- Advertisement -
ಚಾರುಹಾಸದ ರಾಣಿಗಾಗಿ ಬೀದಿಯಲ್ಲಿ
ಸುಮವನ್ನು ಹಾಸುವೆನು ಸಖಿ
ಜಾರುತಿರುವ ಹಿಮಮಣಿಯ ಪೋಣಿಸಿ
ಕೊರಳಿಗೆ ಹಾಕುವೆನು ಸಖಿ
ಅರಳಿದ ಪುಷ್ಪಗಳ ಸುಗಂಧವನು
ಅರಸಿ ಆರಿಸಿ ತರುವೆನು
ಹರಳಿನ ಬೆಟ್ಟದಲಿ ಚೆಂಬವಳವನು
ಶೋಧಿಸಿ ತರುವೆನು ಸಖಿ
- Advertisement -
ಕನ್ನಿಕೆಯ ಚುಬುಕಕ್ಕೆ ಢಾಳಕಾಂತಿಯ
ಗೌರವರ್ಣವು ನೀಡುತಿದೆ
ಚೆನ್ನಿಕೆಯ ಹೆರಳಿಗೆ ಮುಡಿಸಲು ಮಲ್ಲಿಗೆ
ಮಾಲೆಯ ಇಡುವೆನು ಸಖಿ
ದ್ಯುಮಣಿಯ ಬೆಳಕನ್ನು ಗೊತ್ತಿಲ್ಲದೆ
ಕದ್ದಿರುವ ಸಾದ್ವಿಶಿರೋಮಣಿ
ರಮಣನನು ನೋಟದಲ್ಲಿ ಗೆದ್ದಿರುವ
ಚೆಲುವೆಯ ಅಪ್ಪುವೆನು ಸಖಿ
ತೋಳಿನಲಿ ಬಲವಾಗಿ ಹಿಡಿದಿಟ್ಟು
ಕೋಮಲೆಯ ಚುಂಬಿಸುವೆ
ಪೌಳಿಯಲಿ ಅಭಿನವನ ಆಗಮನಕೆ
ಅಹರ್ನಿಶಿ ಕಾಯುವೆನು ಸಖಿ
- Advertisement -
ಶಂಕರಾನಂದ ಹೆಬ್ಬಾಳ