ರಾಯ ಹೆಚ್ಚಿಸಿಕೊಂಡು ರಾಜಕೀಯಕ್ಕೆ ಸಹಕರಿಸಿಕೊಂಡು ಹೋದಾಗ ಇಲ್ಲಿ ಬೆಳೆದ ರಾಜಕೀಯವನ್ನು ಎದುರಿಸೋ ಶಕ್ತಿ ನಮ್ಮೊಳಗಿನ ಸತ್ಯಕ್ಕೆ ಇಲ್ಲವಾಯಿತು. ಸತ್ಯ ಹಿಂದುಳಿದ ಕಾರಣ ಧರ್ಮವೂ ಕುಂಟುತ್ತಾ ನಡೆಯಿತು.
ಕತ್ತಲ ಜಗತ್ತಿನಲ್ಲಿ ಕಂಡದ್ದಷ್ಟೇ ಸತ್ಯ ಬೌತಿಕ ಹಾಗು ಆಧ್ಯಾತ್ಮಿಕ ವಿಚಾರಗಳ ಘರ್ಷಣೆ ಯಿಂದ ಈಗ ಸತ್ಯಾಸತ್ಯತೆಗಳು ಅತಂತ್ರಸ್ಥಿತಿಗೆ ತಲುಪಿದೆ. ಇವೆರಡೂ ಭೂಮಿಯ ಮೇಲಿನ ಮನುಕುಲಕ್ಕೆ ಸನ್ಮಾರ್ಗ ತೋರಿಸದೆ ಮಾನವನ ಜೀವನದಲ್ಲಿ ಮಧ್ಯೆ ಪ್ರವೇಶಿಸಿ ತಮ್ಮದೇ ಆದ ಕತ್ತಲ ಜಗತ್ತನ್ನು ಸೃಷ್ಟಿಸಿ ರಾಜಕೀಯಕ್ಕೆ ಸಹಕರಿಸುತ್ತಾ ಈಗ ಭೂಮಿಯನ್ನೇ ಅಗೆದು ತಮ್ಮ ಸ್ವಾರ್ಥ ಅಹಂಕಾರದ ಜೀವನಕ್ಕಾಗಿ ಗಣಿದೊರೆಗಳು ಜನರನ್ನು ಆಳುತ್ತಿದ್ದಾರೆ.
ಆದರೆ, ಭೂ ತಾಯಿಯ ಸೇವೆ ಮಾಡುವ ಭೂಮಿ ಪುತ್ರರು ಬಡವರಾಗಿ ನಿಂತು ಗಣಿದಣಿಗಳ ಸೇವಕರಾಗಿದ್ದರೆ ಇಲ್ಲಿ ಯಾರು ದೊಡ್ಡವರು? ದಡ್ಡರು? ಒಟ್ಟಿನಲ್ಲಿ ತತ್ವಜ್ಞಾನದ ಒಳಗಿನ ತಿರುಳನ್ನು ತಿಳಿಯೋ ಮೊದಲೇ ಅಧಿಕಾರ , ಹಣ,ಸ್ಥಾನಮಾನ ಸಿಕ್ಕಿದರೆ ಆಗೋದೆ ಹೀಗೆ. ಅರ್ಧಸತ್ಯದ ತತ್ವಜ್ಞಾನದಿಂದ ಮೂಲ ಬೆಳಕಿನಡೆಗೆ ಹೋಗುವುದು ಕಷ್ಟವೆ.
ದ್ವೈತಾದ್ವೈತದ ಭಿನ್ನಾಭಿಪ್ರಾಯ ಇಂದಿಗೂ ಜನಸಾಮಾನ್ಯರ ದ್ವೇಷ, ಅಸೂಯೆ ವಾದ ವಿವಾದಗಳಿಗೆ ಕಾರಣವಾಗುತ್ತಿರುವುದು ವಿಪರ್ಯಾಸವೆಂದರೆ ತಪ್ಪಿಲ್ಲ. ಜನಸಾಮಾನ್ಯರಿಗಿರುವ ಸ್ವತಂತ್ರ ಜ್ಞಾನ, ಸಾಮಾನ್ಯಜ್ಞಾನ ವಿಶೇಷವಾಗಿ ತಿಳಿದವರಿಗೆ ಅರ್ಥ ವಾಗದೆ ಅವರನ್ನು ಅವಲಂಬಿಸಿಕೊಂಡು ಕುರುಡುಗತ್ತಲಲ್ಲಿದ್ದರೂ ಪೂರ್ಣ ಕತ್ತಲಕಡೆಗೆ ನಡೆಯಲಾಗದೆ, ಹೊರಗಿನಬೆಳೆಕನ್ನೂ ಸವಿಯಲಾಗದೆ ಜೀವ ಮಧ್ಯೆ ನಿಂತಿದೆ.
ಇದೇ ಅಧರ್ಮಕ್ಕೆ ಸಹಕರಿಸುತ್ತಿದ್ದರೂ ಇದೇ ಧರ್ಮ ಎಂದರೆ ತಪ್ಪು ಎಲ್ಲಿದೆ? ರಾಜಕೀಯದಿಂದ ತತ್ವ ದರ್ಶನ ಆಗೋದಿಲ್ಲ.
ರಾಜಯೋಗದಿಂದ ಆಗುತ್ತದೆ. ಹಿಂದಿನ ಮಹಾತ್ಮರುಗಳು ಅಧಿಕಾರದಿಂದ ತತ್ವ ಪ್ರಚಾರ ಮಾಡಿರಲಿಲ್ಲ. ಅಹಂಕಾರ, ಸ್ವಾರ್ಥ ದ. ರಾಜಕೀಯದಿಂದಲೂ ಸಾಧ್ಯವಾಗಿರಲಿಲ್ಲ. ಕೊನೆಯಲ್ಲಿ ಎಲ್ಲಾ ತ್ಯಜಿಸಿದ ಮೇಲಷ್ಟೇ ಪರಮಾತ್ಮನನ್ನು ಅರಿಯಲು ಸಾಧ್ಯವಾಗಿರುವಾಗ ನಾವೀಗ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯಪ್ರಜೆಗಳಾಗಿದ್ದು ದೇಶದ ಧರ್ಮ,ಸಂಸ್ಕೃತಿ, ಭಾಷೆಯ ಅಳಿವು ಉಳಿವಿಗಾಗಿ ಪ್ರಜೆಗಳನ್ನು ರಾಜಕೀಯವಾಗಿ ಆಳಿದರೆ ಅರ್ಥ ಆಗುವುದೆ?
ಹಣದಿಂದ, ಅಧಿಕಾರದಿಂದ ತತ್ವದ ಮೂಲ ತಿಳಿಯಬಹುದೆ? ತಂತ್ರಜ್ಞಾನದ ಅಡಿಯಲ್ಲಿ ನುಸುಳಿಯಿರುವ ತತ್ವವನ್ನು ತಂತ್ರದಿಂದ ನಡೆಸಬಹುದು. ಸ್ವತಂತ್ರ ವಾಗಿ ತಿಳಿಯಲಾಗದೆ ಇನ್ನೂ ಆಳಕ್ಕೆ ಇಳಿದಂತೆಲ್ಲಾ ಮನುಕುಲಕ್ಕೆ ಕಾಣದ ಜಗತ್ತಿಗೆ ಹೋದರೆ ಮೇಲೆ ನಿಂತು ರಾಜಕೀಯ ನಡೆಸೋ ತಂತ್ರಜ್ಞಾನ ಯಾವತ್ತೂ ಮಧ್ಯವರ್ತಿಗಳ ವಶದಲ್ಲಿ ಮಧ್ಯೆ ನಿಂತು ಆಳೋದೆ ಸರಿ. ಸತ್ಯವನ್ನು ಹೊರಗೆ ತೋರಿಸುವುದು ಕಷ್ಟ. ಅಸತ್ಯವೆ ಬೆಳೆದಂತೆ ಸತ್ಯ ಹಿಂದುಳಿದು ಹಿಂಸೆ ಅನುಭವಿಸುತ್ತದೆ.
ಹಿಂಸೆಗೂ ಇತಿಮಿತಿ ಇರುತ್ತದೆ. ಹೆಚ್ಚಾದಾಗ ಅದೇ ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ. ಈ ಕಾರಣಕ್ಕಾಗಿಯೇ ಹಿಂದಿನ ಎಷ್ಟೋ ಸ್ತ್ರೀ ಶಕ್ತಿ ಸಿಡಿದು ಭೂಮಿಯಲ್ಲಿ ಯುದ್ದ ಗಳಾಗಿರೋದು. ಇದೂ ಕೂಡ ಪ್ರಳಯವೆ. ಕೇವಲ ಜಲಪ್ರಳಯದಿಂದ ಮಾನವನ ಜೀವ ಹೋಗೋದಿಲ್ಲ. ಅದಕ್ಕಿಂತ ದೊಡ್ಡದಾದ ಅಜ್ಞಾನದ ರಾಜಕೀಯತೆಯನ್ನು ವಿರೋಧಿಸಿ ನಡೆಯುವ ಹೋರಾಟದಿಂದ ಎಷ್ಟೋ ಅಮಾಯಕರ ಜೀವ ಬಲಿಯಾಗುತ್ತದೆ.
ಜೀವ ಹೋದರೂ ಮತ್ತೆ ಹುಟ್ಟಬಹುದು.ಆತ್ಮಹತ್ಯೆಗೆ ಜನ್ಮವಿದೆಯೆ? ಈ ವಿಚಾರವಾಗಿ ಯಾರೂ ಚರ್ಚೆ ಮಾಡದೆ ಜನರನ್ನು ಅಜ್ಞಾನದ ಕತ್ತಲಿನಲ್ಲಿ ನಡೆಸುತ್ತಾ ತಮ್ಮ ತಮ್ಮ ಅಧಿಕಾರಕ್ಕಾಗಿ ಹೋರಾಡಿದರೆ ಎಲ್ಲಾ ಒಮ್ಮೆ ಹೋಗೋರೆ. ಹೋದ ಮೇಲಿನ ಜಗತ್ತನ್ನು ಯಾರೂ ವಿವರಿಸಲಾಗದ ಕಾರಣ ಭೂಮಿಯಲ್ಲಿ ಹಿಂಸೆ,ನೋವು,ಅನ್ಯಾಯ, ಅಧರ್ಮ, ಅಸತ್ಯ, ಭ್ರಷ್ಟಾಚಾರವೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ನಮ್ಮಲ್ಲಿರುವ ಅರ್ಧಸತ್ಯದ ತತ್ವಜ್ಞಾನದ ಭಿನ್ನಾಭಿಪ್ರಾಯ. ಇದರಿಂದಾಗಿ ಲಾಭ ಯಾರಿಗೆ? ನಷ್ಟ ಯಾರಿಗೆ?
ಸಂಸಾರದೊಳಗಿದ್ದವರು ಸಂನ್ಯಾಸಿಗಳಿಗೆ ಸಹಕರಿಸಿ ಧರ್ಮ
ಉಳಿಸಬಹುದು.ಸಂನ್ಯಾಸಿಗಳು ಸಂಸಾರದೊಳಗೆ ಬಂದು ಧರ್ಮ ರಕ್ಷಣೆಗೆ ಸಹಕರಿಸಲು ಸಾಧ್ಯವಿಲ್ಲ. ಆದರೆ ಇಬ್ಬರೂ ಒಂದೆ ಭೂಮಿ, ದೇಶ, ರಾಜ್ಯ, ಗ್ರಾಮದವರೆಗೆ ನಡೆಯಬಹುದು ಒಂದೇ ಮನೆ,ಮನಸ್ಸಿನೊಳಗೆ ನಡೆಯಲಾಗದು.
ಇದೇ ಕಾರಣಕ್ಕೆ ಪ್ರತಿಯೊಬ್ಬರಲ್ಲಿಯೂ ಭಿನ್ನಾಭಿಪ್ರಾಯ ಹೆಚ್ಚಾಗಿ ಗೊಂದಲ ದ ಗೂಡಾಗಿರೋದು. ಅವರವರ ಸತ್ಯಕ್ಕೆ ಅವರೆ ನಾಯಕರು. ಇದು ಒಳಗಿದೆ. ಹೊರಗಿಲ್ಲವಲ್ಲ.ಸತ್ಯವೆ ದೇವರು. ಸತ್ಯಯುಗ ಪ್ರಾರಂಭವಾಗುವುದೆಂದು?
ಸತ್ಯ ಸತ್ಯವೇ ಇದನ್ನು ಎಷ್ಟೇ ತುಳಿದರೂ ಸಾಯೋದಿಲ್ಲ.ಒಟ್ಟಿನಲ್ಲಿ ಇಲ್ಲಿ ನಾವೆಲ್ಲರೂ ಒಂದೇ ದೇಶದೊಳಗಿದ್ದರೂ ಅದರ ಅರಿವಿರೋದು ಕೆಲವರಿಗೆ ಮಾತ್ರ.ಹಾಗೆಯೇ ಅದ್ವೈತ ದ್ವೈತ ಸಿದ್ದಾಂತಗಳೂ ನಡೆದಿದೆ.ವಿಶಿಷ್ಟಾದ್ವೈತ ಹಿಂದುಳಿದಿದೆ.
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು