Homeಕವನಗಣರಾಜ್ಯೋತ್ಸವದ ನಿಮಿತ್ತ ಸಂವಿಧಾನ ಸ್ವರೂಪ ಕುರಿತು ನೀಳ್ಗವನ...

ಗಣರಾಜ್ಯೋತ್ಸವದ ನಿಮಿತ್ತ ಸಂವಿಧಾನ ಸ್ವರೂಪ ಕುರಿತು ನೀಳ್ಗವನ…

spot_img

🌺☘️🌺☘️🌺☘️🌺☘️🌺☘️🌺☘️

ಭಾರತಾಂಬೆಗೆ ಹೊನ್ನ ಕಿರೀಟವಿದು
ಸರಳ ಸಂವಿಧಾನ ನಮ್ಮ ಸಂವಿಧಾನ

ಪೀಠಿಕೆಯ ಪರಿಧಿಯಲ್ಲಿ ಪಲ್ಲವಿಸಿದೆ
ಸಾರ್ವಭೌಮತೆ,ಸಮಾಜವಾದಿ,ಜಾತ್ಯಾತೀತತೆ,
ಗಣತಂತ್ರ,ನ್ಯಾಯ, ಸ್ವಾತಂತ್ರ್ಯ, ಸಮಾನತೆ
ಬ್ರಾತೃತ್ವದ ದುಂಧುಭಿ
ಜೀವದಾಯಿನಿ ಇದು ದಾಸ್ಯದ ಸಂಕೋಲೆಗೆ
ಈ ಸಂವಿಧಾನ ನಮಗೆ ಸುವಿಧಾನ..

ಲಿಖಿತವೂ, ದೀರ್ಘವೂ, ಭಾರತಿಯರಿಗಿದು ಮಾರ್ಗವು…
ಮನದಲ್ಲಿ ಮಡುಗಟ್ಟಿದ ಅಸಮಾನತೆಯ ಮೌನಕ್ಕೆ ,ಸಮಾನತೆಯ ಬೆಳಕ ಚೆಲ್ಲುವ
ನವ್ಯ ಚಿಂತನೆಗಳ ಸಿರಿದೀಪವು…
ಶತ- ಶತಮಾನಗಳ ದಾಸ್ಯದ ಕಾರ್ಗತ್ತಲೆಯ
ಅಳಿಸಿ
ದಿವ್ಯಚೇತನದ ಮಾನವೀಯತೆಯನ್ನು ಎಲ್ಲರಲ್ಲೂ ಬೆಳೆಸಿ
ಭವ್ಯ ಭಾರತಕ್ಕಿದುವೆ ಭದ್ರ ಬುನಾದಿ
ಈ ಸಂವಿಧಾನ ನಮಗೆ ಸುವಿಧಾನ…

ಪವಿತ್ರ ಪದಪುಟಗಳ ಸ್ವೀಕಾರವು 1949 ರಂದು
ಜಾರಿಗೆ ಬಂದಿತು ಸುಂದರ ಕೈ ಬರಹದೊಡನೆ
1950 ನೆಯ 26 ರ ಜನೇವರಿಯಂದು…
ಸಂವಿಧಾನವಿದು ಸುಂದರ ನಕ್ಷತ್ರಗಳ ಗುಂಪು
ಹಿಂದಿ,ಅಂಗ್ಲದಲ್ಲಿ ಕಾನೂನು ಪರಿಣಯದ ಕಂಪು…
ಇದರ ಮೂಲ ಪ್ರತಿಗಳೋ ಹೀಲಿಯಮ್ ರಕ್ಷಾಕವಚದಲ್ಲಿ…
ನೆಲೆಸಿಹುದಿದು ಇಂದಿಗೂ ಸಂಸತ್ ಭವನ ಗ್ರಂಥಾಲಯದಲ್ಲಿ…
ಎರವಲು ಅಂಶಗಳ ಪವಿತ್ರ ಸಂಗಮವಿದು
ಶ್ರೇಷ್ಠವಿದು ಪರಮಶ್ರೇಷ್ಠವಿಹುದು
ನಮ್ಮ ಸಂವಿಧಾನ ನಮಗೆ ಸುವಿಧಾನ…

ದಾಸ್ಯದ ಸಂಕೋಲೆಯಲಿ ನೆಲೆ ಅರಸುತಿರುವಾಗ …
ಮಿಂಚು ಹುಳುವಿನ ಮಿಣುಕಿನ ಅಂಚುಗಳು
ಈ ವಿಧಿಗಳು,ಭಾಗಗಳು,ಅನುಚ್ಚೇದ ತಿದ್ದುಪಡಿಗಳು…
ಮೂರು ಅಂಗಗಳ ಪರಿಮಿತಿ ಪರಿಧಿಯಲಿ
ಹಕ್ಕು ಕರ್ತವ್ಯಗಳ ಸಚೇತನ ವಿವರಣೆ
ಕೂದಲೆಳೆಯಷ್ಟು ಕೊಂಕಿಲ್ಲ ,ಕೊಸರಿಲ್ಲ
ಜವಾಬ್ದಾರಿಗಳ ವಿವರಣೆಗೆ….
ನಮ್ಮ ಸಂವಿಧಾನ ನಮಗೆ ಸುವಿಧಾನ…

ವಿಧಿಗಳ ಸರಪಣೆ ಹೊಸ ಹೊಸ ಜೋಡಣೆ
ಸರ್ವರಿಗೂ ಸಮವೆನಿಪ ಸುಧೀರ್ಘ ವಿವರಣೆ
ಅನಿರ್ವಾಹ ಬಂಧವಿದು ದೇಶ ನಡೆಸುವ ದಾರಿಗೆ
ಉಪಮೆ ಉತ್ಪ್ರೇಕ್ಷೆಗಳಿಲ್ಲ ಇದಕೆ
ಹೂವ ಜೀವಂತಿಕೆಯಲಿ ಹರಿದಾಡುವ
ದೇಶದ ದಿಕ್ಸೂಚಿ…
ಈ ಸಂವಿಧಾನ ನಮಗೆ ಸುವಿಧಾನ…

ಬಹುವಿಧ ಅಧ್ಯಯನ, ಸುಜ್ಞಾನಿಗಳ ಅನುನಯನ
ಸಂವಿಧಾನ ಶಿಲ್ಪಿಯ ಆಶಯ ಹೂರಣ
ಮಾನವೀಯತೆಯ ಜ್ಞಾನದ ಬೆಳಕು
ಹೂವಂತ ಪುಟಗಳಲ್ಲಿ ಝಗಮಗಿಸುತಿಹುದು,
ಅಸಮಾನತೆಯ ಕಾರ್ಗತ್ತಲು ಮೆಲ್ಲಗೆ ಮರೆಯಾಗಲು
ಸಮಾನತೆಯ ಬೆಳದಿಂಗಳು ಪಲ್ಲವಿಸುತಿಹುದು
ಸಂವಿಧಾನವಿದು ಮೂಲಮಂತ್ರ ,
ಮೂಲಚೇತನ
ಭಾರತದ ಶ್ರೇಷ್ಠ ಅಡಳಿತಕೆ…
ನಮ್ಮ ಸಂವಿಧಾನ ಇದು ನಮಗೆ ಸುವಿಧಾನ…


ಶ್ರೀಮತಿ ಮೀನಾಕ್ಷಿ ಸೂಡಿ
ಚೆನ್ನಮ್ಮನಕಿತ್ತೂರು
ಬೆಳಗಾವಿ ಜಿಲ್ಲೆ…
ಫೋನ್ 8073946046

RELATED ARTICLES

1 COMMENT

Comments are closed.

Most Popular

error: Content is protected !!
Join WhatsApp Group