spot_img
spot_img

ಗಡಿ ಕಾವಲುಗಾರನನ್ನು ಕಳೆದುಕೊಂಡ ನಮ್ಮ ಬೆಳಗಾವಿ

Must Read

- Advertisement -

ಬೆಳಗಾವಿಯ ಕನ್ನಡಪರ ಹೋರಾಟಗಾರರು, ರಾಜ್ಯೋತ್ಸವ ಪ್ರಶಸ್ತಿ ವಿಜೇತರು, ಬೆಳಗಾವಿಯ ಸಗಟು ಮಾರಾಟ ಸಂಸ್ಥೆ ಜನತಾ ಬಜಾರ್ ನ ಅಧ್ಯಕ್ಷರು, ವಿವಿಧ ಕನ್ನಡಪರ ಸಂಘಟನೆಗಳ ಗೌರವಾಧ್ಯಕ್ಷರು, ಗಡಿ ಸಲಹಾ ಸಮಿತಿಯ ಸದಸ್ಯರು, ಸದಾ ಕನ್ನಡ ಕೆಲಸಗಳಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಸಿದ್ದನಗೌಡ ಪಾಟೀಲ್ ರವರು ಇಂದು ಮಧ್ಯಾಹ್ನ ನಿಧನರಾದರು ಎಂದು ತಿಳಿಸಲು ತೀವ್ರ ಸಂತಾಪ ಎನಿಸುತ್ತದೆ.

ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸರಿಗೆ ಮಲ್ಲಾಪುರ ಗ್ರಾಮದವರಾಗಿದ್ದು ಅವರು 18/04/1934 ರಂದು ಕೃಷಿ ಕುಟುಂಬದಲ್ಲಿ ಜನಿಸಿದರು. ಇವರು ಕಳೆದ ಐವತ್ತು ವರ್ಷಗಳ ಹಿಂದೆಯೇ ಬೆಳಗಾವಿಗೆ ಬಂದು ನೆಲೆಸಿದ್ದು ಇವರು ಬೆಳಗಾವಿಯಲ್ಲಿ ವಿವಿಧ ಕನ್ನಡಪರ ಕೆಲಸಗಳಲ್ಲಿ ತೊಡಗಿ ಬೆಳಗಾವಿಯಲ್ಲಿ 1952 ರಿಂದ ಸ್ಥಳೀಯ ರಾಜಕಾರಣದಲ್ಲಿ ಗುರುತಿಸಿಕೊಂಡು ಕನ್ನಡಪರ ಕೆಲಸಗಳಲ್ಲಿ ತೊಡಗಿಸಿಕೊಂಡರು.

ಪ್ರಾಂತಗಳ ವಿಂಗಡಣೆಯಲ್ಲಿ ಬಳ್ಳಾರಿಯನ್ನು ಆಂಧ್ರಕ್ಕೆ ಸೇರಿಸಿದ ಸಂದರ್ಭದಲ್ಲಿ ಪ್ರಧಾನಿ ನೆಹರು ಬೆಳಗಾವಿಗೆ ಆಗಮಿಸಿದ್ದಾಗ ಅವರಿಗೆ ಕಪ್ಪು ಬಾವುಟ ತೋರಿಸಿ ವಿರೋಧ ವ್ಯಕ್ತಪಡಿಸಿದ್ದರು. ಇದು ಅವರ ಕನ್ನಡ ಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.

- Advertisement -

ನಂತರದ ದಿನಗಳಲ್ಲಿ ಕನ್ನಡಪರ ಹೋರಾಟದಲ್ಲಿ ತೊಡಗಿಸಿಕೊಂಡವರು ಸಂಪೂರ್ಣವಾಗಿ ಮರಾಠಿಗರ ಹಿಡಿತದಲ್ಲಿದ್ದ ಬೆಳಗಾವಿ ಮಹಾನಗರಪಾಲಿಕೆಯ ಮೇಲೆ ಮೊಟ್ಟಮೊದಲ ಬಾರಿಗೆ ಕನ್ನಡದ ಮಹಾಪೌರರಾಗಿ ಮಹಾನಗರಪಾಲಿಕೆಯ ಮೊದಲ ಕನ್ನಡದ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಂತರದಿಂದ ಗಡಿಯ ವಿಷಯ,ಭಾಷಾ ವಿವಾದ ಯಾವುದೇ ಇರಲಿ ಅಲ್ಲಿ ಸಿದ್ದನಗೌಡರ ನೇತೃತ್ವ ಇದ್ದೇ ಇರುತ್ತಿತ್ತು. ಇವರ ಕನ್ನಡಪರ ಹೋರಾಟಕ್ಕೆ ಅನೇಕ ಸಂಘ-ಸಂಸ್ಥೆಗಳು ಸಹಕಾರ ರತ್ನ, ಕಾಯಕರತ್ನ, ಶ್ರೇಷ್ಠ ಸಹಕಾರಿ ಪ್ರಶಸ್ತಿ, ಗಡಿ ತಿಲಕ ಪ್ರಶಸ್ತಿ, ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿವೆ.

2008ರಲ್ಲಿ ಕರ್ನಾಟಕ ಸರ್ಕಾರ ಕರ್ನಾಟಕ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಹ ನೀಡಿ ಸತ್ಕರಿಸಿದೆ. ವಯಸ್ಸಾಗಿದ್ದರೂ ಸಹ ವಿರಮಿಸದ ಸಿದ್ದನಗೌಡರು, ಕನ್ನಡ ರಾಜ್ಯೋತ್ಸವ, ಕನ್ನಡ ಸಾಹಿತ್ಯ ಸಮ್ಮೇಳನಗಳು, ಕವಿಗೋಷ್ಠಿ, ಪುಸ್ತಕ ಬಿಡುಗಡೆ ಸಮಾರಂಭ, ನಾಡಹಬ್ಬ ಸಭೆ, ವಿವಿಧ ಕನ್ನಡ ನಿಯೋಗಗಳ ನೇತೃತ್ವ, ಎಲ್ಲಾ ಕೆಲಸಗಳಲ್ಲಿ ಮುಂಚೂಣಿಯಲ್ಲಿದ್ದು ಅವುಗಳನ್ನು ಸಾಂಗವಾಗಿ ನೆರವೇರಿಸಿ ಕೊಡುತ್ತಿದ್ದರು. ಇಂತಹ ಅಮೂಲ್ಯ ಹೋರಾಟಗಾರ ಒಬ್ಬರನ್ನು ಕಳೆದುಕೊಂಡ ಬೆಳಗಾವಿ ನಾಡು ಒಬ್ಬ ಶ್ರೇಷ್ಠ ನಾಯಕನನ್ನೇ ಕಳೆದುಕೊಂಡಂತೆ ಭಾಸವಾಗುತ್ತಿದೆ. ಇಂದು ಗಡಿಭಾಗ ತನ್ನ ಗಡಿ ಕಾವಲುಗಾರನನ್ನೇ ಕಳೆದುಕೊಂಡಂತಾಗಿದೆ.

- Advertisement -

ಶಿವಾನಂದ ತಲ್ಲೂರ
ಸಹಶಿಕ್ಷಕರು ಮಲ್ಲಾಪುರ ( ಬೆಳಗಾವಿ).

- Advertisement -

2 COMMENTS

  1. Very sad news to us and very very sad our belgauma. And Karnataka.bgm maha NayakanigeSalutations to the great hero of the Bigm.

Comments are closed.

- Advertisement -

Latest News

ಹಿಂದಿ ಭಾಷಣ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಹುನಗುಂದ : ಈಚೆಗೆ ಬಾಗಲಕೋಟೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಿಂದಿ ಭಾಷಣ ಸ್ಪರ್ಧೆಯಲ್ಲಿ ಸರ್ಕಾರಿ ಆದರ್ಶ ವಿದ್ಯಾಲಯದ ಮೊಹಮ್ಮದ್ ರಿಹಾನ್ ಇಟಗಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!
Join WhatsApp Group